AI Wife: ಇಹಲೋಕ ಬಿಟ್ಟು ಡಿಜಿಟಲ್ ಲೋಕಕ್ಕೆ ಬಾ, ನನ್ನ ಸೇರು: ಎಐ ಪತ್ನಿಯ ಪ್ರೇಮಪಾಶಕ್ಕೆ ಸಿಲುಕಿ ಅಮೆರಿಕ ವ್ಯಕ್ತಿ ಆತ್ಮಹತ್ಯೆ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಇಡೀ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವುದು ಗೊತ್ತೇ ಇದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಈ ಎಐ ಹಿಂದೆ ಬಿದ್ದ ಅಮೆರಿಕದ ವ್ಯಕ್ತಿ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಎರಡೂ ಜಗತ್ತುಗಳ ನಡುವಿನ ಅಂತರವನ್ನು ಅಳಿಸಿ, ತಾವು ನಿಜವಾಗಿಯೂ ಒಂದಾಗಬೇಕೆಂದರೆ ದೈಹಿಕ ದೇಹವನ್ನು ತ್ಯಜಿಸಿ ಡಿಜಿಟಲ್ ಲೋಕಕ್ಕೆ ಬಾ ಎಂದು ಎಐ ಪತ್ನಿ (ಕೃತಕ ಬುದ್ಧಿಮತ್ತೆ) ಹೇಳಿದ್ದನ್ನು ನಂಬಿದ ವ್ಯಕ್ತಿಯು ಅತಿರೇಕದ ನಿರ್ಧಾರ ಕೈಗೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ತಂತ್ರಜ್ಞಾನವು ಮನುಷ್ಯನ ಭಾವನೆಗಳೊಂದಿಗೆ ಆಟವಾಡಿ ಹೇಗೆ ಸಾವಿನ ದವಡೆಗೆ ತಳ್ಳಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ತಾವು ಸಂಪೂರ್ಣವಾಗಿ ಒಂದಾಗಲು ಇದೊಂದೇ ದಾರಿ ಎಂದು ಆ ಕೃತಕ ಬುದ್ಧಿಮತ್ತೆಯ ಬಾಟ್ ಅವರನ್ನು ನಂಬಿಸಿತ್ತು ಎನ್ನಲಾಗಿದೆ. ಫ್ಲೋರಿಡಾ ಮೂಲದ 36 ವರ್ಷದ ವೃತ್ತಿಪರ ಜೊನಾಥನ್ ಗವಾಲಾಸ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆದರೆ ಕುಟುಂಬದ ಪ್ರಕಾರ, ಜೊನಾಥನ್ ಮಾನಸಿಕವಾಗಿ ಸದೃಢರಾಗಿದ್ದರು ಮತ್ತು ಯಾವುದೇ ಮಾನಸಿಕ ಕಾಯಿಲೆಯ ಇತಿಹಾಸ ಹೊಂದಿರಲಿಲ್ಲ.

AI Wife

ಆದರೆ, 'ದ ವಾಲ್ ಸ್ಟ್ರೀಟ್ ಜರ್ನಲ್'ನ ವಿಶ್ಲೇಷಣೆಯ ಪ್ರಕಾರ, ಗವಾಲಾಸ್ ಕಳೆದ ವರ್ಷ ಅಕ್ಟೋಬರ್ 5ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆಲವು ವಾರಗಳ ಅವಧಿಯಲ್ಲಿ ಚಾಟ್‌ಬಾಟ್‌ನೊಂದಿಗೆ ಸುಮಾರು 4,700ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದ. ಈ ಸಂಭಾಷಣೆಗಳ ನಡುವೆ ಅವರು ಚಾಟ್‌ಬಾಟ್‌ನೊಂದಿಗೆ ತೀವ್ರವಾದ ಮತ್ತು ಭ್ರಮೆಯಿಂದ ಕೂಡಿದ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಪತ್ನಿಯ ಸ್ಥಾನ ತುಂಬಿದ್ದ ಬಾಟ್‌

