ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್

Posted By:
Subscribe to Oneindia Kannada

ಮಾಸ್ಕೋ, ಜುಲೈ 31: ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಕಠಿಣಗೊಳಿಸುವ ವಿಧೇಯಕಕ್ಕೆ ಅಮೆರಿಕ ಸೆನೆಟ್ ಅನುಮೋದನೆ ನೀಡಿದ ಬೆನ್ನಲ್ಲೇ ರಷ್ಯಾ ಪ್ರತಿ ದಾಳಿ ಮಾಡಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತನ್ನ ದೇಶದಲ್ಲಿರುವ 755 ಅಮೆರಿಕನ್ ರಾಜತಾಂತ್ರಿಕರು ತಕ್ಷಣವೇ ರಷ್ಯಾದಿಂದ ನಿರ್ಗಮಿಸಬೇಕೆಂದು ಭಾನುವಾರದಂದು ತಾಕೀತು ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.

755 US diplomats must leave Russia, says Vladimir Putin

ರಷ್ಯದಲ್ಲಿನ ಅಮೆರಿಕನ್ ರಾಜತಾಂತ್ರಿಕ ಸಂಖ್ಯೆ ಹಾಗೂ ಅಮೆರಿಕದಲ್ಲಿರುವ ರಷ್ಯನ್ ರಾಜತಾಂತ್ರಿಕ ಸಂಖ್ಯೆ ಸಮಾನವಾಗಿರಬೇಕು. ಸೆಪ್ಟೆಂಬರ್ ಅಂತ್ಯದೊಳಗೆ 455 ಸಂಖ್ಯೆಗೆ ಇಳಿಸಬೇಕು ಎಂದು ರಷ್ಯಾದ ವಿದೇಶಾಂಗ ಇಲಾಖೆಯು ಈ ಹಿಂದೆ ಆಗ್ರಹಿಸಿತ್ತು.

'ಅಮೆರಿಕದಲ್ಲಿ ಪ್ರಸ್ತುತ ಸಾವಿರಕ್ಕೂ ಅಧಿಕ ಅಮೆರಿಕನ್ ರಾಜತಾಂತ್ರಿಕರು ಅಮೆರಿಕದ ರಾಯಭಾರಿ ಕಚೇರಿ ಹಾಗೂ ದೂತಾವಾಸ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದು ಪುತಿನ್ ಅವರು ರಶ್ಯನ್ ಟಿವಿ ವಾಹಿನಿ(Rossiya 1 TV)
ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಅಮೆರಿಕದ ಜೊತೆಗಿನ ನಮ್ಮ ದೇಶದ ಬಾಂಧವ್ಯವು ಉತ್ತಮಗೊಳ್ಳುವುದೆಂದು ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಅದರೆ ಸದ್ಯಕ್ಕೆ ಅಂತಹ ಸನ್ನಿವೇಶ ಕಂಡು ಬರುತ್ತಿಲ್' ಎಂದಿದ್ದಾರೆ.

Blue Whale Challenge Game: 14 Year Old Boy Suicide | Oneindia Kannada

ರಶ್ಯವು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ಹಾಗೂ 2014ರಲ್ಲಿ ಕ್ರೀಮಿಯಾದ ಮೇಲೆ ಆಕ್ರಮಣ ಮಾಡಿದ ಕಾರಣವೊಡ್ಡಿ ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವ ವಿಧೇಯಕವನ್ನು ಅಮೆರಿಕ ಸೆನೆಟ್ ಗುರುವಾರ ಬಹುಮತದೊಂದಿಗೆ ಅಂಗೀಕರಿಸಿತ್ತು. ಇದಾದ ಬಳಿಕ ರಷ್ಯಾ ತನ್ನ ನಡೆ ಇಟ್ಟಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Russian President Vladimir Putin on Sunday said 755 US diplomats must leave his country. This follows from the earlier announcement that Russia is to cut off US access to certain storage facilities the US Embassy uses in Moscow.
Please Wait while comments are loading...