ಸೆಕೆಂಡ್ ವೈಫ್ ಗಾಗಿ ವೆಬ್ ತಾಣ ಆರಂಭಿಸಿದ ಚಾಯ್ ವಾಲ!

Posted By:
Subscribe to Oneindia Kannada

ಲಂಡನ್, ಜೂನ್ 23: ಸೆಕೆಂಡ್ ವೈಫ್ ಬೇಕೆ ಎಂದು ಕೇಳುತ್ತಾ ವೆಬ್ ಸೈಟ್ ಆರಂಭಿಸಿದ ಚಾಯ್ ವಾಲಗೆ ಭರಪೂರ ಪ್ರತಿಕ್ರಿಯೆ ಸಿಕ್ಕಿದೆ.

ಕಡ್ಡಾಯವಾಗಿ ದ್ವಿಪತ್ನಿತ್ವ ಹೊಂದಲು ಅನುಮತಿ ಇರುವವರಿಗಾಗಿ ಮಾತ್ರ ಇಲ್ಲಿ ಪ್ರವೇಶ ಇದು ಡೇಟಿಂಗ್ ತಾಣವಾಗಿದ್ದು, ಎರಡನೇ ಪತ್ನಿ ಬಾಡಿಗೆಗೆ ಲಭ್ಯ ಎಂಬ ಆಫರ್ ಗಳಿರುವ ವೆಬ್ ಸೈಟ್ ಗೆ ಅರ್ಜಿ ಹಾಕಿದವರ ಸಂಖ್ಯೆ 35,000ಕ್ಕೂ ಅಧಿಕ ದಾಟಿದೆ ಎಂದು ಬ್ರಿಟನ್ ನಿವಾಸಿ ಅಜಾದ್ ಚಾಯ್ ವಾಲ ಖುಷಿಯಿಂದ ಹೇಳಿದ್ದಾರೆ.

A website to hire a ‘Second Wife’ in Britain

ಬ್ರಿಟನ್ ನಲ್ಲಿ ದ್ವಿಪತ್ನಿತ್ವಗೆ ಮಾನ್ಯತೆಯಿಲ್ಲ. ಆದರೆ, ನನ್ನ ವೆಬ್ ಸೈಟ್ ಯಾವುದೇ ಅನೈತಿಕ ಚಟುವಟಿಕೆ ನಡೆಸುವ ತಾಣವಲ್ಲ. ಸೆಕೆಂಡ್ ವೈಫ್ .ಕಾಂ ಮೂಲಕ ಸಂಗಾತಿಯನ್ನು ಹುಡುಕುವ ಏಕಾಂಗಿಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ ಎಂದಿದ್ದಾರೆ. ವೆಬ್ ಸೈಟ್ ನ ಮುಖಪುಟದಲ್ಲೇ ಖುರಾನ್ ನ ವಾಕ್ಯಗಳನ್ನು ಉಲ್ಲೇಖಿಸಲಾಗಿದೆ.

33 ವರ್ಷ ವಯಸ್ಸಿನ ಉದ್ಯಮಿ ಚಾಯ್ ವಾಲ ಅವರು ಇಸ್ಲಾಂ ಧರ್ಮದ ನಿಯಮಗಳನ್ನು ಮೀರಿಲ್ಲ. ಸಭ್ಯತೆ ಮೀರಿದ ಚಿತ್ರಗಳು, ಎದೆ ಸೀಳು, ಸೊಂಟ ಬಳುಕಿಸುವ ಚಿತ್ರಗಳು ಇಲ್ಲಿ ಕಾಣಲು ಸಿಗುವುದಿಲ್ಲ ಎಂದಿದ್ದಾರೆ.

ಈ ವೆಬ್ ತಾಣ ಜನಪ್ರಿಯತೆ ಗಳಿಸುತ್ತಿದ್ದಂತೆ ಬ್ರಿಟನ್ ಸಂಸದರ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದರುವ ಸಂಸದ ಖಾಲಿದ್ ಮಹಮೂದ್ ಅವರು, ಇದು ಹುಚ್ಚುತನದ ಪರಮಾವಧಿ, ಬಹುಪತ್ನಿತ್ವ, ದ್ವಿಪತ್ನಿತ್ವಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದಿದ್ದಾರೆ. ಈ ರೀತಿ ಆಚರಣೆ ಕಂಡು ಬಂದರೆ ಅಂಥ ಮಹಿಳೆಯರಿಗೆ ಸಿಗುವ ಆರ್ಥಿಕ ಭದ್ರತೆಗೆ ತಡೆ ನೀಡಲಾಗುವುದು ಎಂದಿದ್ದಾರೆ. ಆದರೆ, ಈ ಡೇಟಿಂಗ್ ತಾಣಕ್ಕೆ ಮುಗಿಬೀಳುತ್ತಿರುವ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಲೇ ಇದೆ.

ಸೆಕೆಂಡ್ ವೈಫ್ ಗಾಗಿ ವೆಬ್ ತಾಣ ಆರಂಭಿಸಿದ ಚಾಯ್ ವಾಲ!

ಸೆಕೆಂಡ್ ವೈಫ್ ಗಾಗಿ ವೆಬ್ ತಾಣ ಆರಂಭಿಸಿದ ಚಾಯ್ ವಾಲ!

-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A muslim entrepreneuer, Britist resident Azad Chaiwala has started a dating website which offers for men who are looking for a second wife. He has got response from over 35,000 users.
Please Wait while comments are loading...