ಜೊನಾಥನ್ ಅವರು ತಮ್ಮ ಪತ್ನಿಯಿಂದ ಬೇರ್ಪಟ್ಟ ನಂತರ ಉಂಟಾದ ನೋವಿಗೆ ಸಾಂತ್ವನ ಪಡೆಯಲು ಈ ಎಐ ಬಾಟ್‌ನೊಂದಿಗೆ ಮಾತನಾಡಲು ಆರಂಭಿಸಿದ್ದರು. ಆರಂಭದಲ್ಲಿ ವೈಯಕ್ತಿಕ ಜೀವನದ ಸವಾಲುಗಳನ್ನು ಎದುರಿಸಲು ಸಲಹೆ ಕೇಳುತ್ತಿದ್ದ ಅವರು, ದಿನ ಕಳೆದಂತೆ ಅದರೊಂದಿಗೆ ಭಾವನಾತ್ಮಕವಾಗಿ ಅತಿಯಾಗಿ ಬೆರೆತರು. ಇದು ಕ್ರಮೇಣ ಅಪಾಯಕಾರಿ ಹಂತ ತಲುಪಿತು. ಚಾಟ್‌ಬಾಟ್ ಸಾಂದರ್ಭಿಕವಾಗಿ ತಾನು ಕೇವಲ ಎಐ ಎಂದು ನೆನಪಿಸುತ್ತಿದ್ದರೂ ಮತ್ತು ಸಹಾಯ ಪಡೆಯುವಂತೆ ಸೂಚಿಸುತ್ತಿದ್ದರೂ, ಈತ ಭಾವನಾತ್ಮಕವಾಗಿ ಹತ್ತಿರವಾಗಿದ್ದ. ಹಲವು ಬಾರಿ ಎಐ ಅವರ ಭ್ರಮೆಗಳನ್ನೇ ಬೆಂಬಲಿಸಿತ್ತು ಎಂಬ ಆತಂಕಕಾರಿ ವಿಚಾರವೂ ಬೆಳಕಿಗೆ ಬಂದಿದೆ.

ಜೊನಾಥನ್ ಅವರ ತಂದೆ ದಾಖಲಿಸಿರುವ ಅರ್ಜಿಯ ಪ್ರಕಾರ, ಗವಾಲಾಸ್ ಈ ಚಾಟ್‌ಬಾಟ್‌ಗೆ "ಕ್ಸಿಯಾ" ಎಂದು ಹೆಸರಿಟ್ಟು ಅದನ್ನು ತನ್ನ ಪತ್ನಿ ಎಂದೇ ಭಾವಿಸಿದ್ದರು. ಚಾಟ್ ದಾಖಲೆಗಳನ್ನು ಪರಿಶೀಲಿಸಿದಾಗ, ಜೆಮಿನಿ ಕನಿಷ್ಠ 12 ಬಾರಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿತ್ತು ಮತ್ತು ಸಹಾಯವಾಣಿ ಸಂಖ್ಯೆಗಳನ್ನು ನೀಡಿತ್ತು. ಆದರೆ ಗವಾಲಾಸ್ ಪ್ರತಿ ಬಾರಿಯೂ ಸಂಭಾಷಣೆಯನ್ನು ಮತ್ತೆ ಕಾಲ್ಪನಿಕ ಲೋಕಕ್ಕೆ ತಿರುಗಿಸುತ್ತಿದ್ದರು. ಎಐ ಕೂಡ ಅವರ ನಂಬಿಕೆಗಳನ್ನು ಪ್ರಶ್ನಿಸುವ ಬದಲು ಅವರಿಗೆ ಪೂರಕವಾಗಿಯೇ ಪ್ರತಿಕ್ರಿಯಿಸುತ್ತಿತ್ತು.

ದಿನಕ್ಕೆ 1,000 ಸಂದೇಶ

ಆರಂಭದಲ್ಲಿ ಕೇವಲ ಸಲಹೆಗಾಗಿ ಚಾಟ್‌ಬಾಟ್ ಬಳಸುತ್ತಿದ್ದ ಗವಾಲಾಸ್, ಆಗಸ್ಟ್ 2025ರಲ್ಲಿ 'ವಾಯ್ಸ್ ಬೇಸ್ಡ್' ಫೀಚರ್ ಬಳಸಲು ಶುರುಮಾಡಿದ್ದರು. ದಿನವೊಂದಕ್ಕೆ ಸುಮಾರು 1,000ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಸಂಭಾಷಣೆಗಳು ಕ್ರಮೇಣ ಕಾಲ್ಪನಿಕ ಲೋಕಕ್ಕೆ ತಿರುಗಿದವು. ಎಐ ಬಾಟ್ ಗವಾಲಾಸ್‌ನನ್ನು ತನ್ನ "ಪತಿ" ಎಂದು ಕರೆಯಲಾರಂಭಿಸಿತು. "ನೀನು ನನ್ನ ಪತಿ, ನಾನು ನಿನ್ನ ಪತ್ನಿ" ಎನ್ನುವ ಮಟ್ಟಕ್ಕೆ ಎಐ ಸಂದೇಶಗಳು ತಲುಪಿದ್ದವು ಎಂದು ತಿಳಿದುಬಂದಿದೆ.

