ಸಮುದ್ರದಲ್ಲಿ ತೈಲ ಟ್ಯಾಂಕರ್ ದುರಂತ: 13 ಭಾರತೀಯರು ನಾಪತ್ತೆ
ಒಮಾನ್ ಬಳಿ ತೈಲ ಟ್ಯಾಂಕರ್ ಮುಗುಚಿಕೊಂಡ ಪರಿಣಾಮ ದೊಡ್ಡ ಅನಾಹುತ ಒಂದು ನಡೆದು ಹೊಂದಿದೆ. ಈ ಟ್ಯಾಂಕರ್‌ನಲ್ಲಿ ಪ್ರಯಾಣಿಸುತ್ತಿದ್ದ 16 ಸಿಬ್ಬಂದಿಗಳು ನಾಪತ್ತೆಯಾಗಿದ್ದು, ಇದರಲ್ಲಿ 13 ಭಾರತೀಯರು ಸೇರಿದ್ದಾರೆ. ತೈಲ ಟ್ಯಾಂಕರ್ ಸಮುದ್ರದಲ್ಲಿ ಮುಳಗಿದ ಘಟನೆ ಒಂದು ದಿನದ ಬಳಿಕ ಪತ್ತೆಯಾಗಿದೆ. ಇನ್ನು ನಾಪತ್ತೆ ಆದವರಿಗೆ ಶೋಧ ಕಾರ್ಯ ಭರದಿಂದ ನಡೆದಿದೆ ಎಂದು ದೇಶದ ಸಾಗರ ಸುರಕ್ಷತಾ ಕೇಂದ್ರ ಮಂಗಳವಾರ ತಿಳಿಸಿದೆ.
ಸಮುದ್ರದ ಮಧ್ಯದಲ್ಲಿ ಮಗಚಿಕೊಂಡ ಟ್ಯಾಂಕರ್‌ನಲ್ಲಿ 13 ಜನ ಭಾರತೀಯ ಸಿಬ್ಬಂದಿಗಳು ಹಾಗೂ ಮೂವರು ಶ್ರೀಲಂಕಾದವರು ಸೇರಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಲಾಗಿದೆ. ಹಡಗು ಮುಳುಗಿದೆ ಮತ್ತು ತಲೆಕೆಳಗಾಗಿದೆ ಎಂದು ಕೇಂದ್ರವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಹಡಗು ಮುಳುಗಿದೆಯೇ ಅಥವಾ ತೈಲ ಅಥವಾ ತೈಲ ಉತ್ಪನ್ನಗಳು ಸಮುದ್ರಕ್ಕೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಅದು ಖಚಿತಪಡಿಸಿಲ್ಲ.

LSEG ಯಿಂದ ಲಭ್ಯವಾದ ಶಿಪ್ಪಿಂಗ್ ಡೇಟಾದ ಪ್ರಕಾರ ಟ್ಯಾಂಕರ್ ಯೆಮೆನ್‌ನ ಏಡೆನ್ ಬಂದರಿಗೆ ಹೋಗುತ್ತಿತ್ತು. ಮತ್ತು ಒಮಾನ್‌ನ ಪ್ರಮುಖ ಕೈಗಾರಿಕಾ ಬಂದರು ಡುಕ್ಮ್ ಬಳಿ ಮಗುಚಿ ಬಿದ್ದಿದೆ ಎಂದು ತೋರಿಸಿದೆ. ಹಡಗು 2007 ರಲ್ಲಿ ನಿರ್ಮಿಸಲಾದ 117 ಮೀಟರ್ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಎಂದು ಶಿಪ್ಪಿಂಗ್ ಡೇಟಾ ತೋರಿಸುತ್ತದೆ. ಅಂತಹ ಸಣ್ಣ ಟ್ಯಾಂಕರ್‌ಗಳನ್ನು ಸಾಮಾನ್ಯವಾಗಿ ಸಣ್ಣ ಕರಾವಳಿ ಪ್ರವಾಸಗಳಿಗೆ ಬಳಸಲಾಗುತ್ತದೆ.
ಮಾರಿಟೈಮ್ ಸೇಫ್ಟಿ ಸೆಂಟರ್ ಪ್ರಕಾರ, ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ತೈಲ ಟ್ಯಾಂಕರ್ ದುಬೈನ ಹಮ್ರಿಯಾ ಬಂದರಿನಿಂದ ಹೊರಟಿದೆ. ಕೊಮೊರೊಸ್ ಧ್ವಜವನ್ನು ಅದರ ಮೇಲೆ ಹಾರಿಸಲಾಗಿತ್ತು. ಅದು ಯೆಮನ್‌ನ ಏಡೆನ್ ಬಂದರಿಗೆ ಹೋಗುತ್ತಿತ್ತು. ಬಂದರು ಪಟ್ಟಣವಾದ ದುಕ್ಮ್ ಬಳಿ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 46 ಕಿಮೀ ದೂರದಲ್ಲಿ ತೈಲ ಟ್ಯಾಂಕರ್ ಮಗುಚಿ ಬಿದ್ದಿದೆ. ಸಿಬ್ಬಂದಿಯ ಹುಡುಕಾಟದಲ್ಲಿ ಎರಡು ದಿನಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
2014 ರಿಂದ ಇರಾನ್ ಬೆಂಬಲಿತ ಹೌತಿ ಬಂಡುಕೋರರೊಂದಿಗೆ ಯೆಮೆನ್‌ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ, ಹೌತಿಗಳು ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ ವಿಶೇಷವಾಗಿ ಏಡನ್ ಕೊಲ್ಲಿ ಬಳಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೌತಿ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ ಮತ್ತು ಬ್ರಿಟನ್ ಒಟ್ಟಾಗಿ ಯೆಮೆನ್‌ನಲ್ಲಿರುವ ಹೌದಿ ನೆಲೆಗಳ ಮೇಲೆ ಇದುವರೆಗೆ ನಾಲ್ಕು ಬಾರಿ ವೈಮಾನಿಕ ದಾಳಿ ನಡೆಸಿವೆ.












Click it and Unblock the Notifications