ವಂದೇ ಭಾರತ್ ವಿಮಾನದಲ್ಲಿ ವುಹಾನ್‌ಗೆ ಹೊರಟಿದ್ದ 19 ಭಾರತೀಯರಿಗೆ ಕೊರೊನಾ ಸೋಂಕು

ವಂದೇ ಭಾರತ್ ವಿಮಾನದಲ್ಲಿ ಭಾರತದಿಂದ ಚೀನಾದ ವುಹಾನ್‌ಗೆ ತೆರಳುತ್ತಿದ್ದ 19 ಮಂದಿ ಭಾರತೀಯ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮುಂದಿನ ವಿಮಾನಗಳ ಸಂಚಾರದ ಕುರಿತು ಸ್ಪಷ್ಟನೆ ದೊರೆತಿಲ್ಲ.

ನವದೆಹಲಿಯಿಂದ ಚೀನಾದ ವುಹಾನ್ ನಗರಕ್ಕೆ ತೆರಳಿದ್ದ 19 ಮಂದಿ ಭಾರತೀಯರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ.ವಿಮಾನದಲ್ಲಿ 277 ಪ್ರಯಾಣಿಕರಿದ್ದರು, ಅದರಲ್ಲಿ ಕನಿಷ್ಠ 39 ಮಂದಿಗೆ ಲಕ್ಷಣವಿಲ್ಲ, ಅವರನ್ನು ಪರೀಕ್ಷಿಸಿದಾಗ ಅವರಲ್ಲಿ ಪ್ರತಿಕಾಯಗಳಿರುವುದು ಪತ್ತೆಯಾಗಿದೆ.

58 ಪ್ರಯಾಣಿಕರನ್ನು ಕೊವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ, ಉಳಿದ ಪ್ರಯಾಣಿಕರನ್ನು 14 ದಿನಗಳ ಕ್ವಾಂರಂಟೈನ್‌ಗೆ ಒಳಪಡಿಸಲಾಗಿದೆ.ವಂದೇ ಭಾರತ್ ವಿಮಾನದಲ್ಲಿ ಚೀನಾಗೆ ತೆರಳುತ್ತಿದ್ದ ಸಾಕಷ್ಟು ಭಾರತೀಯರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

19 Indians Test Covid-19 Positive On Vande Bharat Flight To Wuhan


ಮುಂದಿನ ವಾರಗಳಲ್ಲಿ 1500ಕ್ಕೂ ಹೆಚ್ಚು ಭಾರತೀಯರು ಚೀನಾಗೆ ವಾಪಸಾಗಲು ಕಾಯುತ್ತಿದ್ದಾರೆ.ಚೀನಾದಲ್ಲಿ 85,997 ಕೊರೊನಾ ಸೋಂಕಿತರಿದ್ದಾರೆ, 4634 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ 21 ಹೊಸ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+