ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ಆರೋಪ, 80 ಜನರ ಭೀಕರ ಸಾವು?
ಗಾಜಾ & ಇಸ್ರೇಲ್ ನಡುವಿನ ಭೀಕರ ಜಿದ್ದಾಜಿದ್ದಿನ ಕದನಕ್ಕೆ ಇನ್ನೇನು 3 ವರ್ಷ ತುಂಬಲಿದ್ದು, ಇದೇ ಯುದ್ಧ ಈಗ ಜಾಗತಿಕವಾಗಿ ಭಾರಿ ದೊಡ್ಡ ಭೀತಿ ಹುಟ್ಟುಹಾಕಿದೆ. ಗಾಜಾ ಪಟ್ಟಿಯ ಮೇಲೆ ಅಟ್ಯಾಕ್ ಮಾಡ್ತಾ ಇರುವ ಇಸ್ರೇಲ್ ಸೇನೆ ಈಗಾಗಲೇ ಹಲವು ಪ್ರದೇಶಗಳನ್ನ ಧೂಳ್ ಧೂಳ್ ಮಾಡಿ ಹಾಕಿದೆ. ಇದರ ಜೊತೆಗೆ ಹಮಾಸ್ ಉಗ್ರರನ್ನ ಕೂಡ ಹೆಡೆಮುರಿ ಕಟ್ಟಿದ್ದೇವೆ ಅಂತಾ ಕೂಡ ಹೇಳಿಕೊಳ್ತಾ ಇದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಈ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಇಂದು ದಿಢೀರ್ ಭೀಕರ ಘಟನೆಯೊಂದು ನಡೆದು ಹೋಗಿದೆ.
ಹೌದು, ಗಾಜಾ ಪಟ್ಟಿ ಇದೀಗ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿ ಹೋಗಿದ್ದು, ಯಾವಾಗ ಏನಾಗುತ್ತೋ ಅಂತಾ ಅಲ್ಲಿನ ಜನರು ಕೂಡ ಊರು & ಮನೆ ಬಿಟ್ಟು ಓಡಿ ಹೋಗಿದ್ದಾರೆ. ಹೀಗಿದ್ದಾಗ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಜಾಗ ಪಡೆದಿದ್ದವರಿಗೆ ಈಗ ಮತ್ತೊಂದು ಭೀಕರ ಆಘಾತವೇ ಎದುರಾಗಿದ್ದು, ದಿಢೀರ್ ಇಸ್ರೇಲ್ ಸೇನೆ ನಡೆಸಿದ ಒಂದೇ ದಾಳಿಯಲ್ಲಿ 80 ಜನರ ಭೀಕರವಾಗಿ ಜೀವ ಬಿಟ್ಟಿದ್ದಾರಾ?? ಏನಿದು ಭಾರಿ ಗಂಭೀರ ಆರೋಪ?? ಈ ವಿಚಾರದಲ್ಲಿ ದೊಡ್ಡಣ್ಣ ಅಮೆರಿಕ ನಿಲುವು ಏನು?? ಹೀಗೆ ನೂರಾರು ಪ್ರಶ್ನೆಗಳು ಮೂಡಿರುವ ಸಮಯದಲ್ಲೇ ಮಧ್ಯಪ್ರಾಚ್ಯ ಮತ್ತೆ ಕೊತ ಕೊತನೇ ಕುದಿಯುವಂತೆ ಆಗಿದೆ.

ಅಂತಿಮ ಹಂತ ತಲುಪಿದ ಕದನ?
2023 ಅಕ್ಟೋಬರ್ 7ರ ಶನಿವಾರ ಇಸ್ರೇಲ್ ಮೇಲೆ ನುಗ್ಗಿ ಬಂದ ಹಮಾಸ್ ರಾಕೆಟ್ & ಕ್ಷಿಪಣಿಗಳು ಘೋರ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023ರ ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಹೀಗಿದ್ದಾಗ ಗಾಜಾ ನಿವಾಸಿಗಳ ಮೇಲೆ ಈಗ ಒತ್ತಡ ಹೇರುವ ಮೂಲಕ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಯಾವುದೇ ಚಿಂತೆ ಮಾಡದೆ ಮುಂದೆ ನುಗ್ಗಲು ನಿರ್ಧಾರ ಮಾಡಿರುವ ಇಸ್ರೇಲ್ ಸೇನೆ ಈಗ ಕೆಲವೇ ದಿನಗಳಲ್ಲಿ ಭಾರಿ ದೊಡ್ಡ ಕಾರ್ಯಾಚರಣೆ ಕೈಗೊಳ್ಳುವ ಆತಂಕ ಗಾಜಾ ನಿವಾಸಿಗಳಲ್ಲಿ ಕಾಡುತ್ತಿದೆ. ಮತ್ತೊಂದು ಕಡೆ ಆದಷ್ಟು ಬೇಗ ಗಾಜಾ ನಿವಾಸಿಗಳಿಗೆ ಅಗತ್ಯ ಇರುವ ವಸ್ತು ಪೂರೈಕೆ ಆಗಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.












Click it and Unblock the Notifications