ಇಂಡೋನೇಶ್ಯಾದಲ್ಲಿ ಭೂಕಂಪ: 6.0 ತೀವ್ರತೆ ದಾಖಲು
ಜಕಾರ್ತಾ, ಜನವರಿ 23: ಇಂಡೋನೇಶ್ಯಾದ ಜಕಾರ್ತಾದಲ್ಲಿ ಇಂದು(ಜ.23) ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.0 ತೀವ್ರತೆ ದಾಖಲಾಗಿದೆ. ಲೆಬಾಕ್ ತಾಣದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜಕಾರ್ತಾ ಪೋಸ್ಟ್ ವರದಿ ಮಾಡಿದೆ.
ಇಲ್ಲಿನ ಹವಾಮಾನ ಇಲಾಖೆಯ ಕಡೆಯಿಂದ ಯಾವುದೇ ಸುನಾಮಿ ಮುನ್ಸೂಚನೆ ದೊರಕಿಲ್ಲ. ಯಾವುದೇ ಸಾವು ನೋವಿನ ಕುರಿತೂ ವರದಿಯಾಗಿಲ್ಲ. ಭೂಕಂಪದ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಳೆದ ತಿಂಗಳಷ್ಟೇ ಇಮಡೋನೇಶ್ಯಾದಲ್ಲಿ ಸಂಭವಿಸಿದ್ದ 6.5 ತೀವ್ರತೆಯ ಭೂಕಂಪದಲ್ಲಿ ಮೂವರು ಸಾವಿಗೀಡಾಗಿ, 7 ಜನ ಗಂಭೀರವಾಗಿ ಗಾಯಗೊಂಡಿದ್ದರು.











Click it and Unblock the Notifications