ಅಡ್ರಸ್ ಪತ್ತೆ ಮಾಡಲು ಆ ಪೈಲಟ್ ವಿಮಾನವನ್ನು ಹೈವೇ ಮೇಲಿಳಿಸಿದ !

ರಸ್ತೆಯ ಮೇಲೆ ಹೋಗುವಾಗ ದಾರಿ ತಪ್ಪಿದಲೇ ಅವಾಕ್ಕಾಗುತ್ತೇವೆ. ಪಾಪ, ಮೇಲೆ ಬಾನೆತ್ತರದಲ್ಲಿ ಹಾರಾಡುವಾಗ ಅಕಸ್ಮಾತ್ತಾಗಿ ತನ್ನ ಪಥವನ್ನು ತಪ್ಪಿಸಿಕೊಂಡ ಆ ಪೈಲಟ್ ಕಂಗಾಲಾಗಿರೋದು ಸಹಜವೇ!

ಹೊಸ ಏರಿಯಾಕ್ಕೆ ಹೋದಾಗ ನಾವು ತಲುಪಬೇಕಿರುವ ವಿಳಾಸದ ಬಗ್ಗೆ ಗೊಂದಲ ಬಂದ್ರೆ ಏನು ಮಾಡ್ತೀವಿ ? ನಾವು ಹೋಗ್ತಾ ಇರೋ ಗಾಡಿ ನಿಲ್ಸಿ, ಯಾರಾದರೂ ಆ ಏರಿಯಾದವರು ಸಿಕ್ರೆ ಅಡ್ರಸ್ ಕೇಳ್ತೀವಿ. ಆದರೆ, ಬಾನೆತ್ತರದಲ್ಲಿ ವಿಮಾನ ಹಾರಿಸುವ ಪೈಲಟ್ ಗೆ ಅಡ್ರಸ್ ಮಿಸ್ ಆದ್ರೆ ಆತ ಏನ್ಮಾಡ್ಬೇಕು ?

ಮಿಲಿಟರಿ ವಿಮಾನವನ್ನು ಹಾರಿಸುತ್ತಿದ್ದ ಕಜಕಿಸ್ತಾನದ ಪೈಲಟ್ ಒಬ್ಬಾತನು ತಾನು ಹೋಗುವ ವಾಯು ಮಾರ್ಗದ ದಾರಿ ತಪ್ಪಿಬಿಟ್ಟಿದ್ದಾನೆ. ಆಗೇನು ಮಾಡುವುದು? ಇಡೀ ವಿಮಾನದಲ್ಲಿ ಒಬ್ಬನೇ ಇದ್ದಾಗ ಆತನಾದರೂ ಏನು ಮಾಡಿಯಾನು?

ಕಂಟ್ರೋಲ್ ರೂಮಿಗೆ ಸಂದೇಶ ನೀಡಿದರೆ ಅಲ್ಲಿಂದಲೂ ಸೂಕ್ತ ಉತ್ತರ ಸಿಕ್ಕಿಲ್ಲ. ಎಲ್ಲಕ್ಕೂ ಮಿಗಿಲಾಗಿ ಆತನೇನು ಅನುಭವಿ ಚಾಲಕನಲ್ಲ. ಇನ್ನೂ ಟ್ರೈನಿ. ಹಾಗಾಗಿ, ಕಾಕ್ ಪಿಟ್ ನಲ್ಲಿ ಕುಳಿತಿದ್ದ ಆತನ ತಲೆಯಲ್ಲಿನ ಫ್ಯೂಸುಗಳು ಹಾರಿ ಹೋಗಿ ಕನ್ ಫ್ಯೂಸೋ ಕನ್ ಫ್ಯೂಸು ಆಗಿದ್ದಾನೆ.

A Trainee pilot lands his plane on road to ask address

ಪಾಪ! ಆತನಾದರೂ ಇನ್ನೇನು ಮಾಡಿಯಾನು? ಅಡ್ರಸ್ ಹುಡುಕಲು ಭೂಮಿಗಿಳಿಯಲೇಬೇಕು ಎಂದು ನಿರ್ಧರಿಸಿ ವಿಮಾನವನ್ನು ಕೆಳಗಿಳಿಸಿದ್ದಾನೆ.

