Israel VS Iran: ಇಸ್ರೇಲ್ ವಿರುದ್ಧ 200ಕ್ಕೂ ಹೆಚ್ಚು ಮಿಸೈಲ್ ಮೂಲಕ ದಾಳಿ ನಡೆಸಿದ ಇರಾನ್?
ಇರಾನ್ ಇದೀಗ ನೇರವಾಗಿ ಇಸ್ರೇಲ್ ವಿರುದ್ಧ ದಾಳಿ ಆರಂಭ ಮಾಡಿದೆ, ಕೆಲವು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳ ನಡುವೆ ಕಿತ್ತಾಟ ನಡೆಯುತ್ತಿತ್ತು. ಅದರಲ್ಲೂ, ಲೆಬನಾನ್ ವಿರುದ್ಧ ಇಸ್ರೇಲ್ ಸೇನೆ ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭ ಮಾಡಿತ್ತು. ಹೀಗೆ ಇಸ್ರೇಲ್ ಸೇನೆ ಶುರು ಮಾಡಿದ್ದ ದಾಳಿಯ ಹಿನ್ನೆಲೆ ದಕ್ಷಿಣ ಲೆಬನಾನ್ ಪ್ರದೇಶ ಛಿದ್ರ ಛಿದ್ರವಾಗಿ ಹೋಗಿದೆ. ಪರಿಸ್ಥಿತಿ ಹೀಗೆ ಕಠಿಣವಾಗಿದ್ದ ಸಮಯದಲ್ಲೇ ಇರಾನ್ ಕೂಡ ಇಸ್ರೇಲ್ ವಿರುದ್ಧ ನೇರವಾಗಿ ದಾಳಿ ಆರಂಭ ಮಾಡಿದ್ದು, ದಿಢೀರ್ 200ಕ್ಕೂ ಹೆಚ್ಚು ಮಿಸೈಲ್ ಹಾರಿಸಿಬಿಟ್ಟಿದೆ!
ಪ್ರಪಂಚವೇ ಇದೀಗ ಇಸ್ರೇಲ್‌ನ ಮೇಲೆ ಕಣ್ಣಿಟ್ಟು ಕೂರುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇಸ್ರೇಲ್ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿದೆ, ಯಾಕಂದ್ರೆ ಗಾಜಾ ಪಟ್ಟಿ ಯುದ್ಧದೊಂದಿಗೆ ಹಿಜ್ಬುಲ್ಲಾ ಜತೆಗೂ ಕಿರಿಕ್ ಶುರುವಾಗಿದೆ. ಹೀಗಾಗಿ ಲೆಬನಾನ್ ವಿರುದ್ಧ ಕೂಡ ದಾಳಿ ಮಾಡ್ತಿದೆ. ಲೆಬನಾನ್ ದೇಶದ ನೂರಾರು ಜಾಗಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆ. ಈ ಪೈಕಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಸದಸ್ಯರು ಹಾಗೂ ಮುಖಂಡರ ಕಥೆಯನ್ನೇ ಮುಗಿಸಿ ಹಾಕಲು ಈಗ ಇಸ್ರೇಲ್ ಸಜ್ಜಾದಂತೆ ಕಾಣ್ತಿದೆ. ಮೊನ್ನೆ ಮೊನ್ನೆಯಷ್ಟೆ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮುಖ್ಯಸ್ಥನ ಕಥೆಯನ್ನೇ ಮುಗಿಸಿತ್ತು ಇಸ್ರೇಲ್. ಇಂತಹ ಸಮಯದಲ್ಲಿ ನೇರವಾಗಿ ಇರಾನ್ ಈಗ ಇಸ್ರೇಲ್ ವಿರುದ್ಧ ಯುದ್ಧಕ್ಕೆ ನುಗ್ಗಿದೆ.

200ಕ್ಕೂ ಹೆಚ್ಚು ಮಿಸೈಲ್ ಹಾರಿಸಿ...
ಹೌದು, ಇಸ್ರೇಲ್‌ನ ಪ್ರಮುಖ ಪಟ್ಟಣ ಟೆಲ್‌ಅವೀವ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಭೀಕರವಾಗಿ ದಾಳಿಯ ನಡೆಸಿದೆ ಇರಾನ್. ದಕ್ಷಿಣ ಟೆಲ್‌ಅವೀವ್ ನಗರದ ಮೇಲೆ ಉಗ್ರರಿಂದ ಕೂಡ ಗುಂಡಿನ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ದಿಢೀರ್ ಹೀಗೆ ಶತ್ರುಗಳು ಇಸ್ರೇಲ್ ವಿರುದ್ಧ ದಾಳಿ ಆರಂಭ ಮಾಡಿದ ನಂತರ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಒಂದು ಕಡೆ ನೇರವಾಗಿ ಇಸ್ರೇಲ್ ನೆಲಕ್ಕೆ ನುಗ್ಗಿ ಉಗ್ರರು ದಾಳಿ ಮಾಡಿರುವ ಆರೋಪ ಕೇಳಿಬಂದಿದೆ, ಇನ್ನೊಂದು ಕಡೆ ಇರಾನ್ ಕೂಡ 200ಕ್ಕೂ ಹೆಚ್ಚು ಮಿಸೈಲ್ ಹಾರಿಸಿ ಇಸ್ರೇಲ್ ಒಳಗೆ ಈಗ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗಳಲ್ಲಿ, ಇಸ್ರೇಲ್ ದೇಶದ 6 ಪ್ರಜೆಗಳು ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.
ಬಾಂಬ್ ಶೆಲ್ಟರ್ ಸೇರಿದ ಪ್ರಜೆಗಳು!
ಇರಾನ್ 200ಕ್ಕೂ ಹೆಚ್ಚು ಮಿಸೈಲ್ ಅಂದ್ರೆ ಕ್ಷಿಪಣಿಗಳನ್ನ ಇರಾನ್ ವಿರುದ್ಧ ಹಾರಿಬಿಟ್ಟಿದ್ದೇ ತಡ, ಇಸ್ರೇಲ್ ದೇಶದಲ್ಲಿ ಸೈರಲ್ ಮೊಳಗಲು ಶುರುವಾಗಿತ್ತು. ಕ್ಷಿಪಣಿಗಳು ದೇಶದ ಒಳಗಡೆ ನುಗ್ಗಿವೆ ಎಂಬುದರ ಸೂಚನೆಯಾಗಿ ಈ ರೀತಿ ಸೈರನ್ ಸದ್ದು ಮೊಳಗುತ್ತದೆ. ಈ ರೀತಿಯಾಗಿ ದಿಢೀರ್ ತನ್ನ ದೇಶದ ಮೇಲೆ ದಾಳಿ ಆರಂಭವಾಗಿದೆ ಎಂಬುದನ್ನು ಅರಿತುಕೊಂಡ ಇಸ್ರೇಲ್ ಸೇನೆ, ಜನರಿಗೆ ಬಾಂಬ್ ಶೆಲ್ಟರ್ ಸೇರಿದಂತೆ ಅತ್ಯಂತ ಸುರಕ್ಷಿತವಾದ ಜಾಗಗಳಿಗೆ ಹೋಗುವಂತೆ ಸೂಚನೆ ನೀಡಿತು. ಅಲ್ಲದೆ ಈ ರೀತಿ ಇಸ್ರೇಲ್ & ಇರಾನ್ ನಡುವೆ ಶುರುವಾದ ನೇರ ದಾಳಿ ಕಂಡು ಇಡೀ ಜಗತ್ತೇ ಇದೀಗ ಬೆಚ್ಚಿಬಿದ್ದಿದೆ.












Click it and Unblock the Notifications