ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ತೆಗೆದುಕೊಳ್ಳುತ್ತಿರುವ ಔಷಧಿ ಬಗ್ಗೆ ಅನುಮಾನವೆ? ಟೆನ್ಷನ್ ಬಿಡಿ..ಶೀಘ್ರದಲ್ಲೇ ಪರಿಹಾರ

|
Google Oneindia Kannada News

ನವದೆಹಲಿ, ಅ.03: ನೀವು ತೆಗೆದುಕೊಳ್ಳುತ್ತಿರುವ ಔಷಧಿ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬ ಅನುಮಾನ ಮೂಡಿದೇಯೇ?, ತೆಗೆದುಕೊಳ್ಳುತ್ತಿರುವುದು ಅಸಲಿಯೋ, ನಕಲಿ ಔಷಧವೋ ಎಂಬುದನ್ನು ಗುರುತಿಸುವುದು ಹೇಗೆ ಎಂಬ ಚಿಂತೆಯಿದ್ದರೇ ಅದಕ್ಕೆ ಫುಲ್ ಸ್ಟಾಪ್ ಇಟ್ಟುಬಿಡಿ.

ಈ ಅನುಮಾನಗಳನ್ನು ಪರಿಹರಿಸಲು ಮತ್ತು ನಕಲಿ ಔಷಧಿಗಳ ಅಪಾಯವನ್ನು ಕಡಿಮೆ ಮಾಡಲು, ಹೆಚ್ಚು ಮಾರಾಟವಾಗುವ ಔಷಧಿಗಳಿಗಾಗಿ 'ಟ್ರ್ಯಾಕ್ ಮತ್ತು ಟ್ರೇಸ್' ಕಾರ್ಯವಿಧಾನವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಚರ್ಮ ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರಚರ್ಮ ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ

ಮೊದಲ ಹಂತದಲ್ಲಿ, 300 ಉನ್ನತ ಔಷಧ ತಯಾರಕರು ತಮ್ಮ 'ಪ್ರಾಥಮಿಕ' ಪ್ಯಾಕೇಜಿಂಗ್ ಲೇಬಲ್‌ಗಳಲ್ಲಿ ಬಾರ್‌ಕೋಡ್‌ಗಳು ಅಥವಾ ತ್ವರಿತ ಪ್ರತಿಕ್ರಿಯೆ (QR) ಕೋಡ್‌ಗಳನ್ನು ಮುದ್ರಿಸುತ್ತವೆ ಅಥವಾ ಅಂಟಿಸುತ್ತವೆ. ಪ್ರಾಥಮಿಕವು ಮಾರಾಟ ಮಾಡಬಹುದಾದ ವಸ್ತುಗಳನ್ನು ಒಳಗೊಂಡಿರುವ ಬಾಟಲಿ, ಕ್ಯಾನ್, ಜಾರ್ ಅಥವಾ ಟ್ಯೂಬ್‌ನಂತಹ ಮೊದಲ ಹಂತದ ಉತ್ಪನ್ನ ಪ್ಯಾಕೇಜಿಂಗ್ ಆಗಿದೆ.

You will soon be able to check fake Medicines

ಪ್ರತಿ ಸ್ಟ್ರಿಪ್‌ಗೆ 100 ರೂ.ಗಿಂತ ಹೆಚ್ಚಿನ MRP ಹೊಂದಿರುವ ವ್ಯಾಪಕವಾಗಿ ಮಾರಾಟವಾಗುವ ಆಂಟಿ ಬಯೋಟಿಕ್ಸ್, ಹೃದಯ ