ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ
ಇಂಡೋನೇಷ್ಯಾದ
ತನಿಂಬಾರ್ ಪ್ರದೇಶದಲ್ಲಿ ಮಂಗಳವಾರ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಮ್‌ಎಸ್‌ಸಿ) ತಿಳಿಸಿದೆ. ಭೂಕಂಪ ಭೂಮಿಯ ಮೇಲ್ಮೈಯಿಂದ 97 ಕಿಲೋಮೀಟರ್ (60.27 ಮೈಲುಗಳು) ಆಳದಲ್ಲಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಹೇಳಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಇದರಿಂದಾಗಿ
ಇಂಡೋನೇಷ್ಯಾ ಸುಮಾರು ಮೂರು ಗಂಟೆಗಳ ಕಾಲ ಸುನಾಮಿ ಭೀತಿಯನ್ನು ಎದುರಿಸಬೇಕಾಯಿತು. ಅದೃಷ್ಟವಶಾತ್ ಸಮುದ್ರದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಾಗಲಿಲ್ಲ ಎಂದು ತಿಳಿದುಬಂದಿದೆ. ತನಿಂಬಾರ್ ಪ್ರದೇಶದಲ್ಲಿ ಭೂಕಂಪನದ ಬಳಿಕ ನಾಲ್ಕು ಬಾರಿ ಭೂಮಿ ಕಂಪಿಸಿದ ವರದಿಗಳಾಗಿವೆ. ಉತ್ತರ ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ. ಕಟ್ಟಡಗಳಿಗೆ ಹಾನಿಯಾಗಿರುವ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭೂಕಂಪನ 2:47 ಗಂಟೆಗೆ ಸಂಭವಿಸಿದೆ, ಸುನಾಮಿ ಎಚ್ಚರಿಕೆಯನ್ನು 5:43ಕ್ಕೆ ಹಿಂಪಡೆಯಲಾಗಿದೆ. ಬಿಎಮ್‌ಕೆಜಿ ಮುಖ್ಯಸ್ಥೆ ದ್ವಿಕೋರಿಟಾ ಕರ್ನಾವತಿ ಮಾತನಾಡಿ, ಭೂಕಂಪನದಿಂದ ಯಾವುದೇ ಗಮನಾರ್ಹ ಬದಲಾವಣೆಗಳು ಸಮುದ್ರದಲ್ಲಿ ಕಂಡುಬಂದಿಲ್ಲ. ಹೀಗಾಗಿ ಕರಾವಳಿ ಭಾಗದ ಜನರಿಗೆ ತಮ್ಮ ಚಟುವಟಿಕೆಗಳನ್ನು ಮುಂದುವರೆಸಲು ತಿಳಿಸಲಾಗಿದೆ ಎಂದಿದ್ದಾರೆ.











Click it and Unblock the Notifications