Get Updates
Get notified of breaking news, exclusive insights, and must-see stories!

YS Sharmila Manhandles: ಪೊಲೀಸರ ಕೆನ್ನೆಗೆ ಹೊಡೆದ ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್‌ ಶರ್ಮಿಳಾ

ಹೈದರಾಬಾದ್‌, ಏಪ್ರಿಲ್‌ 24: ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಯ ಕೆನ್ನೆಗೆ ಹೊಡೆದ ವಿಡಿಯೋ ವೈರಲ್ ಆಗಿದ್ದು ನಂತರ ಅವರನ್ನು ಬಂಧಿಸಲಾಗಿದೆ.

ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪ್ರಶ್ನೆಗಳು ಸೋರಿಕೆಯಾಗಿರುವ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದರು. ವೀಡಿಯೊದಲ್ಲಿ ಶರ್ಮಿಳಾ ಅವರು ಕಾರನ್ನು ಹತ್ತಲು ಸಮೀಪಿಸುತ್ತಿದ್ದಂತೆ ಅವರನ್ನು ತಡೆಯಲು ಪೊಲೀಸ್ ಸಿಬ್ಬಂದಿ ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ. ವಾಹನವನ್ನು ತಡೆದು ನಿಲ್ಲಿಸಿದ ನಂತರ ಶರ್ಮಿಳಾ ಅವರು ಒಬ್ಬ ಪೋಲೀಸ್‌ನ ಬಳಿಗೆ ಹೋಗುತ್ತಿರುವುದಕ್ಕೆ ಪೊಲೀಸ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದರು.

YSR Telangana party leader YS Sharmila slapped the police on the cheek

ಅಲ್ಲದೆ ಅವರನ್ನು ತಡಯಲು ಬರುತ್ತಿದ್ದ ಕೆಲವು ಪೊಲೀಸರಿಗೂ ಹಲ್ಲೆಗೆ ಮುಂದಾಗುವುದು ನೋಡಬಹುದು. ಬಳಿಕ ಪೊಲೀಸ್‌ ಅಧಿಕಾರಿ ಮತ್ತು ಶರ್ಮಿಳಾ ನಡುವೆ ವಾಗ್ವಾದವು ಪ್ರಾರಂಭವಾದಾಗ ಇತರ ಪೊಲೀಸ್ ಸಿಬ್ಬಂದಿ ಅವರನ್ನು ಕರೆದೊಯ್ಯಲು ಪ್ರಯತ್ನಿಸಿದರು. ಮತ್ತೊಂದು ವೀಡಿಯೊದಲ್ಲಿ ಶ್ರೀಮತಿ ಶರ್ಮಿಳಾ ಪೊಲೀಸ್ ಮಹಿಳೆಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದ್ದು, ಪೊಲೀಸರು ಆಕೆಯ ಕೈಗಳನ್ನು ಹಿಡಿದು ತಡೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿರುವ ಆರೋಪದ ಮೇಲೆ ತೆಲಂಗಾಣ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದೆ. ಈ ಆರೋಪಗಳು ಮುನ್ನೆಲೆಗೆ ಬಂದಾಗಿನಿಂದ ಕನಿಷ್ಠ 11 ಜನರನ್ನು ಬಂಧಿಸಲಾಗಿದೆ ಮತ್ತು ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.

ಸೋರಿಕೆ ಆರೋಪದ ಬಗ್ಗೆ ವಿರೋಧ ಪಕ್ಷಗಳು ಕೆ ಚಂದ್ರಶೇಖರ ರಾವ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ತೆಲಂಗಾಣದಲ್ಲಿ ಸ್ವತಂತ್ರ ರಾಜಕೀಯ ಗುರುತನ್ನು ರೂಪಿಸಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಎತ್ತುತ್ತಿದ್ದಾರೆ. ಕಳೆದ ತಿಂಗಳು, ಈ ವಿಷಯದ ಬಗ್ಗೆ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯಿಂದ ಆಕೆಯನ್ನು ಬಂಧಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+