• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಸೇರಿ ಯಾವುದೇ ದೇಶಗಳ ಜತೆ ಸಂಘರ್ಷ ಬಯಸುವುದಿಲ್ಲ ಎಂದ ತಾಲಿಬಾನ್

|
Google Oneindia Kannada News

ಕಾಬೂಲ್, ನವೆಂಬರ್ 15:ಭಾರತ ಸೇರಿ ಯಾವುದೇ ಯಾವುದೇ ದೇಶಗಳ ಜತೆ ತಾಲಿಬಾನ್ ಸಂಘರ್ಷವನ್ನು ಬಯಸುವುದಿಲ್ಲ ಎಂದು ತಾಲಿಬಾನ್ ನೇತೃತ್ವದ ಹಂಗಾಮಿ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಹೇಳಿದ್ದಾರೆ.

ಬಿಬಿಸಿ ಉರ್ದು ಜೊತೆ ಮಾತನಾಡುವಾಗ ಮುತ್ತಖಿ ಈ ರೀತಿಯ ಹೇಳಿಕೆ ನೀಡಿದ್ದಾನೆ. ಇರಾನ್, ಕಝಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳು ಭಾಗವಹಿಸಿದ್ದ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ಕುರಿತು ಎಂಟು ರಾಷ್ಟ್ರಗಳ ಸಂವಾದದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆ ವಹಿಸಿದ ಕೆಲವು ದಿನಗಳ ನಂತರ ಅವರ ಸಂದರ್ಶನ ಆಗಿದೆ.

ಅಫ್ಘಾನಿಸ್ತಾನ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆದ ಪಾಕಿಸ್ತಾನಅಫ್ಘಾನಿಸ್ತಾನ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆದ ಪಾಕಿಸ್ತಾನ

ಅಫ್ಘಾನಿಸ್ತಾನ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಇರಾನ್, ಕಝಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳ ಮಾತುಕತೆ ನಡೆದ ನಂತರ ಅಮೀರ್ ಖಾನ್ ಮುತ್ತಕಿ ಸಂದರ್ಶನ ನಡೆಸಲಾಗಿದೆ.

ಮಹಿಳಾ ಶಿಕ್ಷಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತ್ತಕಿ, ಅಫ್ಘಾನ್ ಮಹಿಳೆಯರನ್ನು ವಿವಿಧ ಕ್ಷೇತ್ರಗಳಿಂದ ಹೊರಗಿಡಲಾಗುತ್ತಿದೆ ಎಂಬುದನ್ನು ನಿರಾಕರಿಸಿದರು. ಮಹಿಳೆಯರು ಆರೋಗ್ಯ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ತೊಡಗಿಸಿಕೊಂಡಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲೂ ಬೋಧನೆ ಮಾಡುತ್ತಿದ್ದಾರೆ. ಅಗತ್ಯವಿರುವ ಪ್ರತಿಯೊಂದು ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮುತ್ತಕಿ ತಿಳಿಸಿದ್ದಾರೆ.

ಇದು ಮಹಿಳಾ ಪತ್ರಕರ್ತರೊಬ್ಬರೊಂದಿಗೆ ನಡೆಸಿದ ಮೊದಲ ಸಂದರ್ಶನವಾಗಿದೆ. ತಾಲಿಬಾನ್ ಸರ್ಕಾರದ ಅಡಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಸಂಬಂಧ ಬಗ್ಗೆ ಪತ್ರಕರ್ತೆ ಕೇಳಿದ್ದಾಗ ಮುತ್ತಕಿ ಈ ರೀತಿಯ ಪ್ರತಿಕ್ರಿಯಿದ್ದಾನೆ. ಅಫ್ಘಾನಿಸ್ತಾನ ಬೇರೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಹೊಂದಲು ಅಥವಾ ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಹೊಂದಲು ನಾವು ಬಯಸುವುದಿಲ್ಲ. ಆದ್ದರಿಂದ, ನಾವು ಈ ವಿಷಯದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನವು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಬಗ್ಗೆ ಚೀನಾ ಅಥವಾ ಪಾಕಿಸ್ತಾನದಿಂದ ಪ್ರತಿಕ್ರಿಯೆ ಬಂದಿದ್ದೇಯೆ ಎಂಬ ಪ್ರಶ್ನೆಗೆ ನೇರ ಉತ್ತರದ ಬದಲಿಗೆ, ಮಾಸ್ಕೋದಲ್ಲಿ ಇತ್ತೀಚಿನ ಸಭೆಗಳನ್ನು ಮುತ್ತಕಿ ಉಲ್ಲೇಖಿಸಿದರು.

