• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ 2 ದೇಶಗಳ 7 ನಗರಗಳಿಗೆ ಏರ್‌ಇಂಡಿಯಾ ವಿಮಾನ ಹಾರಾಟ

|

ನವದೆಹಲಿ, ಜೂನ್ 4: ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಮೂರನೇ ಹಂತದಲ್ಲಿ ವಿಶ್ವದ 2 ದೇಶಗಳ 7 ನಗರಗಳಿಗೆ ಏರ್‌ ಇಂಡಿಯಾ ವಿಮಾನಗಳು ಹಾರಾಟ ನಡೆಸಲಿವೆ.

ಜೂನ್ 5 ರ ಸಂಜೆ 5 ಗಂಟೆಯಿಂದ ಬುಕಿಂಗ್ ಆರಂಭವಾಗಲಿವೆ. ಅಮೆರಿಕ ಹಾಗೂ ಕೆನಡಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಯೋಜನೆಯ ಮೂರನೇ ಹಂತ ಇದಾಗಿದ್ದು ಜೂನ್ 9-30ರವರೆಗೆ ವಿಮಾನ ಹಾರಾಟ ನಡೆಸಲಿದೆ.

ನ್ಯೂಯಾರ್ಕ್, ನೇವಾರ್ಕ್, ಚಿಕಾಗೋ, ವಾಷಿಂಗ್ಟನ್, ಸಾನ್ ಫ್ರಾನ್ಸಿಸ್ಕೋ, ವ್ಯಾನ್‌ಕೋವರ್, ಟೊರೋಂಟೋಗೆ ವಿಮಾನ ಹಾರಾಟ ನಡೆಸಲಿದೆ.

ಸದ್ಯದ ಹವಾಮಾನ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆ ಸಾಧ್ಯವಿಲ್ಲ: ಅದಾನಿ ಗ್ರೂಪ್

ಸಾಮಾನ್ಯ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಕಾರ್ಯಾಚರಣೆಯನ್ನು ಅವರಿಗೆ ಸಾಧ್ಯವಾದಾಗ ಆರಂಭಿಸುತ್ತವೆ. ಇದೀಗ ನಮ್ಮ ಮೆಟ್ರೋ ನಗರಗಳು ಸಾಕಷ್ಟು ನಿರ್ಬಂಧಗಳಿಗೆ ಒಳಪಟ್ಟಿದೆ. ವಿಮಾನ ನಿಲ್ದಾಣಕ್ಕೆ ಬರುವುದಕ್ಕೆ ಕೆಲವರಿಂದ ಸಾಧ್ಯವಾಗುತ್ತಿಲ್ಲ.

ವಿಮಾನದಲ್ಲಿ ಪ್ರಯಾಣಿಸಿದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವ ಅಗತ್ಯವಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ದೇಶೀಯ ವಿಮಾನಗಳ ಹಾರಾಟ ಶೇ.50-60ರ ಹಂತಕ್ಕೆ ತಲುಪಬೇಕಿದೆ. ವೈರಸ್ ಹರಡುವಿಕೆ ಬಗ್ಗೆಯೂ ಎಚ್ಚರವಹಿಸಬೇಕಿದೆ. ಅಲ್ಲಿಯವರೆಗೆ ವಂದೇ ಭಾರತ್ ಮಿಷನ್ ಅಡಿ ವಿಮಾನಗಳು ಹಾರಾಟ ನಡೆಸುತ್ತವೆ.

ಅಲ್‌ನಾಕ್ ಮೂರನೇ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ಆರಂಭಿಸಬಹುದು ಎಂದು ಅಂದಾಜಿಸಲಾಗಿದೆ. ಜೂನ್ 8 ರಿಂದ ಧಾರ್ಮಿಕ ಸ್ಥಳಗಳು, ಹೋಟೆಲ್, ರೆಸ್ಟೋರೆಂಟ್‌ಗಳು, ಶಾಪಿಂಗ್ ಮಾಲ್‌ಗಳು ಆರಂಭವಾಗಲಿವೆ.

ಅನ್‌ಲಾನ್ ಎರಡನೇ ಹಂತದಲ್ಲಿ ಶಿಕ್ಷಣ ಸಂಸ್ಥೆಗಳು ತೆರೆಯುವ ಸಾಧ್ಯತೆ ಇದ್ದು ಅನ್‌ಲಾಕ್ ಮೂರನೇ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಲಿವೆ.

English summary
While the resumption of international flights will take some time, Air India will open bookings from 5 PM on June 5 for destinations in US and Canada under Vande Bharat Mission’s third phase which will ferry stranded passengers to several destinations in the US between June 9 and June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X