ಭೀಕರ ಕ್ಷಿಪಣಿ ದಾಳಿಗೆ ಹಾರಿಹೋಯ್ತು 7 ಅಮಾಯಕರ ಪ್ರಾಣಪಕ್ಷಿ

ಕೀವ್‌: ಅಮೆರಿಕ ಜೊತೆ ಉಕ್ರೇನ್ ಎಫ್-16 ಯುದ್ಧ ವಿಮಾನದ ಡೀಲ್‌ಗೆ ಅಂತಿಮ ಸಿದ್ಧತೆ ನಡೆಸಿರುವಾಗಲೇ ರಷ್ಯಾ ರೊಚ್ಚಿಗೆದ್ದಿದೆ. ರಷ್ಯಾ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ. ಇದೇ ರೀತಿ ಉಕ್ರೇನ್‌ನ ಪ್ರಮುಖ ನಗರ ಚೆರ್ನಿವ್‌ ಕೇಂದ್ರ ಭಾಗದ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು ಈ ಸ್ಫೋಟದಲ್ಲಿ 7 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೇ 100ಕ್ಕೂ ಹೆಚ್ಚು ಜನ ಆಸ್ಪತ್ರೆ ಪಾಲಾಗಿದ್ದಾರೆ.

ರಷ್ಯಾ & ಉಕ್ರೇನ್ ಯುದ್ಧ ನರಕವಾಗಿ ಬದಲಾಗಿದ್ದು, ಇಬ್ಬರೂ ಒಬ್ಬರ ಮೇಲೊಬ್ಬರಂತೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸುತ್ತಿದೆ. ಈ ಪೈಕಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಸ್ವೀಡನ್‌ಗೆ ಭೇಟಿ ಕೊಟ್ಟ ಬೆನ್ನಲ್ಲೇ ಈ ರೀತಿ ಭೀಕರ ದಾಳಿ ನಡೆದಿದೆ. ಉಕ್ರೇನ್‌ನ ಪ್ರಮುಖ ನಗರ ಚೆರ್ನಿವ್‌ ಕ್ಷಿಪಣಿ ದಾಳಿಗೆ ಬೆಚ್ಚಿದೆ. ಆರು ವರ್ಷದ ಬಾಲಕಿ ಸೇರಿ 7 ನಾಗರಿಕರು ಮೃತಪಟ್ಟಿದ್ದಾರೆ. ರಷ್ಯಾದ ಮಿಸೈಲ್ ಬಿದ್ದಿರುವ ಜಾಗದ ಅಕ್ಕಪಕ್ಕ ಇರುವ ಕಟ್ಟಡಗಳು ಛಿದ್ರವಾಗಿವೆ. ಚೆರ್ನಿವ್‌ ಸೆಂಟ್ರಲ್ ಸ್ಕ್ವೇರ್‌ನಲ್ಲಿರುವ ರಂಗಮಂದಿರಕ್ಕೆ ರಷ್ಯಾದ ಮಿಸೈಲ್ ಬಂದು ಅಪ್ಪಳಿಸಿದೆ.

Allegedly 7 killed in ukraine after Russian missile attack

ವಾಕಿಂಗ್ ಬಂದವರು ಹೆಣವಾಗಿ ಬಿದ್ದರು

ರಷ್ಯಾ ತನ್ನ ಕ್ಷಿಪಣಿ ದಾಳಿಯನ್ನು ಅದೆಷ್ಟು ಭೀಕರವಾಗಿ ನಡೆಸುತ್ತಿದೆ ಎಂದರೆ, ಎಲ್ಲಿಂದ ಹೇಗೆ ಮಿಸೈಲ್ ಬಂದು ಬಡಿಯುತ್ತೋ ಗೊತ್ತಿಲ್ಲ. ಹೀಗೆ ಜನರು ಬೆಳಗ್ಗೆ ವಾಯು ವಿಹಾರ ನಡೆಸುವಾಗ ರಷ್ಯಾ ಹಾರಿಸಿದ ಮಿಸೈಲ್‌ಗಳು ಬಂದು ಬಡಿದಿವೆ. ಮಕ್ಕಳು, ಮಹಿಳೆಯರು ಕ್ಷಿಪಣಿ ಬಿದ್ದ ತಕ್ಷಣ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ಪೈಕಿ 7 ಜನರ ಜೀವ ಹೋಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಿನ ಪರಿಸ್ಥಿತಿಯಲ್ಲಿ ಉಕ್ರೇನ್‌ಗೆ ಸೂಕ್ತ ಚಿಕಿತ್ಸೆ ನೀಡಲು ಒಳ್ಳೆಯ ಆಸ್ಪತ್ರೆಗಳು ಕೂಡ ಉಳಿದಿಲ್ಲ. ಹೀಗಾಗಿ ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಎಫ್-16 ಗಿಫ್ಟ್ ಕೊಡುತ್ತಿದೆ ಅಮೆರಿಕ

