Taliban: ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ತಾಲಿಬಾನ್!
ಪಾಕಿಸ್ತಾನ & ತಾಲಿಬಾನ್ ನಡುವೆ ದೊಡ್ಡ ಕಿರಿಕ್ ಶುರುವಾಗಿದ್ದು, ಇಬ್ಬರೂ ಬಡಿದಾಡ್ತಾ ಇದ್ದಾರೆ. ಒಂದು ಕಡೆ ಇರಲಾರದೆ ಇರುವೆ ಬಿಟ್ಟುಕೊಂಡ ಪಾಕಿಸ್ತಾನಕ್ಕೆ ಇದೀಗ ಸರಿಯಾಗಿ ಬುದ್ಧಿ ಕಲಿಸಲು ನುಗ್ಗಿ ಬಂದಿರುವ ಅಫ್ಘಾನಿಸ್ತಾನ ಪಡೆಗಳು, ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿರುವ ಮಾಹಿತಿ ಸಿಕ್ಕಿದೆ. ಈ ಮೂಲಕ ಪಾಕಿಸ್ತಾನ & ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಕಿಚ್ಚು ಹೊತ್ತಿಕೊಂಡಿದೆ!
ಹೌದು, ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಅಫ್ಘಾನ್ ದೇಶದ ಭಾಗ ಪಕ್‌ಟಿಕಾ ಭಾಗದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪ ಮಾಡಿತ್ತು ಪಾಕಿಸ್ತಾನ. ಅಲ್ಲದೆ ಇದರ ಪರಿಣಾಮ ಪಾಕಿಸ್ತಾನಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಆರೋಪವನ್ನ ಮಾಡಿ ದಾಳಿ ಮಾಡಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಸೇನೆ ಜೊತೆ ತಾಲಿಬಾನ್ ತಿಕ್ಕಾಟ ಬಲು ಜೋರಾಗಿದೆ. ಇದೇ ಸಮಯದಲ್ಲಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಅಫ್ಘಾನಿಸ್ತಾನ ಪಡೆಗಳು ಮುಂದೆ ನುಗ್ಗಿವೆ.

ಅಫ್ಘಾನ್ & ಪಾಕ್ ಗಡಿಯಲ್ಲಿ ರಕ್ತಪಾತ!
ಪಾಕಿಸ್ತಾನ ನಡೆಸಿದ ವಾಯುದಾಳಿ & ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿರುವ ಅಫ್ಘಾನ್‌ನ ಪಡೆಗಳು, ಶತ್ರು ಪಾಳಯದ ರಕ್ತ ಹರಿಸಿವೆ ಎಂದು ವರದಿಯಾಗಿದೆ. ಅಲ್ಲದೆ ಈ ರೀತಿಯಾಗಿ ದಾಳಿ ನಡೆಸಿದ ಅಫ್ಘಾನಿಸ್ತಾನ ಫೋರ್ಸ್ ಕಂಡು ಪಾಕಿಸ್ತಾನ ಕೂಡ ಬೆಚ್ಚಿಬಿದ್ದಿದೆ. ಪಾಕಿಸ್ತಾನ ಅರೆಸೇನಾ ಪಡೆಯ ಯೋಧರು ಈ ದಾಳಿಯನ್ನು ಕಂಡು ನಡುಗಿ ಹೋಗಿದ್ದಾರೆ. ಮತ್ತೊಂದು ಕಡೆ ಇಬ್ಬರ ನಡುವಿನ ಈ ವಾರ್ ಮತ್ತಷ್ಟು ಜೋರಾಗುವ ಸಂಭವ ಹೆಚ್ಚಾಗಿದೆ.












Click it and Unblock the Notifications