ಅಫ್ಘಾನಿಸ್ತಾನದ ಮಸೀದಿಗಳ ಮೇಲೆ ಉಗ್ರರ ಅಟ್ಟಹಾಸ, 72 ಜನರು ಬಲಿ

Posted By:
Subscribe to Oneindia Kannada

ಕಾಬೂಲ್, ಅಕ್ಟೋಬರ್ 21 : ಮೊನ್ನೇ ಅಷ್ಟೇ ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿ 43 ಸೈನಿಕರನ್ನು ಬಲಿ ತೆಗೆದುಕೊಂಡ ಸುದ್ದಿ ಮಾಸುವ ಮುನ್ನವೇ ಮತ್ತೆ ಅಟ್ಟಹಾಸ ಮೆರೆದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಅಟ್ಟಹಾಸಕ್ಕೆ 43 ಸೈನಿಕರು ಬಲಿ

ಕಾಬೂಲ್ ನಲ್ಲಿರುವ ಶಿಯೈಟ್ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲೆ ಶುಕ್ರವಾರ ಸಂಜೆ 2 ಆತ್ಮಾಹುತಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 72 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

72 killed in twin suicide bomb attacks at Mosques in Afghanistan

ಕಾಬೂಲ್ ಶಿಯೈಟ್ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ಸಾಯಂಕಾಲ ಪ್ರಾರ್ಥನಾ ಸಮಯದಲ್ಲಿ ಮತ್ತೊಂದು ಮಸೀದಿ ಮೇಲೆ ದಾಳಿ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಒಟ್ಟು 72 ಜನ ಮೃತಪಟ್ಟಿದ್ದಾರೆ. 45 ಮಂದಿ ಗಾಯಗೊಂಡಿದ್ದಾರೆ.

ಈ ದಾಳಿ ನಡೆದಿರುವುದನ್ನು ಆಂತರಿಕ ಭದ್ರತೆ ಸಚಿವಾಲಯದ, ವಕ್ತಾರ ನಜೀಬ್ ಡ್ಯಾನಿಷ್ ಖಚಿತ ಪಡಿಸಿದ್ದು, ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.

ಅಕ್ಟೋಬರ್ 19ರಂದು ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಆರ್ಮಿ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಕ್ಯಾಂಪ್ ನಲ್ಲಿದ್ದ 60 ಜನರಲ್ಲಿ 43 ಜನರು ಅಸುನೀಗಿದ್ದರೆ, 9 ಜನರು ಗಾಯಗೊಂಡಿದ್ದರು. ಇನ್ನು 6 ಜನರು ನಾಪತ್ತೆಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
separate mosque attacks in Afghanistan on Friday, officials said, capping a bloody week in the war-torn country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