ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಮಕ್ಕಳಿಗಾಗಿ ನೋಬಲ್‌ ಪಾರಿತೋಷಕ ಮಾರಿದ ಪತ್ರಕರ್ತ

|
Google Oneindia Kannada News

ಮಾಸ್ಕೋ, ಜೂ. 21: 2021 ರ ನೊಬೆಲ್ ಶಾಂತಿ ಪ್ರಶಸ್ತಿಯ ಸಹ ವಿಜೇತರಾದ, ರಷ್ಯಾದ ಕೊನೆಯ ಪ್ರಮುಖ ಸ್ವತಂತ್ರ ಪತ್ರಿಕೆಗಳ ಸಂಪಾದಕ ಡಿಮಿಟ್ರಿ ಮುರಾಟೋವ್ ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ 103.5 ಮಿಲಿಯನ್‌ ಡಾಲರ್‌ ಮೊತ್ತದ ತನ್ನ ನೊಬೆಲ್ ಪದಕವನ್ನು ಹರಾಜು ಹಾಕಿದ್ದಾರೆ.

ಸೋಮವಾರ ವಿಶ್ವ ನಿರಾಶ್ರಿತರ ದಿನದಂದು ನಡೆದ ಹರಾಜಿನಿಂದ ಬರುವ ಎಲ್ಲಾ ಆದಾಯವು ಉಕ್ರೇನ್‌ನ ಸ್ಥಳಾಂತರಗೊಂಡ ಮಕ್ಕಳಿಗಾಗಿ ನೆರವಾಗುವ ಯುನಿಸೆಫ್‌ನ ಹ್ಯೂಮನ್‌ ರೆಸ್ಪಾನ್ಸ್‌ ಸಂಘಕ್ಕೆ ನೀಡುತ್ತದೆ ಎಂದು ನ್ಯೂಯಾರ್ಕ್‌ನಲ್ಲಿ ಮಾರಾಟವನ್ನು ನಡೆಸಿದ ಹೆರಿಟೇಜ್ ಆಕ್ಷನ್ಸ್ ತಿಳಿಸಿದೆ.

 ಅಮೆರಿಕ ಮೂಲದ ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಅಮೆರಿಕ ಮೂಲದ ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಮುರಾಟೋವ್ ಅವರ ನೊವಾಯಾ ಗೆಜೆಟಾ ಪತ್ರಿಕೆ, ಉಕ್ರೇನ್‌ನಲ್ಲಿನ ಯುದ್ಧದ ಕುರಿತು ರಷ್ಯಾದಿಂದ ಎಚ್ಚರಿಕೆ ನೀಡಿದ ನಂತರ ಮಾರ್ಚ್‌ನಲ್ಲಿ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.

A Journalist Sold the Nobel Prize for Children in Ukraine

1999 ರಿಂದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಡಿಯಲ್ಲಿ ರಷ್ಯಾದ ಮಾಧ್ಯಮಗಳ ವಿರುದ್ಧ ಒತ್ತಡವು ನಿರಂತರವಾಗಿದೆ. ಇದು ಮಾಸ್ಕೋ ಫೆಬ್ರವರಿ 24ರಂದು ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ನಂತರ ಹೆಚ್ಚಾಯಿತು. ಏಪ್ರಿಲ್‌ನಲ್ಲಿ ಮುರಾಟೋವ್ ಮೇಲೆ ಕೆಂಪು ಬಣ್ಣ ಎರಚಿ ದಾಳಿ ಮಾಡಲಾಗಿತ್ತು.

