ಕಣ್ಣೆದುರಲ್ಲೇ ಅಪ್ಪ ಅಮ್ಮನನ್ನು ಕೊಂದ ತಾಲಿಬಾನ್ ಉಗ್ರರಿಗೆ, ಮಗಳ ಬೆಚ್ಚಿಬೀಳಿಸುವ ಪ್ರತೀಕಾರ

ಕಾಬೂಲ್, ಜುಲೈ 22: ತನ್ನ ಕಣ್ಣೆದುರಲ್ಲೇ ಅಪ್ಪ ಅಮ್ಮನನ್ನು ಕೊಂದ ತಾಲಿಬಾನ್ ಉಗ್ರರಿಗೆ, ಊಹಿಸಲೂ ಅಸಾಧ್ಯವಾದ ಪ್ರತೀಕಾರವನ್ನು ಮಗಳು ತೀರಿಸಿದ ಘಟನೆ, ಘೋರ್ ಪ್ರಾಂತ್ಯದಲ್ಲಿ ನಡೆದಿದೆ.

ಅಮೆರಿಕಾದ ಜೊತೆಗೆ ಶಾಂತಿ ಒಪ್ಪಂದ ಮುರಿದು ಬಿದ್ದಿದ್ದರಿಂದ, ಮತ್ತೆ ತಮ್ಮ ರಕ್ತಸಿಕ್ತ ಅಧ್ಯಾಯದ ಕಡೆ ಮುಖ ಮಾಡಿರುವ ತಾಲಿಬಾನ್ ಉಗ್ರರು, ಕಳೆದ, ಜೂನ್ ತಿಂಗಳಲ್ಲಿ, ಅಫ್ಘಾನಿಸ್ತಾನದ ಮಿಲಿಟರಿ ಬೇಸ್ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದರು.

ಹದಿನಾರು ವರ್ಷದ ಕಮರ್ ಗುಲ್, ಘೋರ್ ಪ್ರಾಂತ್ಯದ ಗೆರಿವಿಹ್ ಗ್ರಾಮದಲ್ಲಿ, ತನ್ನ ಪೋಷಕರು ಮತ್ತು ಸಹೋದರನ ಜೊತೆಗೆ ವಾಸಿಸುತ್ತಿದ್ದಳು. ಆಕೆಯ ಮನೆಗೆ ನಲವತ್ತು ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ.

ಕಳೆದ ವಾರ ಈ ಘಟನೆ ನಡಿದಿದೆ. ಉಗ್ರರು ಜುಲೈ 17ರ ತಡರಾತ್ರಿ ಒಂದು ಗಂಟೆಗೆ ಕಮರ್ ಗುಲ್ ಮನೆಯ ಮೇಲೆ ದಾಳಿ ನಡೆಸಿ, ಮನೆ ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಬಾಗಿಲು ತೆಗೆಯಲು ನಿರಾಕರಿಸಿದ್ದಕ್ಕಾಗಿ ಕಮರ್ ತಾಯಿಯನ್ನು, ಉಗ್ರರು ಹತ್ಯೆಗೈದಿದ್ದಾರೆ.

ಸರಕಾರಕ್ಕೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಹತ್ಯೆ

ಸರಕಾರಕ್ಕೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಹತ್ಯೆ

ದಾಳಿಯಿಂದ ಭಯಭೀತರಾದ ಆಕೆಯ ತಂದೆ, ಮನೆಯೊಳಗೆ ಅಡಗಿ ಕೂತಿದ್ದಾರೆ. ಆದರೂ, ಆಕೆಯ ತಂದೆಯನ್ನು ಪತ್ತೆಹಚ್ಚಿ ಹೊರಗಡೆ ಎಳೆದು, ಆತನನ್ನೂ ತಾಲಿಬಾನ್ ಉಗ್ರರು ಸಾಯಿಸಿದ್ದಾರೆ. ಈ ಎಲ್ಲಾ ಘಟನೆ, ಕಮರ್ ಗುಲ್ ಮತ್ತು ಆಕೆಯ ಸಹೋದರನ ಎದುರು ನಡೆದಿದೆ. ಸರಕಾರಕ್ಕೆ ಈಕೆಯ ತಂದೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ, ಹತ್ಯೆಗೈಯಲಾಗಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ತಾಲಿಬಾನ್ ಉಗ್ರರ ಮೇಲೆ ದಾಳಿ

