ಜಪಾನಿನಲ್ಲಿ 6.1 ತೀವ್ರತೆಯ ಭೂಕಂಪ: ಮೂವರು ಸಾವು
ಟೋಕಿಯೋ, ಜೂನ್ 18: ಜಪಾನಿನ ಓಸಾಕಾ ನಗರದಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪದಿಂದಾಗಿ ಮೂವರು ಮೃತರಾಗಿದ್ದಾರೆ.
ಪಶ್ಚಿಮ ಜಪಾನ್ ನಲ್ಲಿರುವ ಒಸಾಕಾದಲ್ಲಿ ಇಂದು(ಜೂನ್ 18) ಬೆಳಿಗ್ಗೆ ಭೂಕಂಪ ಸಂಭವಿಸಿದೆ. ಈ ಘಟನೆಯಲ್ಲಿ ಒಂಬತ್ತು ವರ್ಷದ ಮಗು ಸೇರಿದಂತೆ ಮೂವರು ಮೃತರಾಗಿದ್ದು, 37 ಜನ ಗಾಯಗೊಂಡಿದ್ದಾರೆ.
ಜಪಾನಿನ ಹ್ಯೋಗೊ, ಕ್ಯೋಟೊ, ಶಿಗಾ ಮತ್ತು ನಾರಾ ಪ್ರದೇಶಗಳು ಸಹ ಭೂಕಂಪಕ್ಕೆ ತುತ್ತಾಗಿವೆ. ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ಇದುವರೆಗೆ ನೀಡಲಾಗಿಲ್ಲ ಜಪಾನಿನ ಹವಾಮಾನ ಇಲಾಖೆ ತಿಳಿಸಿದೆ.

ಮೇ 9 ರಂದು ಆಫ್ಘಾನ್ ಗಡಿಯಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ದೆಹಲಿ, ಕಾಶ್ಮೀರದಲ್ಲೂ ಭೂಮಿ ನಡುಗಿದ ಅನುಭವವಾಗಿತ್ತು. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.












Click it and Unblock the Notifications