ನೀರಿನೊಳಗಿನ ಪ್ಲಾಸ್ಟಿಕ್ ಪತ್ತೆಹಚ್ಚುತ್ತೆ ಈ ಆಮೆ: 16 ವರ್ಷದ ವಿದ್ಯಾರ್ಥಿಯ ಅದ್ಭುತ ಆವಿಷ್ಕಾರ

ಜಗತ್ತಿನಾದ್ಯಂತ ಸಾಗರಗಳು ಹಾಗೂ ಕೆರೆ ನದಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳೇ ತುಂಬಿ ತುಳುಕುತ್ತಿವೆ. ಇದು ಪರಿಸರಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬರಿಗಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಈ ಪ್ಲಾಸ್ಟಿಕ್ ಕಣಗಳನ್ನ ಪತ್ತೆಹಚ್ಚುವುದು ವಿಜ್ಞಾನಿಗಳಿಗೂ ದೊಡ್ಡ ಸವಾಲಾಗಿದೆ. ಈ ಜಾಗತಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಕೆನಡಾದ 16 ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ಇವಾನ್ ಬಡ್ಸ್ ಅತ್ಯಾಧುನಿಕ ರೋಬೋಟ್ ಆಮೆಯೊಂದನ್ನ ಅಭಿವೃದ್ಧಿಪಡಿಸಿ ವಿಶ್ವದ ಗಮನ ಸೆಳೆದಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಆಧಾರಿತ ಈ ರೋಬೋಟ್ ಆಮೆಯು ನೀರಿನೊಳಗೆ ಸುಲಭವಾಗಿ ಚಲಿಸುತ್ತಾ, ಶೇ. 94ರಷ್ಟು ನಿಖರತೆಯೊಂದಿಗೆ ಮೈಕ್ರೋಪ್ಲಾಸ್ಟಿಕ್ ಕಣಗಳನ್ನ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಈ ಆವಿಷ್ಕಾರಕ್ಕಾಗಿ ಇವಾನ್ ಅವರಿಗೆ 2026ರ ಪ್ರತಿಷ್ಠಿತ ರಿಜೆನೆರಾನ್ ಇಂಟರ್ನ್ಯಾಷನಲ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ನಲ್ಲಿ ಭವಿಷ್ಯದ ಪೀಳಿಗೆಯ ಸಕಾರಾತ್ಮಕ ಫಲಿತಾಂಶಗಳಿಗಾಗಿ ಗಾರ್ಡನ್ ಇ. ಮೂರ್ ಪ್ರಶಸ್ತಿ ಹಾಗೂ ಸುಮಾರು 50,000 ಡಾಲರ್‌ ಅಂದರೆ ಅಂದಾಜು 42 ಲಕ್ಷ ರೂಪಾಯಿ ಮೌಲ್ಯದ ಸ್ಕಾಲರ್‌ಶಿಪ್ ಲಭಿಸಿದೆ.

16 Year Old Canadian

ಆಮೆಯ ಈಜುಗಾರಿಕೆಯೇ ರೋಬೋಟ್‌ಗೆ ಸ್ಫೂರ್ತಿ

2024ರಲ್ಲಿ ಒಂಟಾರಿಯೊದಲ್ಲಿ ಕುಟುಂಬದೊಂದಿಗೆ ಕ್ಯಾಂಪಿಂಗ್‌ಗೆ ತೆರಳಿದ್ದಾಗ, ಅಲ್ಲಿನ ಕೆರೆಯಲ್ಲಿ ಸ್ನ್ಯಾಪಿಂಗ್ ಟರ್ಟಲ್ ಎಂಬ ಆಮೆಯೊಂದು ಸರಾಗವಾಗಿ ಹಾಗೂ ಅತ್ಯಂತ ಕಡಿಮೆ ಶಕ್ತಿಯನ್ನು ಬಳಸಿ ಈಜುತ್ತಿರುವುದನ್ನು ಇವಾನ್ ಗಮನಿಸಿದರು. ಆ ಆಮೆಯ ಚಲನೆಯೇ ಈ ರೋಬೋಟ್ ವಿನ್ಯಾಸಕ್ಕೆ ಪ್ರಮುಖ ಸ್ಫೂರ್ತಿಯಾಯಿತು. ಯಾವುದೇ ಮ್ಯಾನುಯಲ್ ಕಂಟ್ರೋಲ್ ಇಲ್ಲದೆ ತಾನಾಗಿಯೇ ಕಾರ್ಯನಿರ್ವಹಿಸುವ ಈ ಆಕಾರದ ರೋಬೋಟ್, ಜಲಚರಗಳಿಗೂ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ.

