• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ನಲ್ಲಿ ಕ್ಯಾತೆ ತೆಗೆದು ಈಗ ನಾವು ಭೂಮಿ ಕಬಳಿಸುವವರಲ್ಲ ಎಂದ ಚೀನಾ

|
Google Oneindia Kannada News

ನವದೆಹಲಿ, ಜುಲೈ 4: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಗಡಿ ಕ್ಯಾತೆ ತೆಗೆದು ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದ್ದ ಚೀನಾ ಇದೀಗ ವರಸೆ ಬದಲಿಸಿದೆ. ನಾವು ಭೂಮಿ ಕಬಳಿಸುವವರಲ್ಲ ಎಂದು ಹೇಳಿದೆ.

Recommended Video

   ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

   ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗಡಿವಿಸ್ತರಣೆಯ ಯುಗ ಮುಗಿದು ಹೋಗಿದೆ. ಭಾರತದ ಶತ್ರುಗಳಿಗೆ ನಿಮ್ಮೆಲ್ಲ ಶಕ್ತ, ಸಾಮರ್ಥ್ಯ, ಶೌರ್ಯದ ಪರಿಚಯವಾಗಿದೆ ಎಂದು ಹೇಳಿ, ಚೀನಾದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

   Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?

   ಇದಾದ ಬಳಿಕ ಚೀನಾ ಪ್ರತಿಕ್ರಿಯೆ ನೀಡಿದ್ದು, ನಾವು ಬೇರೆಯವರ ಭೂಮಿಯನ್ನು ಕಬಳಿಸುವವರಲ್ಲ. ನಮಗೆ ರಾಜ್ಯ ವಿಸ್ತರಣೆಯ ಅವಶ್ಯಕತೆಯೂ ಇಲ್ಲ... ಅದಕ್ಕಾಗಿ ಹುನ್ನಾರ ನಡೆಸುವವರಂತೂ ಅಲ್ಲ ಎಂದು ಚೀನಾ ಹೇಳಿದೆ.

   ಲೇಹ್​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಡಿ ವಿಸ್ತರಣೆಯವರ ಕಾಲ ಮುಗಿದಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಪರ್ವದ ಕಾಲವಾಗಿದೆ.
   ಭೂಕಬಳಿಸುವವರು ಅಂಥ ಕುಕೃತ್ಯಗಳನ್ನು ಕೈಬಿಟ್ಟು ಸುಮ್ಮನಿರಬೇಕು. ಇಲ್ಲವೇ ನಾಶವಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು.

   ಅವರ ಈ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಮಾಡಿರುವ ಭೂಕಬಳಿಕೆಯ ಆರೋಪಗಳೆಲ್ಲವೂ ಸುಳ್ಳು. ನಾವು ಅಂಥ ಮನೋಭಾವದವರೇ ಅಲ್ಲ ಎಂದು ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್​ ಹೇಳಿದ್ದಾರೆ.

   ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಚೀನಾ 14 ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ 12 ರಾಷ್ಟ್ರಗಳ ಜತೆ ಮಾತುಕತೆಯ ಮೂಲಕ ಶಾಂತಿಯುತವಾಗಿ ಗಡಿಯನ್ನು ನಿಖರವಾಗಿ ಗುರುತಿಸಿಕೊಂಡಿದೆ.

   ಸ್ನೇಹ ಮತ್ತು ಸೌಹಾರ್ದಯುತವಾಗಿ ಆ ರಾಷ್ಟ್ರಗಳೊಂದಿಗೆ ಒಡನಾಟವಿದೆ. ಹೀಗಿರುವಾಗ ಚೀನಾವನ್ನು ಗಡಿವಿಸ್ತರಣೆಯ ಆಸೆ ಹೊಂದಿರುವ ರಾಷ್ಟ್ರದ ಎಂದು ದೂಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

   English summary
   PM Modi’s visit to Leh in the middle of the military stand-off seemed to have peeved China with its foreign ministry saying that neither side should take any action that may complicate the border situation and its embassy in India countering Modi's Charge Of Chinese Expansion.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X