ಇಂಡೋನೇಷ್ಯಾದಲ್ಲಿ 6.4 ತೀವ್ರತೆಯ ಭೂಕಂಪ ದಾಖಲು
ಜಕಾರ್ತಾ, ಮಾರ್ಚ್ 26: ಇಂಡೋನೇಷ್ಯಾದ ತಾನಿಂಬರ್ ದ್ವೀಪದಲ್ಲಿ ನಿನ್ನೆ(ಮಾ.25) 6.4 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ.
ಊಕಂಪ ಕೇಂದ್ರದಲ್ಲಿ ಮೊದಲು 6.5 ತೀವ್ರತೆ ದಾಖಲಾಗಿತ್ತು ಎಂದು ವರದಿ ಮಾಡಲಾಗಿತ್ತು. ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಘಟನೆಯಲ್ಲಿ ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ. ಪೆಸಿಫಿಕ್ ಸಮುದ್ರ ದಂಡೆಯಲ್ಲಿರುವ ಈ ಪ್ರದೇಶದಲ್ಲಿ ಆಗಾಗ ಭೂಕಂಪ ಸಂಭವಿಸುತ್ತಲೇ ಇರುತ್ತದೆ.













Click it and Unblock the Notifications