ಅಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ:14 ಮಂದಿ ಬಲಿ
ಕಾಬೂಲ್, ಮಾರ್ಚ್ 24: ಅಫಘಾನಿಸ್ತಾನದ ಲಷ್ಕರ್ಗಾಹ್ ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 14 ಮಂದು ಮೃತರಾಗಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಲಷ್ಕರ್ಗಾಹ್ ನಗರದ ಸ್ಥಳೀಯ ಸ್ಟೇಡಿಯಂವೊಂದಲ್ಲಿ ನಿನ್ನೆ(ಮಾ.23) ಸ್ಫೋಟ ಸಂಭವಿಸಿದೆ. ಇಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯವೊಂದನ್ನು ನೋಡಲು ಆಗಮಿಸಿದ್ದ ಜನರ ಮೇಲೆ ದಾಳಿ ನಡೆದಿದೆ.

ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಈ ಕುರಿತು ತನಿಖೆ ಆರಂಭವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.
ಮಾ.21 ರಂದು ಅಫ್ಘನ್ನರು ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಸಂದರ್ಭದಲ್ಲಿ ಕಾಬೂಲ್ ನ ಮಸೀದಿಯೊಂದರಲ್ಲಿ ಸಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications