Israel VS Iran: ಇಸ್ರೇಲ್ ವಿರುದ್ಧ ಪರಮಾಣು ಯುದ್ಧಕ್ಕೆ ಸಿದ್ಧವಾದ ಇರಾನ್?
ಇರಾನ್ ಕೊತ ಕೊತ ಕುದಿಯುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಘೋರ ಅಪರಾಧ ಮಾಡುವ ಸಾಧ್ಯತೆ ದಟ್ಟವಾಗಿದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಮುಂದೆ ಏನಾಗಲಿದೆ? ಯಾರು ಯಾರ ಮೇಲೆ ದಾಳಿ ಮಾಡುತ್ತಾರೆ? ಅಕಸ್ಮಾತ್ ಪರಮಾಣು ಬಾಂಬ್ ದಾಳಿ ನಡೆದರೆ ಕಥೆ ಏನು? ಹೀಗೆ ನೂರಾರು ಪ್ರಶ್ನೆಗಳು ಈ ಸಮಯದಲ್ಲಿ ಜಗತ್ತಿನಾದ್ಯಂತ ಉದ್ಭವಿಸುತ್ತಿವೆ. ಇಂತಹ ಸಮಯದಲ್ಲೇ, ಇಸ್ರೇಲ್ ವಿರುದ್ಧ ಪರಮಾಣು ಯುದ್ಧಕ್ಕೆ ಸಿದ್ಧವಾದ ಇರಾನ್? ಎಂಬ ಬಗ್ಗೆ ಜನರು ಆತಂಕ ಹೊರ ಹಾಕ್ತಿದ್ದಾರೆ.
ಇರಾನ್ ಕೂಡ ಬಲಿಷ್ಠ ದೇಶವಾಗಿದ್ದು, ಅತ್ಯುತ್ತಮ ಸೇನೆಯನ್ನೂ ಹೊಂದಿದೆ. ನಿಮಗೆಲ್ಲಾ ಗೊತ್ತಿರುವಂತೆ ಇರಾನ್ ಬಳಿ ಕೂಡ ಪರಮಾಣು ಅಸ್ತ್ರಗಳ ರಾಶಿಯೇ ಬಿದ್ದಿದೆ. ಹತ್ತಾರು ವರ್ಷ ತಯಾರಿ ನಡೆಸಿ ಇರಾನ್ ತನ್ನ ಬಳಿ ಪರಮಾಣು ಅಸ್ತ್ರಗಳನ್ನ ಸ್ಟಾಕ್ ಮಾಡಿಕೊಂಡಿದೆ. ಈ ಕಾರಣಕ್ಕೆ ಇರಾನ್ ಕಂಡರೆ ಅಮೆರಿಕ ಕೂಡ ಒಂದು ಕ್ಷಣ ಹಿಂದೆ & ಮುಂದೆ ಯೋಚಿಸುವ ಪರಿಸ್ಥಿತಿ ಇದೆ.

ಎಲ್ಲವನ್ನೂ ಮೀರಿ ಇದೀಗ ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿರುವ ದಾಳಿ ಭಯ ಹೆಚ್ಚಾಗುವಂತೆ ಮಾಡಿದೆ. ಯಾಕಂದ್ರೆ ಇರಾನ್ ಇದೀಗ ಇಸ್ರೇಲ್ ವಿರುದ್ಧ ಅಟ್ಯಾಕ್ ಮಾಡಲು ಖಂಡಾಂತರ ಕ್ಷಿಪಣಿ ಅಂದ್ರೆ ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಹಾರಿ ಹೋಗಬಲ್ಲ ಮಿಸೈಲ್ಸ್ ಬಳಕೆ ಮಾಡುತ್ತಿದೆ. ಈ ಕ್ಷಿಪಣಿಗಳ ಸಹಾಯದಿಂದ ಪರಮಾಣು ದಾಳಿ ಕೂಡ ನಡೆಸಲು ಸಾಧ್ಯವಿದ್ದು, ಮತ್ತೊಂದು ವಿನಾಶ ಗ್ಯಾರಂಟಿನಾ?
