ವಿಮಾನಯಾನಕ್ಕೆ 2019 ಸುರಕ್ಷಿತ ವರ್ಷ: ಸಂಭವಿಸಿದ ಅಪಘಾತ, ಸಾವುಗಳೆಷ್ಟು?

ನವದೆಹಲಿ, ಜನವರಿ 2: ವಿಮಾನಯಾನದಲ್ಲಿ 2019ರಲ್ಲಿ ಸಾಕಷ್ಟು ಭೀಕರ ಅಪಘಾತಗಳು ಸಂಭವಿಸಿದ್ದರೂ ಕಳೆದ 74 ವರ್ಷಗಳಲ್ಲಿ ಮೂರನೇ ಅತಿ ಸುರಕ್ಷಿತ ವರ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಥಿಯೋಪಿಯಾದ ಬೋಯಿಂಗ್ 737 ವಿಮಾನ ಪತನವಾಗಿ 157 ಮಂದಿ ಸತ್ತಿದ್ದರೂ ಅದಕ್ಕೂ ಒಂದು ದಿನ ಮೊದಲು ಕೊಲಂಬಿಯಾದಲ್ಲಿ ನಡೆದ ವಿಮಾನ ಅಪಘಾತದಲ್ಲಿ 14 ಜನ ಮೃತಪಟ್ಟಿದ್ದರು.

ಐದು ದಿನಗಳ ಹಿಂದೆ ಖಜಕಿಸ್ತಾನ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದಾರೆ.

flight
ಒಟ್ಟಾರೆ 2019ರಲ್ಲಿ 20 ಭೀಕರ ಅಪಘಾತಗಳು ನಡೆದಿದ್ದರೆ, 283 ಜನ ಜೀವ ಕಳೆದುಕೊಂಡಿದ್ದಾರೆ. ಆದಾಗ್ಯೂ ಎರಡನೇ ವಿಶ್ವ ಯುದ್ಧದ ಬಳಿಕ 2019 ಮೂರನೇ ಅತಿ ಸುರಕ್ಷಿತ ವರ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿಯವರೆಗೆ 2017 ಅತಿ ಸುರಕ್ಷಿತ ವರ್ಷವಾಗಿತ್ತು, ಆಗ 44 ಮಂದಿ ಮೃತಪಟ್ಟಿದ್ದರು. 2013 ಕೂಡ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಕ್ರಮವಾಗಿ ಈ ಎರಡು ವರ್ಷಗಳಲ್ಲಿ 44 ಹಾಗೂ 256 ಜನರು ಮೃತಪಟ್ಟಿದ್ದರು.

ಎರಡನೇ ವಿಶ್ವಯುದ್ಧದ ಬಳಿಕ ವಿಮಾನಯಾನಕ್ಕೆ 1972 ಅತಿ ಭೀಕರ ವರ್ಷ ಎನಿಸಿಕೊಂಡಿತ್ತು. ಆಗ ಒಟ್ಟು 65 ಭೀಕರ ಅಪಘಾತಗಳು ಸಂಭವಿಸಿ 2472 ಜನರು ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+