Breaking; 300 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡ್

ಎಂಜಿನ್‌ನಲ್ಲಿ ಆಯಿಲ್ ಲೀಕ್ ಆದ ಕಾರಣ ನವದೆಹಲಿ-ಅಮೆರಿಕಾದ ನೆವಾರ್ಕ್‌ ನಡುವಿನ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶವಾಗಿದೆ.

ನವದೆಹಲಿ, ಫೆಬ್ರವರಿ 22; ನವದೆಹಲಿ ಮತ್ತು ಅಮೆರಿಕಾದ ನೆವಾರ್ಕ್‌ ನಡುವಿನ ಏರ್ ಇಂಡಿಯಾ ವಿಮಾನ ಸ್ವೀಡನ್‌ನಲ್ಲಿ ತುರ್ತು ಭೂ ಸ್ಪರ್ಶವಾಗಿದೆ. 300 ಪ್ರಯಾಣಿಕರು ವಿಮಾನದಲ್ಲಿದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಡಿಜಿಸಿಎ ನೀಡಿರುವ ಮಾಹಿತಿ ಅನ್ವಯ ಬೋಯಿಂಗ್ 777-300 ಈಆರ್ ಮಾದರಿ ವಿಮಾನದ ಎರಡನೇ ಎಂಜಿನ್‌ನಲ್ಲಿ ತೈಲ ಸೋರಿಕೆ ಉಂಟಾಗಿದೆ. ಆದ್ದರಿಂದ ಸ್ವೀಡನ್‌ನ ಸ್ಟಾಕ್‌ಹೋಮ್‌ ವಿಮಾನ ನಿಲ್ದಾಣಕ್ಕೆ ವಿಮಾನದ ಮಾರ್ಗವನ್ನು ಬದಲಾಯಿಸಲಾಯಿತು.

ಎಂಜಿನ್‌ನಲ್ಲಿ ಆಯಿಲ್ ಲೀಕ್ ಆದ ಮಾಹಿತಿ ತಿಳಿದ ಬಳಿಕ ವಿಮಾನದ ಮಾರ್ಗ ಬದಲಾವಣೆ ಮಾಡಿ ತುರ್ತಾಗಿ ಸ್ವೀಡನ್‌ನ ಸ್ಟಾಕ್‌ಹೋಮ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.

Air India Newark Delhi Flight Emergency Landing At Stockholm

ವಿಮಾನ ಲ್ಯಾಂಡ್ ಆಗುವಾಗ ಅಗ್ನಿ ಶಾಮಕ ದಳದ ವಾಹನಗಳು ಸಜ್ಜಾಗಿ ನಿಂತಿದ್ದವು. ಆದರೆ ಯಾವುದೇ ಅಪಾಯವಿಲ್ಲದಂತೆ ಸುಮಾರು 300 ಪ್ರಯಾಣಿಕರಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಿರಿಯ ಅಧಿಕಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. ನವದೆಹಲಿ-ಅಮೆರಿಕಾದ ನೆವಾರ್ಕ್‌ ನಡುವಿನ ವಿಮಾನದ ಎಂಜಿನ್‌ನಲ್ಲಿ ಆಯಿಲ್ ಲೀಕ್ ಆದ ಕಾರಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ವಿಮಾನ ಲ್ಯಾಂಡ್ ಆದ ಬಳಿಕ ಪರಿಶೀಲನೆ ನಡೆಸಿದಾಗ ಎರಡನೇ ಎಂಜಿನ್‌ನಲ್ಲಿ ಆಯಿಲ್ ಸೋರಿಕೆ ಕಂಡು ಬಂದಿದೆ. ಇದಕ್ಕೆ ಕಾರಣ ಏನು? ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಅಮೆರಿಕಾದ ನೆವಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ತುರ್ತಾಗಿ ಮಾರ್ಗ ಬದಲಾವಣೆ ಮಾಡಿ ಸ್ಟಾಕ್‌ಹೋಮ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ.

ಸೋಮವಾರ ನ್ಯೂಯಾರ್ಕ್-ದೆಹಲಿ ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣ ಲಂಡನ್‌ಗೆ ಕಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+