ಪಾಕ್ ಪ್ರಧಾನಿ ಫೋನ್ ಕರೆಗೆ ಕ್ಯಾರೇ ಎನ್ನದ ಅಫ್ಘಾನಿಸ್ತಾನ ಅಧ್ಯಕ್ಷ
ಕಾಬೂಲ್, ಜನವರಿ 31: ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಖಾನ್ ಅಬ್ಬಾಸಿಯನ್ನು ಫೋನ್ ನಲ್ಲಿ ಮಾತನಾಡಿಸಲು ಸಹ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಿರಾಕರಿಸಿದ್ದಾರೆ. ಕಾಬೂಲ್ ನಲ್ಲಿ ನಡೆದ ಭೀಕರ ಬಾಂಬ್ ದಾಳಿಯ ನಂತರ ಸಂತಾಪ ಸೂಚಿಸಲು ಪಾಕ್ ಪ್ರಧಾನಿ ಕರೆ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಈಚೆಗೆ ಕಾಬೂಲ್ ನಲ್ಲಿ ನಡೆದ ದಾಳಿಯ ಹಿಂದೆ ಪಾಕ್ ನ ಕೈವಾಡ ಇರುವುದನ್ನು ಸಾಬೀತು ಪಡಿಸುವಂಥ ದಾಖಲೆಗಳನ್ನು ಸೇನೆಗೆ ಹಸ್ತಾಂತರ ಮಾಡಲು ಆಫ್ಘಾನಿಸ್ತಾನದಿಂದ ಇಸ್ಲಾಮಾಬಾದ್ ಗೆ ನಿಯೋಗವೊಂದನ್ನು ಕಳುಹಿಸಲಾಗಿತ್ತು. ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳಿಗೆ ಇಸ್ಲಾಮಾಬಾದ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಕಾಬೂಲ್ ದಾಳಿಗೆ ಸಂತಾಪ ಸೂಚಿಸುವ ಸಲುವಾಗಿ ಪಾಕ್ ನ ಪ್ರಧಾನಿ ದೂರವಾಣಿ ಕರೆ ಮಾಡಿದ್ದಾರೆ. ಆದರೆ ಅಫ್ಘಾನಿಸ್ತಾನದ ರಾಷ್ಟ್ರಾಧ್ಯಕ್ಷ ಮಾತನಾಡಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ ಅಗತ್ಯದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.












Click it and Unblock the Notifications