ಪಾಕಿಸ್ತಾನದಲ್ಲಿ ನಿಲ್ಲದ ಹಿಂಸಾಚಾರ, ಜನರಲ್ಲಿ ಭಯ ಭಯ!
ಪಾಕಿಸ್ತಾನದ ಚುನಾವಣೆ ನಡೆದು ಒಂದು ವಾರ ಕಳೆದಿದೆ, ಹಾಗೇ ಮತ ಎಣಿಕೆ ಪೂರ್ಣವಾಗಿ ಬರೋಬ್ಬರಿ 5 ದಿನ ಕಳೆದು ಹೋಗಿದೆ. ಹೀಗಿದ್ದರೂ ಅಲ್ಲಿ ಹೊಸ ಸರ್ಕಾರ ರಚನೆ ಆಗಿಲ್ಲ. ಹೀಗಿದ್ದಾಗಲೇ ಪಾಕಿಸ್ತಾನದಲ್ಲಿ ಹಿಂಸಾಚಾರ ಕೂಡ ಮತ್ತಷ್ಟು ಹೆಚ್ಚಾಗುತ್ತಿದೆ. ಈಗ ಪಾಕ್‌ನ ಪರಿಸ್ಥಿತಿ ಹೇಗಿದೆ? ಪಾಕಿಸ್ತಾನದ ಹಿಂಸಾಚಾರ ಮತ್ತೆ ಎಲ್ಲೆಲ್ಲಿಗೆ ಹಬ್ಬುತ್ತಿದೆ? ಆ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ಷೇತ್ರದಲ್ಲಿ, ಮರು ಮತ ಎಣಿಕೆಯ ವೇಳೆ 2 ರಾಜಕೀಯ ಪಕ್ಷಗಳ ಮಧ್ಯೆ ಭರ್ಜರಿ ಫೈಟಿಂಗ್ ಆಗಿದೆ. ಹೀಗಿದ್ದಾಗಲೇ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಗನ್ ಹಿಡಿದು ಕಿತ್ತಾಡಿದ್ದಾರೆ. ಹೀಗೆ ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಫೈರಿಂಗ್ ಮಾಡಿದ ಹಿನ್ನೆಲೆ ಇಬ್ಬರು ಮೃಪಟ್ಟಿದ್ದಾರೆ ಎನ್ನಲಾಗಿದೆ ಇನ್ನ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಹೀಗಿದ್ದರೂ ಅಲ್ಲಿ ವಾತಾವರಣ ತಿಳಿಯಾಗಿಲ್ಲ.

