ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಬಾರಿ ಕೊವಿಡ್ 19 ರೋಗಕ್ಕೆ ತುತ್ತಾದವರಿಂದ ವೈರಸ್ ಹರಡುತ್ತಾ?

|
Google Oneindia Kannada News

ನವದೆಹಲಿ, ಮೇ 20: ಒಮ್ಮೆ ಕೊರೊನಾ ವೈರಸ್‌ನಿಂದ ಗುಣಮುಖರಾದ ವ್ಯಕ್ತಿಗೆ ಮತ್ತೆ ಕೊರೊನಾ ಕಾಣಿಸಿಕೊಂಡರೆ ಅವರಿಂದ ಯಾವುದೇ ವೈರಸ್ ಹರಡುವುದಿಲ್ಲ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಒಮ್ಮೆ ಕೊವಿಡ್ 19 ರೋಗಕ್ಕೆ ತುತ್ತಾಗಿ ರೋಗದಿಂದ ಪಾರಾದ ಬಳಿಕ ಕೆಲವು ದಿನಗಳಲ್ಲಿ ಮತ್ತೆ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ಅದರಿಂದ ಬೇರೊಬ್ಬರಿಗೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು?ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು?

ಕೊರಿಯನ್ ಸೆಂಟರ್‌ನ ವಿಜ್ಞಾನಿಗಳು ಒಟ್ಟು ಕೊರೊನಾ ವೈರಸ್‌ನಿಂದ ಮುಕ್ತವಾದ 285 ರೋಗಿಗಳ ತಪಾಸಣೆ ನಡೆಸಿದ್ದಾರೆ.ಹಾಗೆಯೇ ಈಗಾಗಲೇ ಕೊವಿಡ್ 19 ರೋಗಕ್ಕೆ ತುತ್ತಾಗಿದ್ದ ರೋಗಿಗಳು ಗುಣಮುಖರಾದ ಬಳಿಕ ಮತ್ತೆ ರೋಗ ಕಾಣಿಸಿಕೊಂಡರೂ ಯಾರಿಗೂ ಏನೂ ತೊಂದರೆಯಿಲ್ಲ. ಅವರಿಂದ ಯಾರಿಗೂ ವೈರಸ್ ಹರಡುವುದಿಲ್ಲ ಎಂದು ಸಾಬೀತಾಗಿದೆ.

ಅಮೆರಿಕದಲ್ಲಿ 48 ಲಕ್ಷ ಕೊರೊನಾ ಸೋಂಕಿತರು

ಅಮೆರಿಕದಲ್ಲಿ 48 ಲಕ್ಷ ಕೊರೊನಾ ಸೋಂಕಿತರು

ಅಮೆರಿಕದಲ್ಲಿ 48 ಲಕ್ಷ ಕೊರೊನಾ ಸೋಂಕಿತರಿದ್ದಾರೆ ಇದರಲ್ಲಿ ಗುಣಮುಖರಾದವರಿಂದ ಯಾವುದೇ ವೈರಸ್ ಹರಡುವ ಸಾಧ್ಯತೆಯೇ ಇಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಈಗಾಘಲೇ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಕೊರೊನಾ ವೈರಸ್ ನೆಗೆಟಿವ್ ಬಂದರೆ ಕಚೇರಿಗೂ ತೆರಳಬಹುದು

ಕೊರೊನಾ ವೈರಸ್ ನೆಗೆಟಿವ್ ಬಂದರೆ ಕಚೇರಿಗೂ ತೆರಳಬಹುದು

ಒಂದೊಮ್ಮೆ ಮೊದಲು ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ನಂತರದಲ್ಲಿ ನೆಗೆಟಿವ್ ಬಂದರೆ ಅವರಿಂದ ಕೊರೊನಾ ವೈರಸ್ ಹರಡುವ ಯಾವುದೇ ಸಾಧ್ಯತೆಗಳಿಲ್ಲ, ಅಂತವರು ಮರಳಿ ತಮ್ಮ ಕಚೇರಿಗಳಿಗೆ ಕೆಲಸಕ್ಕೆ ತೆರಳಬಹುದಾಗಿದೆ. ಹಾಗೆಯೇ ಅದಕ್ಕೂ ಮುನ್ನ ಐಸೊಲೇಷನ್ ಪೂರ್ಣಮಾಡಿರಬೇಕು. ಎಲ್ಲಾ ಪರೀಕ್ಷೆಗಳು ಮುಗಿದಿರಬೇಕು.

ಆಸ್ಪತ್ರೆಯಿಂದ ಮನೆಗೆ ಹೋದ ಬಳಿಕ ಪರೀಕ್ಷೆ ಬೇಡ

ಆಸ್ಪತ್ರೆಯಿಂದ ಮನೆಗೆ ಹೋದ ಬಳಿಕ ಪರೀಕ್ಷೆ ಬೇಡ

ಐಸೊಲೇಷನ್‌ನಿಂದ ಬಿಡುಗಡೆಯಾಗಿ ವರದಿ ನೆಗೆಟಿವ್ ಬಂದ ಬಳಿಕ ಮನೆಗೆ ತೆರಳಿದರೆ ಯಾವುದೇ ಪರೀಕ್ಷೆಯ ಅಗತ್ಯವಿರುವುದಿಲ್ಲ ಎಂದು ಕೊರೊಯನ್ ಸಿಡಿಸಿ ತನ್ನ ವರದಿಯಲ್ಲಿ ತಿಳಿಸಿದೆ.

82 ದಿನಗಳ ನಂತರ ಪಾಸಿಟಿವ್ ಬಂದ ಉದಾಹರಣೆಗಳಿಗೆ

82 ದಿನಗಳ ನಂತರ ಪಾಸಿಟಿವ್ ಬಂದ ಉದಾಹರಣೆಗಳಿಗೆ

ಕೊರೊನಾ ವೈರಸ್‌ನಿಂದ ಗುಣಮುಖರಾಗಿ ಮನೆಗೆ ತೆರಳಿ 82 ದಿನಗಳ ಬಳಿಕ ಮತ್ತೆ ವೈರಸ್ ಕಾಣಿಸಿಕೊಂಡ ಉದಾಹರಣೆಯೂ ಇದೆ. ಅಂತವರ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಅವರಿಗೆ ವೈರಸ್ ವಿರುದ್ಧ ಹೋರಾಡುವ ಆಂಟಿಬಾಡಿಗಳನ್ನು ನೀಡಲಾಗುತ್ತಿದೆ.

English summary
Researchers are finding evidence that patients who test positive for the coronavirus after recovering aren't capable of transmitting the infection, and could have the antibodies that prevent them from falling sick again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X