 ಕಾರ್ಪೋರೇಟ್‌ NBFCಗಳನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಯೋಜನೆಗೆ ರಘುರಾಮ್ ರಾಜನ್ ವಿರೋಧ ಕಾರ್ಪೋರೇಟ್‌ NBFCಗಳನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಯೋಜನೆಗೆ ರಘುರಾಮ್ ರಾಜನ್ ವಿರೋಧ

ರಷ್ಯಾದ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ರಾಜ್ಯ ನಿಯಂತ್ರಿತ ಸಂಸ್ಥೆಗಳು ಉಕ್ರೇನ್‌ನೊಂದಿಗಿನ ಸಂಘರ್ಷವನ್ನು ವಿವರಿಸಲು ಕ್ರೆಮ್ಲಿನ್ ಬಳಸಿದ ಭಾಷೆಯನ್ನು ಅನುಸರಿಸುತ್ತವೆ. ಇದನ್ನು ಮಾಸ್ಕೋ ರಷ್ಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದರ ನೆರೆಹೊರೆಯವರನ್ನು ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ಎಂದು ಕರೆಯುತ್ತದೆ. ಕೈವ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಆಕ್ರಮಣಶೀಲತೆಯ ಅಪ್ರಚೋದಿತ ಯುದ್ಧ ಎಂದು ಹೇಳಿದ್ದಾರೆ.

ಅಮೆರಿಕ ಮಾಧ್ಯಮ ವರದಿಗಳ ಪ್ರಕಾರ, ಡಿಮಿಟ್ರಿ ಮುರಾಟೋವ್ ಅವರ ನೊಬೆಲ್ ಪದಕವನ್ನು ಹರಾಜು ಮಾಡಿತು. ಇದರ ಬೆಲೆ ಕೇವಲ 5 ಮಿಲಿಯನ್‌ ಡಾಲರ್‌ಗಿಂತಲೂ ಕಡಿಮೆಯಿತ್ತು ಎಂದು ವರದಿಗಳು ಹೇಳಿವೆ. "ಮಿ. ಮುರಾಟೋವ್‌, ನೋವ್ಯಾ ಗಜೆಟನಲ್ಲಿಅವರ ಸಿಬ್ಬಂದಿಯ ಸಂಪೂರ್ಣ ಬೆಂಬಲದೊಂದಿಗೆ ಅವರ ಪದಕವನ್ನು ಹರಾಜು ಮಾಡಲು ನಮಗೆ ಅವಕಾಶ ನೀಡುತ್ತಿದೆ. ಆದರೆ ಲಕ್ಷಾಂತರ ಉಕ್ರೇನಿಯನ್ ನಿರಾಶ್ರಿತರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

A Journalist Sold the Nobel Prize for Children in Ukraine

1991 ರಲ್ಲಿ ನೊವಾಯಾ ಗೆಜೆಟಾವನ್ನು ಸ್ಥಾಪಿಸಿದ ಮುರಾಟೋವ್, 2021ರ ಫಿಲಿಪೈನ್ಸ್‌ನ ಮಾರಿಯಾ ರೆಸ್ಸಾ ಅವರೊಂದಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು. ನೊಬೆಲ್ ಪ್ರಶಸ್ತಿ ಸಮಿತಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಅವರ ಪ್ರಯತ್ನಗಳು, ಇದು ಪ್ರಜಾಪ್ರಭುತ್ವ ಮತ್ತು ಶಾಶ್ವತ ಶಾಂತಿಗೆ ಸಹಕಾರಿಯಾಗಿದೆ ಎಂದು ಉಲ್ಲೇಖಿಸಿತ್ತು. ಆ ಬಹುಮಾನದ ಹಣದಲ್ಲಿ ಸುಮಾರು 5,00,000 ಡಾಲರ್‌ ಅನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ವಾಗ್ದಾನ ಮಾಡಿದ ಮುರಾಟೋವ್, 2000 ರಿಂದ ಹತ್ಯೆಗೀಡಾದ ಆರು ನೊವಾಯಾ ಗೆಜೆಟಾ ಪತ್ರಕರ್ತರಿಗೆ ತಮ್ಮ ನೊಬೆಲ್ ಅನ್ನು ಅರ್ಪಿಸಿದ್ದರು.

English summary
Dmitry Muratov, the co-winner of the 2021 Nobel Peace Prize and the editor of one of Russia's last major independent newspapers, auctioned off his Nobel medal for a record $103.5 million to aid children displaced by the war in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X