ಕಿತ್ತಾಟ ಶುರುವಾಗಿದ್ದು ಹೇಗೆ?
ಇನ್ನು ಬಲೂಚಿಸ್ತಾನ್ ಅವಾಮಿ ಪಾರ್ಟಿ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಬೆಂಬಲಿಗರು ಈ ರೀತಿ ಬಡಿದಾಡಿದ್ದಾರಂತೆ. ಕರಾಚಿ ಗಡಿಭಾಗದ ಕೈಗಾರಿಕೆ ಪ್ರದೇಶದಲ್ಲಿರುವ ಚುನಾವಣಾಧಿಕಾರಿ ಕಚೇರಿ ಹೊರಭಾಗದಲ್ಲೇ ಇವರು ಈ ರೀತಿ ಫೈಟಿಂಗ್ ಮಾಡಿದ್ದಾರೆ. ಹೀಗಾಗಿ ಘಟನೆಯಲ್ಲಿ, ಒಟ್ಟಾರೆ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಫೆಬ್ರವರಿ 8ಕ್ಕೆ ನಡೆದಿದ್ದ ಪಾಕಿಸ್ತಾನ ಚುನಾವಣೆಯಲ್ಲಿ ಬಿಎಪಿ ಪಕ್ಷದ ಮೊಹಮ್ಮದ್ ಸಲೇಹ್ ಭೂತಾನಿ ಅವರನ್ನು ಗೆದ್ದ ಅಭ್ಯರ್ಥಿ ಅಂತಾ ಘೋಷಿಸಲಾಗಿತ್ತು.
ಗೆಲುವಿನ ನಂತರ ಕಿರಿಕ್ ಶುರು
ಆದ್ರೆ ಮತ ತಿರುಚಿದ ಆರೋಪ ಮಾಡಿದ ಪಿಪಿಪಿ ಪಕ್ಷದ ಅಲಿ ಹಸನ್ ಝೆಹ್ರಿ, ಫಲಿತಾಂಶವನ್ನ ರದ್ದುಮಾಡಿ ಮರು ಮತ ಎಣಿಕೆ ಮಾಡಲು ಚುನಾವಣೆ ಆಯೋಗಕ್ಕೆ ಕೂಡ ಮನವಿ ಮಾಡಿದ್ರು. ಈ ಕಾರಣಕ್ಕೆ ಮರು ಮತ ಎಣಿಕೆ ನಡೆಸಲಾಗಿತ್ತು. ಆದರೆ ಇದೇ ಸಮಯದಲ್ಲಿ ಗನ್ ಹಿಡಿದು ಬಂದ ಎರಡೂ ಪಕ್ಷಗಳ ಕಾರ್ಯಕರ್ತರು ಕಿತ್ತಾಡಿದ್ದಾರೆ. ಹೀಗಿದ್ದಾಗ ಗುಂಡು ಕೂಡ ಹಾರಿಸಿ ಇಬ್ಬರ ಜೀವ ತೆಗೆದಿದ್ದಾರೆ. 39 ಮತಗಟ್ಟೆಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದ ವೇಳೆ, ಘರ್ಷಣೆ ನಡೆದಿದೆ ಅಂತಾ ಹೇಳಲಾಗಿದೆ.
ಸರ್ಕಾರ ಯಾವಾಗ ರಚನೆ ಆಗುತ್ತೆ?
ಪಾಕಿಸ್ತಾನದಲ್ಲಿ ಈಗ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗೆ ಬಹುಮತ ಸಿಗದ ಕಾರಣ ಪಾಕಿಸ್ತಾನದಲ್ಲಿ ಫಲಿತಾಂಶ ಹೊರಬಿದ್ದು ಈಗಾಗಲೇ 4-5 ದಿನವೇ ಕಳೆದರೂ ಸರ್ಕಾರ ಮಾತ್ರ ರಚನೆ ಆಗಿಲ್ಲ. ಹೀಗಾಗಿ ಅಲ್ಲಿನ ಪ್ರಜೆಗಳು ಕೂಡ, ಹಿಂಸೆ ಭಯ ಹಾಗೂ ಅನಿಶ್ಚಿತತೆಯ ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ಬಂದಿದೆ. ಇಷ್ಟೆಲ್ಲದರ ನಡುವೆ ಗನ್ ಹಿಡಿದು ಎರಡೂ ಪಕ್ಷಗಳ ಕಾರ್ಯಕರ್ತರು ರೌಡಿಗಳ ರೀತಿ ಕಿತ್ತಾಡಿದ ಪರಿಣಾಮ, ಇದೀಗ ಇಬ್ಬರು ಜೀವ ಕೂಡ ಕಳೆದುಕೊಂಡಿದ್ದಾರೆ.

ಹೀಗೆ ಪಾಕಿಸ್ತಾನದಲ್ಲಿ ಒಂದು ಕಡೆ ಪರಿಸ್ಥಿತಿ ಕೈಮೀರಿ ಹೋಗಿದ್ದರೆ, ಇಡೀ ಜಗತ್ತೇ ಪಾಕ್‌ನ ಈ ಪರಿಸ್ಥಿತಿ ನೋಡಿ ನಗುತ್ತಿದೆ. ಒಂದು ಕಡೆ ಇಮ್ರಾನ್ ಖಾನ್ ಪ್ರಧಾನಿ ಆಗಲು ಪಾಕಿಸ್ತಾನ ಸೇನೆ ಅವಕಾಶ ನೀಡುತ್ತಿಲ್ಲ. ಇನ್ನೊಂದ್ಕಡೆ ನವಾಜ್ ಷರೀಫ್ ಪ್ರಧಾನಿ ಆಗೋದಕ್ಕೂ ಈಗ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಪಾಕಿಸ್ತಾನದ ಭವಿಷ್ಯಕ್ಕೆ ಮತ್ತೆ ಕತ್ತಲೆ ಕವಿದಿದೆ.












Click it and Unblock the Notifications