ಸಮಾಧಿಯೊಳಗಿಂದ ಮಾತನಾಡಿದ ತಾತ, ನೆರೆದವರು ಶಾಕ್: ವಿಡಿಯೋ ವೈರಲ್

ವಾಷಿಂಗ್ಟನ್, ಅಕ್ಟೋಬರ್ 16: ಶವವನ್ನು ಶವಪೆಟ್ಟಿಗೆಯಲ್ಲಿಟ್ಟು, ಮಣ್ಣು ಮಾಡಿ ಹಿಂತಿರುಗುವಾಗ ಇದ್ದಕ್ಕಿದ್ದಂತೆ ಶವಪೆಟ್ಟಿಗೆಯೊಳಗಿಂದ ಧ್ವನಿ ಕೇಳಿಸಿದರೆ ಹೇಗಿರುತ್ತದೆ?

ಇಂಥದೊಂದು ಘಟನೆ ಅಮೆರಿಕದ ಮಿಶಿಗನ್ ನ ಕಿಲ್ಮಾನಾಘ್ ಎಂಬಲ್ಲಿ ಅಕ್ಟೋಬರ್ 12 ರಂದು ನಡೆಯಿತು.

A Grandfathers Voice From His Funeral Shocks Mourners

ಅಕ್ಟೋಬರ್ 8 ರಂದು ಬ್ರಾಡ್ಲಿ ಎಂಬುವವರು ಮೂರು ವರ್ಷಗಳ ಕಾಲ ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸಿ ಅಸುನೀಗಿದ್ದರು. ಅವರ ಕೊನೆಯ ಆಸೆ ಎಂದರೆ ತಾನು ಸತ್ತಮೇಲೆ ಅಂತ್ಯಕ್ರಿಯೆ ಬಂದವರೆಲ್ಲ ನನ್ನ ಧ್ವನಿ ಕೇಳಿ ಅಚ್ಚರಿ ಪಡಬೇಕು, ಮತ್ತು ಅವರ ಮುಖದಲ್ಲಿ ನಗು ಮೂಡಬೇಕು ಎಂಬುದು.

ಅಂತೆಯೇ ಅವರು ತಮ್ಮ ಧ್ವನಿಯನ್ನು ಮೊದಲೇ ರೆಕಾರ್ಡ್ ಮಾಡಿಸಿ ತಮ್ಮ ಒಬ್ಬ ಮಗನಿಗೆ ನೀಡಿದ್ದರು. ತಂದೆಯ ಆಸೆಯಂತೆಯೇ ಆ ಧ್ವನಿ ಮುದ್ರಣವನ್ನು ಸಮಾದಿಯೊಳಗಿಟ್ಟಿದ್ದ ಅವರ ಪುತ್ರ ಎಲ್ಲರಿಗೂ ಶಾಕ್ ನೀಡಿದ್ದರು. ಕೆಲಕ್ಷಣ ಎಲ್ಲರೂ ಬ್ರಾಡ್ಲಿ ಬದುಕಿದ್ದಾರೆ ಎಂದೇ ಯೋಚಿಸಿದ್ದರು.

"ಹಲೋ, ಹಲೋ ಹಲೋ, ನನಗೆ ಹೊರಗೆ ಬರುವುದಕ್ಕೆ ಸಹಾಯಮಾಡಿ, ನನ್ನ ಮಾತು ಕೇಳುತ್ತಿದೆಯೆ? ನಾನು ಬಾಕ್ಸ್ ವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಇಲ್ಲಿಂದ ಕಾಪಾಡಿ...." ಎಂದು ಈ ಧ್ವನಿ ಮುದ್ರಣದಲ್ಲಿ ಬ್ರಾಡ್ಲಿ ಹೇಳಿದ್ದರು.

ದಿಗ್ಭ್ರಾಂತರಾದ ಜನರಿಗೆ ನಂತರ ಅವರ ಪುತ್ರ ಅಸಲಿ ವಿಷಯ ತಿಳಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರೆಲ್ಲ ನೋವು ಮರೆತು ಮನಸಾರೆ ನಕ್ಕಿದ್ದರು. ಈ ಮೂಲಕ ಬ್ರಾಡ್ಲಿ ತಮ್ಮ ಕೊನೆಯ ಆಸೆ ಈಡೇರಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+