ಆತ ಪ್ರಯಾಣಿಸುತ್ತಿದ್ದ ಎಂಥಾ ವಿಮಾನವಾದರೂ ಎಂಥದು ಎನ್ನುತ್ತೀರಿ ? ಸೋವಿಯತ್ ರಷ್ಯಾ ನಿರ್ಮಿತ ಮಿಗ್ - 8 ವಿಮಾನವದು. ಇಂಥ ದೈತ್ಯ ಗಾತ್ರದ ವಿಮಾನವನ್ನು ಆತ ಇಳಿಸಿದ್ದಾರೂ ಎಲ್ಲಿ ಅಂತೀರಿ? ಕಜಕಿಸ್ತಾನದ ಹೈವೇಯೊಂದರ ಏಕಮುಖ ಸಂಚಾರದ ರಸ್ತೆಯೊಂದರ ಮಧ್ಯ ತಂದು ಈ ವಿಮಾನವನ್ನು ಇಳಿಸಿಯೇ ಬಿಟ್ಟಿದ್ದಾನೆ.

ಆ ರಸ್ತೆಯಲ್ಲಿ ಓಡಾಡುತ್ತಿದ್ದ ಇಡೀ ಟ್ರಾಫಿಕ್ ಈ ವಿಮಾನ ನೋಡಿ ಸ್ತಬ್ಧವಾಗಿ ನಿಂತುಬಿಟ್ಟಿದೆ. ಸರಿ. ವಿಮಾನ ಲ್ಯಾಂಡ್ ಮಾಡಿದ ಆ ಪೈಲಟ್ ಕಾಕ್ ಪಿಟ್ ನ ಬಾಗಿಲು ತೆಗೆದು ಕೆಳಗಿಳಿದು ಬಂದು ಸ್ವಲ್ಪ ದೂರದಲ್ಲಿ ಹೈವೇಯಲ್ಲಿ ನಿಂತಿದ್ದ ಟ್ರಕ್ ಒಂದರ ಡ್ರೈವರ್ ಅನ್ನು ತಾವು ಹೋಗಬೇಕಾದ ವಿಳಾಸದ ದಿಕ್ಕು ಯಾವ ಕಡೆಗೆ ಬರುತ್ತೆ ಅಂತ ಕೇಳಿದ್ದಾನೆ.

ಆಗ, ಡ್ರೈವರ್ ಆ ಬಗ್ಗೆ ಸೂಕ್ತ ನಿರ್ದೇಶನ ನೀಡಿದ್ದಾನೆ. ಇದರಿಂದ ತೃಪ್ತಿಗೊಂಡ ಪೈಲಟ್ ಆತನ ಕೈ ಕುಲುಕಿ ಥ್ಯಾಂಕ್ಸ್ ಅಂತ ಹೇಳಿ ಬುಡುಬುಡನೆ ತನ್ನ ವಿಮಾನದೆಡೆಗೆ ಹೋಗಿ ವಿಮಾನವನ್ನು ಹಾರಿಸಿಕೊಂಡು ಡ್ರೈವರ್ ಹೇಳಿದ ದಿಕ್ಕಿನೆಡೆಗೆ ಹೊರಟುಹೋಗಿದ್ದಾನೆ.

ವಿಮಾನವೊಂದು ಹೈವೇ ರಸ್ತೆಗೆ ಬಂದಿಳಿದಿದ್ದನ್ನು ಯಾರೋ ಪುಣ್ಯಾತ್ಮರು ವೀಡಿಯೋ ಮಾಡಿ ಅಂತರ್ಜಾಲಕ್ಕೆ ಹರಿಯಬಿಟ್ಟಿದ್ದು ಅದೀಗ ವೈರಲ್ ಆಗಿದೆ!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+