ಈ ಪ್ರಾಜೆಕ್ಟ್‌ಗಾಗಿ ಇವಾನ್ ಬರೋಬ್ಬರಿ 4,000 ಗಂಟೆಗಳನ್ನ ಮೀಸಲಿಟ್ಟಿದ್ದಾರೆ. ಆರಂಭದಲ್ಲಿ ಅವರ ಅಜ್ಜನ ಮನೆಯ ಈಜುಕೊಳದಲ್ಲಿ ಪ್ರಯೋಗ ನಡೆಸಿದಾಗ, ಈ ರೋಬೋಟ್ ಈಜುವ ಬದಲು ಇಟ್ಟಿಗೆಯಂತೆ ನೀರಿನಲ್ಲಿ ಮುಳುಗಿ ಹೋಗಿತ್ತು. ಛಲ ಬಿಡದ ಇವಾನ್, ನಂತರದ ದಿನಗಳಲ್ಲಿ ಅದರ ತೇಲುವಿಕೆ, ಸಮತೋಲನ ಮತ್ತು ನ್ಯಾವಿಗೇಷನ್ ವ್ಯವಸ್ಥೆಯನ್ನ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿ ಯಶಸ್ವಿಯಾದರು.

ನೀರಿನಲ್ಲೇ ಮೈಕ್ರೋಪ್ಲಾಸ್ಟಿಕ್ ಪತ್ತೆಹಚ್ಚುವ 3D ತಂತ್ರಜ್ಞಾನ

ಈ ರೋಬೋಟ್ ಆಮೆಯ ಪ್ರಮುಖ ಆಕರ್ಷಣೆಯೆಂದರೆ ಇದರಲ್ಲಿ ಅಳವಡಿಸಲಾಗಿರುವ 3D ಹೊಲೊಗ್ರಾಫಿಕ್ ಇಮೇಜಿಂಗ್ ಸಿಸ್ಟಮ್. ಸಾಮಾನ್ಯ ಫೋಟೋಗಳ ಬದಲಾಗಿ, ಇದು ನೀರಿನಲ್ಲಿ ತೇಲುವ ಸೂಕ್ಷ್ಮ ಕಣಗಳ 3D ಹೊಲೊಗ್ರಾಮ್‌ಗಳನ್ನ ಸೆರೆಹಿಡಿಯುತ್ತದೆ. ಬಳಿಕ ಇದರಲ್ಲಿರುವ AI ಮಾಡೆಲ್, ಆ ಚಿತ್ರಗಳನ್ನ ವಿಶ್ಲೇಷಿಸಿ ನೈಸರ್ಗಿಕ ಕಣಗಳಿಗೂ ಹಾಗೂ ಮೈಕ್ರೋಪ್ಲಾಸ್ಟಿಕ್‌ಗೂ ಇರುವ ವ್ಯತ್ಯಾಸವನ್ನು ನಿಖರವಾಗಿ ಗುರುತಿಸುತ್ತದೆ. ಮಾನವನ ಕೂದಲಿನಷ್ಟು ಅಂದರೆ ಕೇವಲ 10 ಮೈಕ್ರಾನ್ ಗಾತ್ರದ ಪ್ಲಾಸ್ಟಿಕ್ ಕಣಗಳನ್ನೂ ಇದು ಪತ್ತೆ ಮಾಡಬಲ್ಲದು.

ಪ್ರಸ್ತುತ, ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷಿಸಲು ಸಾಕಷ್ಟು ಸಮಯ ಹಾಗೂ ಹಣ ಖರ್ಚಾಗುತ್ತದೆ. ಆದರೆ ಇವಾನ್ ಅವರ ಈ ತಂತ್ರಜ್ಞಾನದಿಂದ ನೀರಿನೊಳಗಿದ್ದೇ ತ್ವರಿತವಾಗಿ ಮಾಲಿನ್ಯದ ಮಟ್ಟವನ್ನು ವಿಶ್ಲೇಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+