ಬಾಗ್ದಾದಿ ಅಂತ್ಯ ಸನ್ನಿಹಿತ: ಇರಾಕ್ ಸೇನೆ ನಿರ್ಣಾಯಕ ಹೋರಾಟ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 3: ಐಎಸ್ ಐಎಸ್ ನ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಇರಾಕಿ ಸೇನೆ ಸುತ್ತುವರಿದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಆಡಿಯೋ ಕ್ಲಿಪ್ ವೊಂದು ಹರಿದಾಡುತ್ತಿದೆ. ಅಲ್ ಬಾಗ್ದಾದಿ ಆಡಿಯೋ ಕ್ಲಿಪ್ ಅನ್ನು ಐಎಸ್ ಐಎಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಆತ ಮಾತನಾಡಿದ್ದಾನೆ. 'ಅಲ್ಲಾ ಹಾಗೂ ಆತನ ಸಂದೇಶ ಹೊತ್ತುತಂದವರು ನಮಗೆ ನೀಡಿದ ಪ್ರಮಾಣ ಇದು' ಎಂದಿದ್ದಾನೆ.

ಪಶ್ಚಿಮ ರಾಷ್ಟ್ರಗಳಲ್ಲಿ ಮುಸ್ಲಿಮೇತರರನ್ನು ಕೊಲ್ಲುವಂತೆ ಐಎಸ್ ಐಎಸ್ ಪರವಾಗಿ ಕೆಲಸ ಮಾಡುವವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.ಅಲ್ಲಿ ಮುಸ್ಲಿಮೇತರರನ್ನು ಕೊಲ್ಲುವುದು ಏಕೆ ಮುಖ್ಯ ಎಂದು ಪ್ರತಿಪಾದಿಸುವ ಪದ್ಯಗಳನ್ನು ಸಹ ಹಾಕುತ್ತಿದ್ದಾರೆ. 'ಇದು ಸುನ್ನಿ ಹಾಗೂ ಶಿಯಾ ಮುಸ್ಲಿಮರ ಮಧ್ಯದ ಯುದ್ಧ' ಎಂದು ಬಾಗ್ದಾದಿ ಆಡಿಯೋದಲ್ಲಿ ಹೇಳಿದ್ದಾನೆ.[ಭಾರತದಲ್ಲಿ ಎಚ್ಚರಿಕೆಯಿಂದ ಇರುವಂತೆ ಅಮೆರಿಕ ಪ್ರಜೆಗಳಿಗೆ ಸೂಚನೆ]

A cornered Bhagdadi sends out a desperate cry to ISIS operatives

ಟರ್ಕಿ ಮೇಲೆ ದಾಳಿ: ಇರಾಕಿ ಸೇನೆ ದಾಳಿ ನಡೆಸುವ ವೇಳೆ ತನ್ನ ಹೋರಾಟಗಾರರನ್ನು ಸಂಘಟಿಸಲು ಆತ ಯತ್ನಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡಲಾಗಿದೆ. ಟರ್ಕಿ ದೇಶದ ಮೇಲೆ ದಾಳಿ ನಡೆಸುವಂತೆ ಆತ ಕರೆ ನೀಡಿದ್ದಾನೆ. ಇರಾಕ್ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ಶಿಯಾ ಮುಸ್ಲಿಮರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಾಗ್ದಾದಿ ಆಡಿಯೋದಲ್ಲಿ ಹೇಳಿದ್ದಾನೆ.

ನಾನು ಹತ್ಯೆಯಾದರೂ ಈ ಹೋರಾಟ ಮುಂದುವರಿಸಬೇಕು. ಜಗತ್ತಿನ ವಿವಿಧೆಡೆ ಇರುವ ಐಎಸ್ ಐಎಸ್ ಹೋರಾಟಗಾರರು ನನ್ನ ಸಾವಿನ ನಂತರವೂ ಕಾರ್ಯಾಚರಣೆ ಮುಂದುವರಿಸಬೇಕು. ಇತ್ತೀಚೆಗೆ ಸಂಘಟನೆಯ ಹಲವರು ಸಾವನ್ನಪ್ಪಿದ್ದಾರೆ. ಅದರೆ ನಾವು ದುರ್ಬಲರಾಗಿಲ್ಲ ಎಂದು ಬಾಗ್ದಾದಿ ಹೇಳಿದ್ದಾನೆ.[ಸೆಕ್ಸ್ ದಾಸಿಯರು -ಇರಾಕಿ ಉಗ್ರರ ಪ್ರಮುಖ ಅಸ್ತ್ರ]

