Gaza War: 24 ಗಂಟೆ, 79 ಜನ ಬಲಿ... ಏನಾಗುತ್ತಿದೆ ಗಾಜಾ ಪಟ್ಟಿಯಲ್ಲಿ ಈಗ?
ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ನಿಂತಿಲ್ಲ, ಇಸ್ರೇಲ್ ಸೇನೆ ಆಕ್ರೋಶ ಹೆಚ್ಚು ಮಾಡಿಕೊಂಡು ದಾಳಿ ಮುಂದುವರಿಸಿದೆ. ಈಗಾಗಲೇ ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಹೀನಾಯವಾಗಿದ್ದು, ಈ ರೀತಿ ಇನ್ನಷ್ಟು ದಿನಗಳ ಕಾಲ ಯುದ್ಧ ಮುಂದುವರಿದರೆ ಪರಿಸ್ಥಿತಿ ಕಠಿಣವಾಗಲಿದೆ ಎನ್ನುವ ಎಚ್ಚರಿಕೆ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದೆ ಇಸ್ರೇಲ್. ಇಷ್ಟೆಲ್ಲದರ ನಡುವೆ ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ...
ಹೌದು, ಹಮಾಸ್ ಸರ್ವನಾಶ ಆಗುವ ತನಕ ಯುದ್ಧ ನಿಲ್ಲಿಸುವುದಿಲ್ಲ ಎಂದು ಘೋಷಿಸಿದ್ದ ಇಸ್ರೇಲ್ ಸರ್ಕಾರ ಸತತ ಒಂದೂವರೆ ವರ್ಷಗಳ ಕಾಲ ದಾಳಿ ನಡೆಸಿದೆ. ಇಷ್ಟಾದರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ & ಬದಲಾಗಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ. ಇದೇ ಸಮಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 79 ಜನರು ಬಲಿಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೂಡ ಹೊರಿಸಲಾಗಿದೆ. ಗಾಜಾ ಪಟ್ಟಿಯಲ್ಲಿ ಈಗಲೂ ಇಸ್ರೇಲ್ ಸೇನೆಯಿಂದ ಭಾರಿ ದೊಡ್ಡ ಕಾರ್ಯಾಚರಣೆ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇಡೀ ಗಾಜಾ ಪಟ್ಟಿಯನ್ನ ತನ್ನ ವಶಕ್ಕೆ ಪಡೆದುಕೊಳ್ಳಲು ಇಸ್ರೇಲ್ ಚಿಂತನೆ ನಡೆಸುತ್ತಿದೆ.

ಗಾಜಾ ಜನರಿಗೆ ನೆರವು ರವಾನೆ
ಹಲವು ತಿಂಗಳ ಬಳಿಕ ಇದೀಗ ಗಾಜಾ ಪಟ್ಟಿಯಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಕೊಡಲು ಇಸ್ರೇಲ್ ಅನುಮತಿ ಕೊಟ್ಟಿದೆ. ಹೀಗಾಗಿ ವಿಶ್ವಸಂಸ್ಥೆ ಕೂಡ ನೆರವಿನ ಟ್ರಕ್‌ಗಳನ್ನ ಗಾಜಾದ ಒಳಗೆ ಕಳುಹಿಸುತ್ತಿದೆ, ಇಷ್ಟಾದರೂ ದಾಳಿ ಮಾತ್ರ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಯುದ್ಧ & ಹಿಂಸಾಚಾರ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಗಾಜಾ ಪಟ್ಟಿಯಲ್ಲಿ ಸದ್ಯದ ಸ್ಥಿತಿ ನೋಡಿದರೆ ಇನ್ನೇನು ಇಡೀ ಗಾಜಾ ನಾಶವಾಗುವ ಹಂತಕ್ಕೆ ಬಂದು ನಿಂತಿದೆ, ಹೀಗಾಗಿ ಯುದ್ಧ ನಿಲ್ಲಬೇಕು ಎಂಬುದು ಹಲವು ದೇಶಗಳ ಒತ್ತಾಯವಾಗಿದೆ. ಆದರೆ ಇದಕ್ಕೆ ಇಸ್ರೇಲ್ ಸೇನೆ ಕೇರ್ ಮಾಡದೆ ದಾಳಿ ಮುಂದುವರಿಸಿದೆ.












Click it and Unblock the Notifications