ನೇಪಾಳದ ಅನ್ನಪೂರ್ಣ ಪರ್ವತದಿಂದ 34 ವರ್ಷದ ಭಾರತೀಯ ಆರೋಹಿ ನಾಪತ್ತೆ

ಕಠ್ಮಂಡು ಏಪ್ರಿಲ್ 18: ನೇಪಾಳದ ಅನ್ನಪೂರ್ಣ ಪರ್ವತದಿಂದ 34 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು ಸೋಮವಾರ ನಾಪತ್ತೆಯಾಗಿದ್ದಾರೆ ಎಂದು ಯಾತ್ರೆಯ ಸಂಘಟಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಸ್ಥಾನದ ಕಿಶನ್‌ಗಢ್‌ನ ನಿವಾಸಿ ಅನುರಾಗ್ ಮಾಲು ಅವರು ಮೌಂಟ್ ಅನ್ನಪೂರ್ಣ ಕ್ಯಾಂಪ್ IIIರಿಂದ ಇಳಿಯುವಾಗ ನಾಪತ್ತೆಯಾಗಿದ್ದಾರೆ. ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾದ ಮಾಲು ಅವರ ಪತ್ತೆಗಾಗಿ ಟ್ರೆಕ್ಕಿಂಗ್ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ಪಿಟಿಐಗೆ ತಿಳಿಸಿದ್ದಾರೆ.

34-year-old Indian mountaineer goes missing from Nepals Annapurna mountain

ಹಿಮಾಲಯನ್ ಟೈಮ್ಸ್ ಪತ್ರಿಕೆಯ ಪ್ರಕಾರ, ನಾಪತ್ತೆಯಾದ ವ್ಯಕ್ತಿ ಮಾಲು ಅವರು 8,000 ಮೀ. ಮೇಲಿನ ಎಲ್ಲಾ 14 ಶಿಖರಗಳನ್ನು ಮತ್ತು ಏಳು ಶಿಖರಗಳನ್ನು ಏರುವ ಉದ್ದೇಶವನ್ನು ಹೊಂದಿದ್ದರು. ಆದರೆ ಈಗ ಅವರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. "ನಾಪತ್ತೆಯಾದ ಕೆಲವೇ ಸಮಯದಲ್ಲಿ ನಾವು ಮಾಲುಗಾಗಿ ವ್ಯಾಪಕ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ. ಆದರೆ, ಸಂಜೆಯವರೆಗೂ ನಾವು ಅವನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಲಿಲ್ಲ" ಎಂದು ಶೆರ್ಪಾ ಹೇಳಿದರು.

"ನಾವು ಮಂಗಳವಾರ ಹುಡುಕಾಟವನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು. ಮಾಲು ಅವರಿಗೆ REX ಕರಮ್‌ವೀರ್ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅನ್ನಪೂರ್ಣ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದ್ದು, ಸಮುದ್ರ ಮಟ್ಟದಿಂದ 8,091 ಮೀಟರ್ ಎತ್ತರದಲ್ಲಿದೆ. ಇದು ಅತ್ಯಂತ ಸೂಕ್ಷ್ಮ ಚಾರಣವಾಗಿದೆ. ಅದರ ಆರೋಹಣದಲ್ಲಿನ ತೊಂದರೆ ಮತ್ತು ಅಪಾಯಕ್ಕೆ ಇದು ಹೆಸರುವಾಸಿಯಾಗಿದೆ.

34-year-old Indian mountaineer goes missing from Nepals Annapurna mountain

ನೇಪಾಳದ ಅನ್ನಪೂರ್ಣ ಪರ್ವತದ ಬಗ್ಗೆ

ಇಲ್ಲಿ ಟ್ರೆಕ್ಕಿಂಗ್ ತಾಣಗಳು ಸಾಹಸಿಗಳಿಗೆ ಹೇಳಿ ಮಾಡಿಸಿದ್ದು. ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಎಲ್ಲ ದಿಕ್ಕುಗಳಲ್ಲಿಯೂ ಭಾರತವಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತಶಿಖರಗಳ ಪೈಕಿ ಎಂಟು ಶಿಖರಗಳು ನೇಪಾಳದಲ್ಲಿಯೇ ಇವೆ.

ಬೆಟ್ಟಗುಡ್ಡಗಳ ಪ್ರದೇಶವು ಖಠ್ಮಂಡು ಕಣಿವೆಯನ್ನು ಒಳಗೊಂಡಿದೆ. ಮಹಾಭಾರತ ಲೇಕ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳು ಇವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದ ಎತ್ತರದ ಪ್ರದೇಶ. ಎವರೆಸ್ಟ್ , ಕಾಂಚನ್ ಜುಂಗಾ, ಅನ್ನಪೂರ್ಣಾ, ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ಭಾಗದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+