ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 20 ವರ್ಷಗಳಿಂದ ಜಗತ್ತನ್ನು ಕಾಡಿದ ಚೀನಾದ 5 ವೈರಸ್‌ಗಳು

|
Google Oneindia Kannada News

ವಾಷಿಂಗ್ಟನ್ , ಮೇ 13: ಕಳೆದ ಸುಮಾರು 20 ವರ್ಷಗಳಿಂದ ಚೀನಾದ ಈ ಐದು ವೈರಸ್‌ಗಳು ಇಡೀ ಜಗತ್ತನ್ನೇ ಕಾಡಿದೆ.

ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡಿರುವ ಕೊರೊನಾ ವೈರಸ್‌ಗೆ 2,90,000ಸಾವಿರ ಮಂದಿ ಮೃತಪಟ್ಟಿದ್ದು ವಿಶ್ವದಾದ್ಯಂತ 40ಕ್ಕೂ ಹೆಚ್ಚು ಲಕ್ಷ ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್

ಅಮೆರಿಕದ ಒಂದರಲ್ಲೇ 80 ಸಾವಿರ ಮಂದಿ ಮೃತಪಟ್ಟಿದ್ದು, 1.4 ಲಕ್ಷ ಮಂದಿಗೆ ಕೊರೊನಾ ತಗುಲಿದೆ.

ಚೀನಾದ ವಿರುದ್ಧದ ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿರುವ ಅಮೆರಿಕ, ಕಳೆದ ಎರಡು ದಶಕಗಳಲ್ಲಿ ಐದು ಸಾಂಕ್ರಾಮಿಕ ಮಹಾಮಾರಿ ಚೀನಾದಿಂದಲೇ ಉದ್ಭವಿಸಿದೆ ಎಂದು ಹೇಳಿಕೆ ನೀಡಿದೆ.

ಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆಟ್ರಂಪ್ ಹೊಸ ಗಾನ: ಔಷಧ ಇಲ್ಲದೆಯೇ ಕೊರೊನಾ ಮಾಯವಾಗುತ್ತಂತೆ

ಕೊರೊನಾ ವೈರಸ್ ಚೀನಾದ ವುಹಾನ್‌ನಿಂದಲೇ ಹರಡಿದೆ ಎಂಬುದು ಎಲ್ಲರಿಗೆ ಗೊತ್ತಿರುವ ಸಂಗತಿ ಅದರ ಜನ್ಮಸ್ಥಳ ಪ್ರಯೋಗಾಲ ಅಥವಾ ಮಾಂಸ ಮಾರುಕಟ್ಟೆಯೇ ಆಗಿದೆ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯಾನ್ ಹೇಳಿದ್ದಾರೆ.

20 ವರ್ಷಗಳಲ್ಲಿ ಐದು ವೈರಸ್

20 ವರ್ಷಗಳಲ್ಲಿ ಐದು ವೈರಸ್

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯಾನ್ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಚೀನಾದಿಂದ 5 ಸಾಂಕ್ರಾಮಿಕ ಮಹಾಮಾರಿ ಹುಟ್ಟುಕೊಂಡು ಜಗತ್ತನ್ನೇ ವ್ಯಾಪಿಸಿವೆ. ಇದೆಲ್ಲವೂ ಒಂದು ಹಂತದಲ್ಲಿ ಕೊನೆಗಾಣಲೇ ಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಹರಡಲು ಚೀನಾ ಕಾರಣ

ಕೊರೊನಾ ಹರಡಲು ಚೀನಾ ಕಾರಣ

ಜಗತ್ತಿನಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಬಲಿ ಪಡೆದಿರುವ 42 ಲಕ್ಷಕ್ಕೂ ಅಧಿಕ ಜನರಿಗೆ ಅಂಟಿಕೊಂಡಿರುವ ಕೊರೊನಾ ವೈರಸ್ ಹರಡುವುದಕ್ಕೆ ಚೀನಾವೇ ಕಾರಣ ಎಂದು ಮತ್ತೆ ಮತ್ತೆ ಹೇಳಿದ್ದಾರೆ.

ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಮಾತು

ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಮಾತು

ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಬರ್ಟ್ , ಚೀನಾದ ಪ್ರಯೋಗಾಲಯಗಳಿರಲಿ ಅಥವಾ ಜೀವಂತ ಪ್ರಾಣಿಗಳ ಹಸಿಮಾಂಸ ಮಾರಾಟ ಮಾಡುವ ಜಾಗವೇ ಇರಲಿ, ಸಾಂಕ್ರಾಮಿಕ ಮಾರಿಗಳು ಚೀನಾದಿಂದ ಉದ್ಭವಿಸಿ ವ್ಯಾಪಿಸುವುದನ್ನು ಸಹಿಸಲಾಗುವುದಿಲ್ಲ. ಆದರೆ ಇಡೀ ಜಗತ್ತು ಒಂದಾಗಿ ಹೋರಾಡಿದರೆ ಗೆಲುವು ಸಾಧ್ಯ ಎಂದು ಹೇಳಿದ್ದಾರೆ.

ಚೀನಾದಿಂದ ಹರಡಿರುವ ವೈರಸ್‌ಗಳು

ಚೀನಾದಿಂದ ಹರಡಿರುವ ವೈರಸ್‌ಗಳು

ಕಳೆದ ಎರಡು ದಶಕಗಳಲ್ಲಿ ಚೀನಾದಿಂದ ಐದು ಸಾಂಕ್ರಾಮಿಕ ರೋಗಗಳ ವೈರಸ್ ಹರಡಿದೆ. ಏವಿಯನ್ ಫ್ಲೂ, ಸಾರ್ಸ್, ಮಾರ್ಸ್, ಸ್ವೈನ್ ಫ್ಲೂ ಈಗ ಕೊರೊನಾ ಕೂಡ ಅಲ್ಲಿಂದಲೇ ಹರಡಿದೆ. ಚೀನಾದಿಂದ ಹರಡಿ ಜಗತ್ತಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಗಂಡಾಂತರಕ್ಕೆ ಸಿಲುಕಿಸಿದೆ.

English summary
As many as five plagues have come out of China in the last 20 years and at some point it has to stop, US National Security Advisor Robert O'Brien has said, holding the country responsible for the origin of the coronavirus pandemic which has killed over 250,000 people globally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X