ಪರಮಾಣು ಅಸ್ತ್ರಗಳು ದಾಳಿಗೆ ಸಿದ್ಧ?
ಇರಾನ್ & ಇಸ್ರೇಲ್ ನಡುವೆ ದ್ವೇಷ ಇಂದು ಅಥವಾ ನಿನ್ನೆಯದ್ದಲ್ಲ. ಯಾವಾಗ ಇಸ್ರೇಲ್‌ನ ಬೆಂಬಲಕ್ಕೆ ಅಮೆರಿಕ ನಿಂತುಕೊಂಡು, ಮಧ್ಯಪ್ರಾಚ್ಯ ದೇಶಗಳಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ಆರಂಭ ಮಾಡಿತ್ತೋ ಆಗಲೇ ಬೆಂಕಿ ಕೂಡ ಹೊತ್ತಿಕೊಂಡು ಧಗಧಗಿಸಿತ್ತು. ಈಗಾಗಲೇ ಇರಾನ್ ದೇಶದ ಅಕ್ಕಪಕ್ಕದ ದೇಶಗಳಲ್ಲಿ ಅಮೆರಿಕ & ಇಸ್ರೇಲ್ ಮಿಲಿಟರಿ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲೇ ಇರಾನ್ ಕೂಡ ಭಯಪಟ್ಟು ತನ್ನ ಶತ್ರುಗಳ ವಿರುದ್ಧ ದಾಳಿ ಮಾಡುತ್ತಿದೆ ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ ಇರಾನ್ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಕೂಡ ಹೊರಗೆ ತೆಗೆದಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ದಾಳಿ ನಡೆಯಬಹುದು ಎಂಬ ಆರೋಪ ಕೇಳಿಬಂದಿದೆ.
ಭೂಮಿಯ ವಿನಾಶಕ್ಕೆ ಮುನ್ನುಡಿ?
ಒಟ್ನಲ್ಲಿ ಮನುಷ್ಯನಿಗೆ ಬುದ್ಧಿ ಬರಲ್ಲ ಅಂತಾ ಕಾಣುತ್ತದೆ, ಮಧ್ಯಪ್ರಾಚ್ಯ ಈಗ ಮತ್ತೊಂದು ಮಹಾಯುದ್ಧಕ್ಕೆ ಸಿದ್ಧವಾದಂತೆ ಕಾಣುತ್ತಿದೆ. ಈಗಾಗಲೇ ಇಸ್ರೇಲ್ ಸೇನೆ ತನ್ನ ಶತ್ರುಗಳ ನಾಶ ಗ್ಯಾರಂಟಿ ಅಂತಾ ಹೇಳುತ್ತಿದೆ. ಇದೇ ಸಮಯದಲ್ಲಿ ನಾವು ಕೂಡ ದಾಳಿಗೆ ಸಿದ್ಧ ಅಂತಿರುವ ಇರಾನ್, ಉಗ್ರಾಣದಲ್ಲಿ ಬಚ್ಚಿಟ್ಟಿದ್ದ ಅಸ್ತ್ರಗಳನ್ನೆಲ್ಲಾ ಹೊರಗಡೆ ತೆಗೆದು ದಾಳಿ ಆರಂಭಿಸಿದ್ದು ಭಯ ಹುಟ್ಟಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಾ? ಎಂಬ ಚಿಂತೆ ಶುರುವಾಗಿದೆ. ಇಷ್ಟೆಲ್ಲವನ್ನೂ ಮೀರಿ ಪರಮಾಣು ಬಾಂಬ್ ದಾಳಿ ನಡೆಸಿದರೆ ಅದು ಮುಂದೆ ಭೂಮಿಯ ವಿನಾಶಕ್ಕೆ ಕಾರಣವಾಗುವುದು ಪಕ್ಕಾ!












Click it and Unblock the Notifications