ಶಸ್ತ್ರಾಸ್ತ್ರ ಪೂರೈಕೆ ಮಾಡುವ ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಅಮೆರಿಕ ನಂ.1 ಸ್ಥಾನದಲ್ಲಿದೆ. ಇಂತಿಪ್ಪ ಅಮೆರಿಕ ಬಳಿ ಭಯಾನಕ ಅಸ್ತ್ರ ಒಂದಿದ್ದು ಅದರ ಹೆಸರು ಎಫ್-16 ಅಂತಾ. ಹೀಗೆ ಜಗತ್ತಿನ ಅತಿ ಶಕ್ತಿಶಾಲಿ & ಭಾರಿ ವೆಚ್ಚದ ಯುದ್ಧ ವಿಮಾನಗಳ ಪೈಕಿ ಎಫ್-16 ಮುಂಚೂಣಿಗೆ ಸೇರುತ್ತೆ. ಜಗತ್ತಿನಾದ್ಯಂತ ಎಫ್ 16 ಖರೀದಿಗೆ ಹಲವು ದೇಶಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೀಗೆ ಅತಿ ಶಕ್ತಿಶಾಲಿ ಯುದ್ಧ ವಿಮಾನವನ್ನು ಉಕ್ರೇನ್‌ಗೆ ಈಗ ಗಿಫ್ಟ್ ಕೊಡಲು ಅಮೆರಿಕ ಮುಂದೆ ಬಂದಿದೆ. ದೊಡ್ಡಣ್ಣ ಕೈಗೊಂಡ ಈ ನಿರ್ಧಾರ ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ.

ರಷ್ಯಾ ದಾಳಿಗೆ ಬೆಚ್ಚಿಬಿದ್ದ ಉಕ್ರೇನ್

ಎಫ್-16 ಯುದ್ಧ ವಿಮಾನಗಳನ್ನ ಯುರೋಪ್‌ನಲ್ಲಿನ ನ್ಯಾಟೋ ಮಿತ್ರರ ಮೂಲಕ ಉಕ್ರೇನ್‌ಗೆ ತಲುಪಿಸಲು ದೊಡ್ಡಣ್ಣ ಅಮೆರಿಕ ಮುಂದಾಗಿದೆ. ಡೆನ್ಮಾರ್ಕ್ ಹಾಗೂ ನೆದರ್ಲ್ಯಾಂಡ್ ಜೊತೆಗೆ ಸೇರಿ ಉಕ್ರೇನ್‌ಗೆ ಎಫ್-16 ವಿಮಾನ ಕಳುಹಿಸಲು ಅಮೆರಿಕವು ರೆಡಿಯಾಗಿದೆ. ಅಧಿಕೃತವಾಗಿ ಈ ಬಗ್ಗೆ ಅಮೆರಿಕ ಪತ್ರ ಬರೆದಿದ್ದು, ಸಂಚಲನ ಸೃಷ್ಟಿಯಾಗಿದೆ. ಅಮೆರಿಕದ ಕ್ರಮದ ಬಗ್ಗೆ ರಷ್ಯಾ ಯಾವ ರೀತಿ ಕ್ರಮ ಕೈಗೊಳ್ಳುತ್ತೆ? ಎಂಬ ಪ್ರಶ್ನೆ ಎದ್ದಿರುವಾಗಲೇ ಭೀಕರ ದಾಳಿ ನಡೆದಿದೆ. ಈ ದಾಳಿಗೆ ಉಕ್ರೇನ್ ನಡುಗಿ ಹೋಗಿದೆ.

Allegedly 7 killed in ukraine after Russian missile attack

ಒಟ್ನಲ್ಲಿ ಕೋಳಿ ಜಗಳದ ರೀತಿ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಎರಡು ವರ್ಷದ ಕಡೆ ಪಯಣ ಬೆಳೆಸಿದೆ. ಮುಂದಿನ 10 ವರ್ಷದಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದೆ. ಅಮೆರಿಕ ಕೂಡ ಶಾಂತಿ ಮಾತುಕತೆಗೆ ಬದಲಾಗಿ ಉಕ್ರೇನ್‌ಗೆ ಅಸ್ತ್ರಗಳನ್ನ ನೀಡುತ್ತಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಇದು ರಷ್ಯಾಗೆ ಕೋಪ ತರಿಸುತ್ತಿದ್ದು ತನ್ನ ದಾಳಿಯನ್ನ ದಿನದಿಂದ ದಿನಕ್ಕೆ ಭೀಕರಗೊಳಿಸುತ್ತಿದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+