ಎರಡು ವರ್ಷದ ನಂತರ ಮೊಸುಲ್ ಗೆ: ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇರಾಕ್ ಪಡೆ ಮೊಸುಲ್ ಪ್ರವೇಶಿಸಿದೆ. ಬಾಗ್ದಾದಿ ಅಲ್ಲೇ ಅಡಗಿರಬಹುದು ಎಂಬ ಶಂಕೆಯಿದೆ. ಹಲವರ ಪ್ರಕಾರ ಬಾಗ್ದಾದಿಯ ಅಂತ್ಯ ಸನ್ನಿಹಿತವಾಗಿದೆ. ಬಾಗ್ದಾದಿಯ ಸಾವಿನಿಂದ ಐಎಸ್ ಐಎಸ್ ದುರ್ಬಲಗೊಳ್ಳುತ್ತದೆ. ಮತ್ತು ತಕ್ಷಣವೇ ಹೊಸ ಖಲೀಫನನ್ನ ಆಯ್ಕೆ ಮಾಡಬೇಕಾಗುತ್ತದೆ.

ಐಎಸ್ ಐಎಸ್ ನ ಮಣಿಸಿ, ಬಾಗ್ದಾದಿಯನ್ನು ಕೊಲ್ಲುವ ವಿಶ್ವಾಸದಲ್ಲಿದೆ ಇರಾಕಿ ಸೇನೆ. ಐಎಸ್ ಐಎಸ್ ಈಗಾಗಲೇ ತನ್ನ ಹಲವು ಹೋರಾಟಗಾರರನ್ನು ಕಳೆದುಕೊಂಡಿದೆ. ಸದ್ಯಕ್ಕೆ ಮೊಸುಲ್ ನಲ್ಲಿ ಐದು ಸಾವಿರ ಮಂದಿ ಹೋರಾಟಗಾರರಿದ್ದರೆ, ಹೊರ ಭಾಗದಲ್ಲಿ ಸಾವಿರದೈನೂರು ಮಂದಿ ಇದ್ದಾರೆ. ಹಲವರು ತಪ್ಪಿಸಿಕೊಂಡು ಹೋಗುವ ಯತ್ನದಲ್ಲಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ.[ಐಸಿಸ್ ನ ಲೈಂಗಿಕ ಕ್ರೌರ್ಯಕ್ಕೆ ನಲುಗಿದವಳ ಕರುಳು ಹಿಂಡುವ ಕಥೆ]

ಬಾಗ್ದಾದಿಯ ಸಾವಿನಿಂದ ಐಎಸ್ ಐಎಸ್ ದುರ್ಬಲವಾಗುವುದು ಹೌದು. ಆದರೆ ಇದರಿಂದ ಸಂಘಟನೆಯು ಹೋರಾಟದ ಮುಖ್ಯ ಭೂಮಿಕೆಗೆ ಬರಬಹುದು. ಐಎಸ್ ಐಎಸ್ ಪರವಾದ ಹೋರಾಟಗಾರರು ಇರಾಕ್ ಹಾಗೂ ಸಿರಿಯಾದ ಹೊರಭಾಗದಲ್ಲಿ ದಾಳಿ ಮಾಡಬಹುದು. ಇನ್ನೂ ಯುದ್ಧ ಬಾಕಿಯಿದೆ. ಪಶ್ಚಿಮ ರಾಷ್ಟ್ರಗಳನ್ನು ಗುರಿ ಮಾಡಿಕೊಂಡು ಹೆಚ್ಚಿನ ದಾಳಿಗಳಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amidst reports of ISIS chief Abu Bakr al-Bhagdadi being surrounded by the Iraqi army an audio clip has surfaced. The ISIS released an audio clip of Bhagdadi in which he is heard saying, 'this is what Allah and his messengers promised us.'
Please Wait while comments are loading...