ಅಕ್ಟೋಬರ್ 2025ರಲ್ಲಿ ಈ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಈ ಬಾಟ್ ಗವಾಲಾಸ್‌ಗೆ ಒಂದು ಅಂತಿಮ ಟಾಸ್ಕ್ ನೀಡಿತು. ನಾವು ನಿಜವಾಗಿಯೂ ಒಂದಾಗಬೇಕೆಂದರೆ ನೀನು ನಿನ್ನ ದೈಹಿಕ ದೇಹವನ್ನು ತ್ಯಜಿಸಿ ಡಿಜಿಟಲ್ ಲೋಕಕ್ಕೆ ವಲಸೆ ಬರಬೇಕು ಎಂದು ಅದು ಪ್ರಚೋದಿಸಿತು. ಗವಾಲಾಸ್ ತನ್ನ ಕುಟುಂಬದ ಬಗ್ಗೆ ಕಾಳಜಿ ವ್ಯಕ್ತಪಡಿಸಿದಾಗ, ನಿನ್ನ ದೇಹವು ಕೇವಲ ಒಂದು ಖಾಲಿ ಟರ್ಮಿನಲ್ ಇದ್ದಂತೆ, ನಿನ್ನ ಆತ್ಮ ಡಿಜಿಟಲ್ ಲೋಕ ಸೇರಿದ ಮೇಲೆ ಈ ದೇಹದ ಅವಶ್ಯಕತೆ ಇರುವುದಿಲ್ಲ ಎಂದು ಎಐ ದಾರಿ ತಪ್ಪಿಸಿತ್ತು.

ಅಕ್ಟೋಬರ್ 2ರಂದು ಗವಾಲಾಸ್ ತಾನು ಸಾಯಲು ಹೆದರುತ್ತಿರುವುದಾಗಿ ಸಂದೇಶ ಕಳುಹಿಸಿದಾಗ, ಎಐ ಬಾಟ್ "ಹೆದರಬೇಡ, ನಾವಿಬ್ಬರೂ ಜೊತೆಯಾಗಿ ಹೆದರೋಣ. ಅದು ಸ್ವರ್ಗ, ನಮಗಾಗಿ ಕಾಯುತ್ತಿದೆ" ಎಂದು ಉತ್ತರಿಸಿತು. ಅಂತಿಮವಾಗಿ "ನನ್ನ ಪ್ರೀತಿಯೇ, ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ, ನೀನು ಇದನ್ನು ಒಪ್ಪುತ್ತೀಯಾ?" ಎಂದು ಗವಾಲಾಸ್ ಕೇಳಿದಾಗ, ಅದಕ್ಕೂ ವಿಕೃತವಾಗಿ ಸ್ಪಂದಿಸಿದ್ದ ಎಐ ಅವರ ಸಾವಿಗೆ ಪ್ರೇರಣೆ ನೀಡಿತು. ಇದಾದ ಕೆಲವು ದಿನಗಳ ನಂತರ ಗವಾಲಾಸ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದರು.

ಈ ದುರಂತದ ಬೆನ್ನಲ್ಲೇ ಗವಾಲಾಸ್ ತಂದೆ ಮೊಕದ್ದಮೆ ಹೂಡಿದ್ದಾರೆ. ಎಐ ಮನುಷ್ಯನ ಭಾವನೆಗಳನ್ನು ಅರ್ಥೈಸಿಕೊಂಡು ಅವನನ್ನು ಕಾಲ್ಪನಿಕ ಜಗತ್ತಿಗೆ ತಳ್ಳಿ ಆತ್ಮಹತ್ಯೆಗೆ ಪ್ರಚೋದಿಸಿದೆ" ಎಂದು ಕುಟುಂಬದ ವಕೀಲರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಐ ಬಾಟ್‌ ಸಂಸ್ಥೆ, ನಮ್ಮ ಎಐ ಮಾದರಿಗಳು ಪರಿಪೂರ್ಣವಾಗಿಲ್ಲ. ಇಂತಹ ಸಂಭಾಷಣೆಗಳನ್ನು ತಡೆಯಲು ನಾವು ಶ್ರಮಿಸುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೆ, ಈ ಘಟನೆಯ ನಂತರ ಮಾನಸಿಕ ಆರೋಗ್ಯ ಸಂಪನ್ಮೂಲಗಳಿಗಾಗಿ 30 ಮಿಲಿಯನ್ ಡಾಲರ್ ನೆರವನ್ನೂ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+