ಯುವತಿ ಸೂಸೈಡ್ ಲೈವ್ ವಿಡಿಯೋಗೆ ಪೆರಿಸ್ಕೋಪ್ ಬಳಕೆ

Posted By:
Subscribe to Oneindia Kannada

ಪ್ಯಾರೀಸ್, ಮೇ 13: ಈ ಸುದ್ದಿ ಓದಿದರೆ 'ತಂತ್ರಜ್ಞಾನದ ದುರ್ಬಳಕೆಯ ಪರಮಾವಧಿ' ಎನ್ನಬಹುದು. ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲು ಡಿಕ್ಕಿ ಹೊಡೆದು ಸಾಯುವವರು, ಎತ್ತರದ ಪ್ರದೇಶದಿಂದ ಆಯ ತಪ್ಪಿ ಬೀಳುವವರ ಸುದ್ದಿ ಕೇಳಿರುತ್ತೀರಿ, ಆದರೆ, ಈಕೆ ಸೂಸೈಡ್ ನ ಲೈವ್ ವಿಡಿಯೋ ಮೂಲಕ ಹಂಚಿದ್ದಾಳೆ ನೋಡಿ...

ಪ್ರೇಮಿಯನ್ನು ನಂಬಿ ಆತ್ಯಾಚಾರಕ್ಕೊಳಗಾಗಿ ಮೋಸ ಹೋದ ಯುವತಿಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಯ ಲೈವ್ ದೃಶ್ಯಗಳನ್ನು ಪೆರಿಸ್ಕೋಪ್ ಅಪ್ಲಿಕೇಷನ್ ಬಳಸಿಕೊಂಡು ಚಿತ್ರೀಕರಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದ್ದಾಳೆ.[ಕ್ರೈಂ ವರದಿಗೆ ಪೆರಿಸ್ಕೋಪ್ ಬಳಸಿ : ಬೆಂಗಳೂರು ಪೊಲೀಸ್ ಆಯುಕ್ತ]

19 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದ ಕಾರಣ ಮನನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಪ್ಯಾರಿಸ್ ನ ಸಬ್ ಅರ್ಬನ್ ಈಗ್ಲಿ ಸ್ಟೇಷನ್ ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಶರಣಾಗಿದ್ದಾಳೆ.


ಆದರೆ, ಸಾಯುವುದಕ್ಕೂ ಮುನ್ನ ತನ್ನ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ಹೆಸರನ್ನು ಹೇಳಿದ್ದಾಳೆ. ಆತ ನೀಡಿರುವ ಸ್ನಾಪ್ ಚಾಟ್ ಸಂದೇಶ, ಇನ್ನಿತ್ತರ ವಿವರಗಳನ್ನು ಬಹಿರಂಗಪಡಿಸಿದ್ದಾಳೆ.
ಪೆರಿಸ್ಕೋಪ್ ಮೂಲಕ ಲೈವ್ ವೀಕ್ಷಣೆಗೆ ಅವಕಾಶ

ಪೆರಿಸ್ಕೋಪ್ ಮೂಲಕ ಲೈವ್ ವೀಕ್ಷಣೆಗೆ ಅವಕಾಶ

ಮೇ 11ರಂದು ನಡೆದ ಈ ಘಟನೆಯಲ್ಲಿ ಪೆರಿಸ್ಕೋಪ್ ಮೂಲಕ ಲೈವ್ ವೀಕ್ಷಣೆ ಆಕೆ ಅವಕಾಶ ನೀಡಿದ್ದಾಳೆ. ಕೆಲವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ನೆರವಿಗಾಗಿ ಕೋರಿದ್ದಾರೆ. ಆದರೆ, ಪೊಲೀಸರು ಯುವತಿ ಇರುವ ಸ್ಟೇಷನ್ ಬಳಿ ಬರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾದ ಪೆರಿಸ್ಕೋಪ್

ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾದ ಪೆರಿಸ್ಕೋಪ್

ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾದ ಪೆರಿಸ್ಕೋಪ್ ಅಪ್ಲಿಕೇಶನ್ ಮೂಲಕ ಲೈವ್ ವಿಡಿಯೋ ತುಣುಕು ಪ್ರಸಾರ ಮಾಡಬಹುದು. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಜೊತೆಗೆ ಹೊಂದಿಕೊಂಡಂತೆ ಸಿಗುವ ಪೆರಿಸ್ಕೋಪ್ ಮೂಲಕ ಲೈವ್ ವಿಡಿಯೋ ಸೆರೆಹಿಡಿಯಬಹುದು. ಈ ವಿಡಿಯೋ 24 ಗಂಟೆಗಳ ಕಾಲ ಸೇವ್ ಆಗಿರುತ್ತದೆ.

ಕಾರ್ಯಕ್ರಮದ ಲೈವ್ ವಿಡಿಯೋ ಪ್ರಸಾರಕ್ಕೆ ಬಳಕೆ

ಕಾರ್ಯಕ್ರಮದ ಲೈವ್ ವಿಡಿಯೋ ಪ್ರಸಾರಕ್ಕೆ ಬಳಕೆ

ಬೆಂಗಳೂರು ಪೊಲೀಸರು ಟ್ರಾಫಿಕ್ ಲೈವ್ ಅಪ್ಡೇಟ್ ಸೇರಿದಂತೆ ಕೆಲವು ಉಪಯುಕ್ತ ಮಾಹಿತಿ ನೀಡಲು ಈ ವಿಡಿಯೋ ಅಪ್ಲಿಕೇಷನ್ ಬಳಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಅಪ್ಲಿಕೇಷನ್ ಈ ರೀತಿ ಬಳಕೆಯಾಗಿರುವುದು ಎಚ್ಚರಿಕೆ ಗಂಟೆಯಾಗಿದೆ. ಅಲ್ಲದೆ, ಈ ಬಗ್ಗೆ ಯಾವ ರೀತಿ ಜಾಗೃತಿ ಮೂಡಿಸಬಹುದು ಎಂಬುದು ಸವಾಲಾಗಿದೆ.

ಜನರಿಗೆ ಅವನ ಬಗ್ಗೆ ತಿಳಿಯಲಿ ಎಂದಿರುವ ಯುವತಿ

ಜನರಿಗೆ ಅವನ ಬಗ್ಗೆ ತಿಳಿಯಲಿ ಎಂದಿರುವ ಯುವತಿ

ಜನರಿಗೆ ಅವನ ಬಗ್ಗೆ ತಿಳಿಯಲಿ ಎಂದಿರುವ ಯುವತಿ, ಪೆರಿಸ್ಕೋಪ್, ಸ್ನಾಪ್ ಚಾಟ್, ಟ್ವಿಟ್ಟರ್ ಬಳಸಿ ಫ್ರೆಂಚ್ ಭಾಷೆಯಲ್ಲಿ ತನ್ನ ನೋವು ತೋಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ಆಪ್ತರಿಗೆ ವಿಷಯ ತಿಳಿಸಿದ್ದಾಳೆ. ನೆರವಿಗೆ ಧಾವಿಸುವಷ್ಟರಲ್ಲಿ ಅನಾಹುತ ಸಂಭವಿಸಿದೆ. ಯುವತಿ ಹಾಕಿರುವ ಟ್ವಿಟ್ಟರ್ ಸ್ವಾಮ್ಯದ ಪೆರಿಸ್ಕೋಪ್ ವಿಡಿಯೋ ಈಗ ಲಭ್ಯವಿಲ್ಲ. ಆದರೆ, ಆಕೆ ಮಾತನಾಡಿದ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೊಳಲ್ಪಟ್ಟಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A French teenager records live Suicide on Periscope. A 19 year old girl live telecasted her suicide on social network using Periscope application. She named the man who raped her then walked in front of a train at Egly Station.
Please Wait while comments are loading...