ತಾಲಿಬಾನ್ ಉಗ್ರರ ಮೇಲೆ ದಾಳಿ

ಪ್ರೀತಿಯ ತಂದೆ, ತಾಯಿ ತನ್ನ ಕಣ್ಣೆದುರಲ್ಲೇ ಸತ್ತರೂ, ಧೃತಿಗೆಡದ ಕಮರ್, ತನ್ನ ತಂದೆಯ ಎಕೆ-47 ರೈಫಲ್ಸ್ ಅನ್ನು ತೆಗೆದುಕೊಂಡು, ತಾಲಿಬಾನ್ ಉಗ್ರರ ಮೇಲೆ ದಾಳಿ ನಡೆಸಿದ್ದಾಳೆ. ಈಕೆಯ ಗುಂಡಿನ ದಾಳಿಗೆ, ಮೂವರು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಲಿಬಾನ್ ಉಗ್ರರು ದಿಕ್ಕಾಪಾಲಾಗಿ ಓಡುವಂತೆ ಮಾಡುತ್ತಾಳೆ

ತಾಲಿಬಾನ್ ಉಗ್ರರು ದಿಕ್ಕಾಪಾಲಾಗಿ ಓಡುವಂತೆ ಮಾಡುತ್ತಾಳೆ

ಅಷ್ಟಕ್ಕೂ ಸುಮ್ಮನಾಗದ ಕಮರ್ ಗುಲ್, ಮನೆಯ ಹೊರಗಡೆ ಬಂದು, ಉಳಿದ ಉಗ್ರರ ಮೇಲೆ ಗುಂಡಿನ ದಾಳಿ ನಡೆಸುತ್ತಾಳೆ. ಆ ವೇಳೆ, ಮತ್ತಷ್ಟು ಉಗ್ರರು ಈ ಕ್ಯಾಂಪಿಗೆ ಬಂದು ಈಕೆಯ ವಿರುದ್ದ ಹೋರಾಟಕ್ಕೆ ಇಳಿಯುತ್ತಾರೆ. ಸುಮಾರು ಒಂದು ತಾಸು, ಉಗ್ರರ ವಿರುದ್ದ ಹೋರಾಡಿದ ಈಕೆ, ಕೊನೆಗೂ, ತಾಲಿಬಾನ್ ಉಗ್ರರು ದಿಕ್ಕಾಪಾಲಾಗಿ ಓಡುವಂತೆ ಮಾಡುತ್ತಾಳೆ.

ಕಮರ್ ಗುಲ್ ಮತ್ತು ಈಕೆಯ ಸಹೋದರ, ಪೊಲೀಸ್ ಸುಪರ್ದಿಯಲ್ಲಿ

ಕಮರ್ ಗುಲ್ ಮತ್ತು ಈಕೆಯ ಸಹೋದರ, ಪೊಲೀಸ್ ಸುಪರ್ದಿಯಲ್ಲಿ

ಪ್ರತೀಕಾರ ತೀರಿಸಿಕೊಳ್ಳಲು ಮತ್ತೆ ಗುಂಪು ಕಟ್ಟಿಕೊಂಡು ಬರುವಷ್ಟರಲ್ಲಿ ಪೊಲೀಸರು ಮತ್ತು ಸ್ಥಳೀಯರು ಈಕೆಯ ರಕ್ಷಣೆಗೆ ನಿಲ್ಲುತ್ತಾರೆ. ಯಾವತ್ತಿದ್ದರೂ ಈಕೆಯ ಮೇಲೆ ಉಗ್ರರು ಸೇಡು ತೀರಿಕೊಳ್ಳಬಹುದು ಎನ್ನುವ ಮುಂದಾಲೋಚನೆಯಿಂದ, ಪೊಲೀಸರು, ಕಮರ್ ಗುಲ್ ಮತ್ತು ಈಕೆಯ ಸಹೋದರನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+