ಸಿರಿಯಾ ರಾಜಧಾನಿಯಲ್ಲಿ ಭೀಕರ ಬಾಂಬ್ ಸ್ಫೋಟಕ್ಕೆ 18 ಬಲಿ
ಡಮಾಸ್ಕಸ್, ಜುಲೈ 2: ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಜರುಗಿದ ಮೂರು ಭೀಕರ ಕಾರ್ ಬಾಂಬ್ ಸ್ಫೋಟಕ್ಕೆ ಕನಿಷ್ಟ 18 ಜನ ಸಾವನ್ನಪ್ಪಿದ್ದು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಒಟ್ಟು ಮೂರು ಕಾರ್ ಬಾಂಬ್ ಸ್ಫೋಟಿಸಿದ್ದು ಅದರಲ್ಲೇ ಒಂದು ಬಾಂಬ್ ಸ್ಫೋಟದಲ್ಲಿ ಕನಿಷ್ಟ 18 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 7 ಜನ ಸೈನಿಕರೂ ಸೇರಿದ್ದಾರೆ. ಇಲ್ಲಿನ ಬಾಬ್ ತೌಮಾ ಸಮೀಪದ ತಹ್ರೀರ್ ಸ್ಕ್ವಾರ್ ನಲ್ಲಿ ಇಂದು ಮುಂಜಾನೆ ಆತ್ಮಾಹುತಿ ಬಾಂಬ್ ಕೋರನೊಬ್ಬ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮ ಈ ಬಾಂಬ್ ದಾಳಿ ನಡೆದಿದೆ.

ಇನ್ನುಳಿದ ಕಾರ್ ಬಾಂಬ್ ಗಳು ಡಮಾಸ್ಕಸ್ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದವು ಎನ್ನಲಾಗಿದೆ. ಈ ಸಂದರ್ಭ ಪೊಲೀಸರು ಕಾರುಗಳನ್ನು ನಿಲ್ಲಿಸಿದ್ದು ಇದೇ ವೇಳೆ ಸ್ಫೋಟ ಸಂಭವಿಸಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಿರಿಯಾದಲ್ಲಿ ನಡೆದ ಭಯಾನಕ ಬಾಂಬ್ ದಾಳಿ ಇದಾಗಿದೆ.












Click it and Unblock the Notifications