'ಮಾವಿನ ನಂತರ ವೀಳ್ಯದೆಲೆಗೆ ನಿಷೇಧದ ಭೀತಿ'
ಲಂಡನ್, ಜೂ.15: ಭಾರತದಿಂದ ಆಮದಾಗುವ ಅಲ್ಫಾನ್ಸೊ ಮಾವಿಗೆ ನಿಷೇಧ ಹೇರಿರುವ ಯುರೋಪ್ಯ ಒಕ್ಕೂಟ ಈಗ ಭಾರತದ ವೀಳ್ಯದೆಲೆ(ಪಾನ್) ಐರೋಪ್ಯ ಮಾರುಕಟ್ಟೆಯ ಅವಕೃಪೆಗೆ ತುತ್ತಾಗಲಿದೆ.
2011ರ ಆಗಸ್ಟ್‌ನಿಂದ ಬ್ರಿಟನ್‌ಗೆ ಆಮದಾಗಿರುವ ವೀಳ್ಯದೆಲೆಗಳಲ್ಲಿ ಭಾರೀ ಪ್ರಮಾಣದ ಸಾಲ್ಮೊನೆಲ್ಲ(ಸಾಲ್ಮನೆಲ್ ವರ್ಗದ ಬ್ಯಾಕ್ಟೀರಿಯ) ಅಂಶ ಪತ್ತೆಯಾಗಿದೆ ಎಂದು ಐರೋಪ್ಯ ಆಯೋಗ ಆರ್‌ಎಎಸ್‌ಎಫ್‌ಎಫ್ ಪ್ರಕಟಿಸಿದೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಭಾರತದಿಂದ ಆಮದಾಗುವ ಅನೇಕ ತರಕಾರಿ, ಹಣ್ಣುಗಳಿಗೆ ನಿಷೇಧ ಹೇರಲು ಯುರೋಪಿನ ಒಕ್ಕೂಟ ಚಿಂತನೆ ನಡೆಸಿದೆ.
ಸಾಲ್ಮೊನೆಲ್ಲವು ತೀವ್ರ ಅತಿಸಾರ ಹಾಗೂ ವಾಂತಿಗೆ ಕಾರಣವಾಗುತ್ತದೆ. 'ಬ್ರಿಟನ್‌ಗೆ ದೊರೆತಿರುವ ಸತತ ವರದಿಗಳ ಆಧಾರದಲ್ಲಿ ಭಾರತದಿಂದ ಆಮದಾಗುವ ವೀಳ್ಯದೆಲೆ ಸಂಗ್ರಹವನ್ನು ತೀವ್ರ ತಪಾಸಣೆಗೊಳಪಡಿಸುವಂತೆ ಮಾಡಿದೆ'ಎಂದು ಐರೋಪ್ಯ ಒಕ್ಕೂಟದ RASFF ಹೇಳಿದೆ.[ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ]

ವೀಳ್ಯದೆಲೆಗಳಿಂದ ಉಂಟಾಗುವ ಸಾಲ್ಮೊನೆಲ್ಲ ವಿಷಾಂಶದ ಹಾನಿಯ ಬಗ್ಗೆ ಗ್ರಾಹಕರಿಗೆ ಈಗಾಗಲೇ ಬ್ರಿಟನ್‌ನ ಆಹಾರ ಗುಣಮಟ್ಟ ಸಂಸ್ಥೆ(ಎಫ್‌ಎಸ್‌ಎ) ಎಚ್ಚರಿಕೆ ನೀಡಿದೆ. ಭಾರತ ಹಾಗೂ ಥಾಯ್ಲೆಂಡ್‌ನಿಂದ ಆಮದಾಗುವ ವೀಳ್ಯದೆಲೆ ಸಂಗ್ರಹದ ಎಲ್ಲ ಮಾದರಿಗಳನ್ನು ಪರೀಕ್ಷೆಗೊಳಪಡಿಸಬೇಕೆಂದು ಎಫ್‌ಎಸ್‌ಎ ಬ್ರಿಟನ್‌ನ ಬಂದರು ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರಗಳನ್ನು ಕೇಳಿಕೊಂಡಿದೆ.
ರೋಗಕಾರಕಗಳು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಆರ್‌ಎಎಸ್‌ಎಫ್‌ಎಫ್‌ನಿಂದ ಭಾರತಕ್ಕೆ 257 ಅಧಿಸೂಚನೆಗಳನ್ನು ನೀಡಲಾಗಿದ್ದು, ಚೀನಾ(477)ಕ್ಕೆ ಅತ್ಯಧಿಕ ಅಧಿಸೂಚನೆಗಳನ್ನು ಪಡೆದ ರಾಷ್ಟ್ರವಾಗಿದೆ. ಜಾಗತಿಕವಾಗಿ ಆಹಾರ ಹಾಗೂ ಆಹಾರೋತ್ಪನ್ನಗಳ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯುರೋಪ್ ಆರ್‌ಎಎಸ್‌ಎಫ್‌ಎಫ್‌ನ್ನು ಅವಲಂಬಿಸಿದೆ ಎಂದು ಐರೋಪ್ಯ ಒಕ್ಕೂಟ ತಿಳಿಸಿದೆ.[ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ]
ಭಾರತದ ಮಾವಿನ ಜೊತೆಗೆ ನಿಷೇಧಕ್ಕೆ ಒಳಪಟ್ಟಿರುವ ಇತರ ಹಣ್ಣು ಹಾಗೂ ತರಕಾರಿಗಳಲ್ಲಿ ಕೊಲೊಕಾಸಿಯ(ಕೆಸು), ಹಾಗಲಕಾಯಿ, ನೆಲಗುಳ್ಳ ಹಾಗೂ ಪಡುವಲಕಾಯಿ ಕೂಡಾ ಸೇರಿವೆ. ಪರೀಕ್ಷೆಗೊಳಪಡಿಸಿದ ಹೆಚ್ಚಿನ ಹಣ್ಣುತರಕಾರಿಗಳಲ್ಲಿ ಕೀಟನಾಶಕಗಳ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಐರೋಪ್ಯ ಆಯೋಗವು ಈ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ. (ಪಿಟಿಐ)












Click it and Unblock the Notifications