Gaza War: 48 ಗಂಟೆಯಲ್ಲಿ ಇಸ್ರೇಲ್ ಮಾಡಿದ ದಾಳಿಗೆ 90ಕ್ಕೂ ಹೆಚ್ಚು ಜನ ಬಲಿ?
ಗಾಜಾ ಪಟ್ಟಿಯಲ್ಲಿ ನೆತ್ತರು ನದಿಯಂತೆ ಹರಿಯುತ್ತಿದ್ದು, ಕಂಡ ಕಂಡ ಜಾಗದಲ್ಲಿ ಕಟ್ಟಡಗಳ ಮಾರಣಹೋಮ ಮುಂದುವರಿದಿದೆ. ಇಸ್ರೇಲ್ ಮಿಲಿಟರಿ ಪಕ್ಕಾ ಪ್ಲಾನ್ ಮಾಡಿ ಗಾಜಾ ಮೇಲೆ ದಾಳಿ ನಡೆಸುತ್ತಿದ್ದು, ಅತಿ ಹೆಚ್ಚು ಜನ ವಾಸ ಇರುವ ಪ್ರದೇಶದಲ್ಲೇ ದುರಂತ ಹೆಚ್ಚಾಗುತ್ತಿದೆ. ಅಲ್ಲದೇ, ಇನ್ನೊಂದು ಕಡೆ ನಿರಾಶ್ರಿತರು ಕೂಡ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ದಾಳಿಗೆ ಬಲಿಯಾಗುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಸಮಯದಲ್ಲೇ ಕಳೆದ 48 ಗಂಟೆಯಲ್ಲಿ ಇಸ್ರೇಲ್ ಮಾಡಿದ ದಾಳಿಗೆ 90ಕ್ಕೂ ಹೆಚ್ಚು ಜನ ಬಲಿಯಾಗಿರುವ ಆರೋಪ ಕೇಳಿ ಬಂದಿದೆ.
ಯುದ್ಧ ನಿಲ್ಲಿಸಬೇಕು ಅಂದ್ರೂ ನಿಲ್ಲುತ್ತಿಲ್ಲ, ಬದಲಾಗಿ ಬಡಿದಾಟ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಮುಹೂರ್ಥದಲ್ಲಿ ಇಸ್ರೇಲ್ & ಗಾಜಾ ಯುದ್ಧ ಶುರುವಾಗಿತ್ತೋ ಗೊತ್ತಿಲ್ಲ, ಆದ್ರೆ ಇಸ್ರೇಲ್ & ಗಾಜಾ ಪಟ್ಟಿ ಯುದ್ಧ ಹಿನ್ನೆಲೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆ ಕೂಡ ಶುರುವಾಗಿದೆ. ಇದೇ ಕಾರಣಕ್ಕೆ ಎದ್ದು ಬಿದ್ದು ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಕೂಡ ಮಾಡಲಾಗಿತ್ತು. ಹೀಗಿದ್ದರೂ ಗಾಜಾ ಪಟ್ಟಿ ಮಾತ್ರ ತಣ್ಣಗಾಗಿಲ್ಲ, ಬದಲಾಗಿ ಇನ್ನಷ್ಟು ಹಿಂಸೆ ಹೆಚ್ಚಾಗಿದೆ.

48 ಗಂಟೆಯಲ್ಲಿ ಭಾರಿ ರಕ್ತಪಾತ?
ಯಾಕಂದ್ರೆ ಅಮೆರಿಕ ಮತ್ತು ಇಸ್ರೇಲ್ ಒಟ್ಟಾಗಿ ಒಂದು ಪ್ಲಾನ್‌ನ ಮಾಡಿವೆ, ಗಾಜಾ ಪಟ್ಟಿಯಲ್ಲಿ ವಾಸ ಮಾಡುತ್ತಿರುವ ಜನರನ್ನು ಬೇರೆ ಕಡೆಗೆ ಕಳುಹಿಸಲು ಅಂದ್ರೆ ಪೂರ್ವ ಆಫ್ರಿಕಾಗೆ ಸ್ಥಳಾಂತರ ಆಗುವಂತೆ ಮಾಡಲು ಪ್ಲಾನ್ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಇಂತಹ ಸಮಯದಲ್ಲೇ ಗಾಜಾ ಮೇಲೆ ಇಸ್ರೇಲ್ ದಾಳಿಯೂ ಡಬಲ್ ಆಗಿದೆ. ಅದರಲ್ಲೂ ಕಳೆದ 48 ಗಂಟೆಯಲ್ಲಿ ಭಾರಿ ದೊಡ್ಡ ರಕ್ತಪಾತವೇ ಆಗಿ ಹೋಗಿದೆ.
ಇಸ್ರೇಲ್ ದಾಳಿಗೆ 90 ಜನ ಬಲಿ?
ಹೌದು, ಗಾಜಾ ಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಸೇನೆಯಿಂದ ನಿರಂತರ ದಾಳಿ ನಡೆಯುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ ಕೂಡ ಕೈಮೀರಿ ಹೋಗುತ್ತಿದೆ. ಕಳೆದ 48 ಗಂಟೆಗಳಲ್ಲೇ 90 ಜನ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಜಾದ ಆರೋಗ್ಯ ಸಚಿವಾಲಯ ಈ ಆರೋಪ ಮಾಡಿದ್ದು, ಇಸ್ರೇಲ್ ಕಡೆಯಿಂದ ಭೀಕರವಾಗಿ ವಾಯು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ ಗಾಜಾದ ಆರೋಗ್ಯ ಸಚಿವಾಲಯ. ಮಕ್ಕಳು & ಮಹಿಳೆಯರು ಸೇರಿದಂತೆ 15 ಜನರು ಕೆಲವೇ ಗಂಟೆಗಳಲ್ಲಿ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಯುದ್ಧಕ್ಕೆ ಅರ್ಧ ಲಕ್ಷ ಜನರು ಬಲಿ?
ಗಾಜಾ ಪಟ್ಟಿ ಭಾಗಕ್ಕೆ ನುಗ್ಗಿ ಇಸ್ರೇಲ್ ಸೇನೆ ಈಗಾಗಲೇ ಸುರಂಗ & ಇತರ ಕಡೆಗಳಲ್ಲಿ ಹುಡುಕಾಡಿ ಹಮಾಸ್ ತಂಡದ ಜೀವ ತೆಗೆಯುತ್ತಿದೆ. ಅದರಲ್ಲೂ ನಿರಾಶ್ರಿತರ ಶಿಬಿರ ಇರುವ ಕಡೆಗಳಲ್ಲಿ ಕೂಡ ಇದೇ ರೀತಿಯ ಆಪರೇಷನ್ ನಡೆಸುತ್ತಿದೆ ಇಸ್ರೇಲ್ ಸೇನೆ. ಅದೇ ರೀತಿ ಇಸ್ರೇಲ್ ಮಿಲಿಟರಿ ಇದೀಗ ದಿಢೀರ್ ಉತ್ತರ ಗಾಜಾ & ಉತ್ತರ ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ಜನರು ಇದೇ ರೀತಿ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಇದೆ.












Click it and Unblock the Notifications