ಮಾಸ್ಕೋ ಸಮ್ಮೇಳನದಲ್ಲಿ ನಾವು ಭಾಗವಹಿಸಿದಾಗ, ಭಾರತ, ಪಾಕಿಸ್ತಾನ ಮತ್ತು ಹಲವಾರು ಇತರ ದೇಶಗಳ ಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು. ನಾವು ಸಕಾರಾತ್ಮಕ ಮಾತುಕತೆ ನಡೆಸಿದ್ದೇವೆ ಮತ್ತು ಯಾವುದೇ ದೇಶವನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾಗಿ ಇಂದು ತಾಲಿಬಾನ್ ​ ಘೋಷಣೆ ಮಾಡಿದೆ. ಸದ್ಯ ಅಫ್ಘಾನ್​​ನಲ್ಲಿರುವ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಮತ್ತು ಇಲ್ಲಿನ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ದೇಶದ ಜನರು ತಮ್ಮ ನಿತ್ಯದ ಪ್ರತಿ ವ್ಯವಹಾರದಲ್ಲಿಯೂ ಅಫ್ಘಾನಿಸ್ತಾನದ ಕರೆನ್ಸಿಯನ್ನೇ ಬಳಸಬೇಕು ಎಂಬ ನಿರ್ಣಯ ಜಾರಿ ಮಾಡಲಾಗಿದೆ ಎಂದು ತಾಲಿಬಾನ್​ ವಕ್ತಾರರು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ ಈ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದು ಎಂದೂ ತಾಲಿಬಾನ್​ ಘೋಷಿಸಿದೆ.

ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಚಲಾವಣೆ ಆಗುವುದು ಯುಎಸ್​ ಡಾಲರ್​. ಹಾಗೇ ಅಲ್ಲಿನ ಗಡಿ ಪ್ರದೇಶಗಳ ಜನರು ತಮ್ಮ ನಿತ್ಯದ ವ್ಯಾಪಾರ-ವ್ಯವಹಾರಕ್ಕಾಗಿ ಪಾಕಿಸ್ತಾನದಂಥ ನೆರೆ ರಾಷ್ಟ್ರಗಳ ಕರೆನ್ಸಿ ಬಳಕೆ ಮಾಡುತ್ತಾರೆ. ಇದೀಗ ಅಫ್ಘಾನಿಸ್ತಾನದಲ್ಲಿ ಬರ ಎದುರಾಗಿದೆ..ನಗದು ಕೊರತೆ ಉಂಟಾಗಿದೆ. ಸಾಮೂಹಿಕ ಹಸಿವು, ವಲಸೆ ಬಿಕ್ಕಟ್ಟನ್ನು ಅಫ್ಘಾನ್​ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಬಿಲಿಯನ್​ ಡಾಲರ್​ಗಳಷ್ಟು ಹಣವನ್ನು ನಮಗಾಗಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಬ್ಯಾಂಕ್​ಗೆ ತಾಲಿಬಾನ್​ ಒತ್ತಾಯಿಸುತ್ತಿದೆ.

ಅಫ್ಘಾನಿಸ್ತಾನದಿಂದ ಯುಎಸ್​ ಪಡೆಗಳು ಹೊರಟುಹೋದ ಬಳಿಕ ಅಲ್ಲಿ ಹಣಕಾಸು ನೆರವು ನೀಡಲು ಅಂತಾರಾಷ್ಟ್ರೀಯ ದಾನಿಗಳೂ ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಆರ್ಥಿಕ ಮೂಲಗಳು ಮುಚ್ಚಿಹೋಗಿವೆ. ಅದಕ್ಕೂ ಮಿಗಿಲಾಗಿ ಅಫ್ಘಾನಿಸ್ತಾನದಲ್ಲಿ ಇನ್ನೂ ಸ್ಥಿರತೆಯೇ ಮೂಡಿಲ್ಲ.

ಒಂದಲ್ಲ ಒಂದು ಕಡೆ ಸ್ಫೋಟ, ಪ್ರಾಣ ಹಾನಿ ನಡೆಯುತ್ತಿದೆ. ನಿನ್ನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಅಫ್ಘಾನ್​ನ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ ಬಳಿ ಎರಡು ಸ್ಫೋಟಗಳು ಸಂಭವಿಸಿ 19 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ತಾವು ಆಡಳಿತ ಶುರು ಮಾಡಿದ್ದಾಗಿ ಹೇಳಿಕೊಂಡು ತಮ್ಮದೇ ಒಸ ನಿಯಮಗಳನ್ನು ತರುತ್ತಿವೆ.

English summary
Afghanistan does not want conflict with any country, including India, the war-torn country's Taliban-led interim government's acting Foreign Minister Amir Khan Muttaqi has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X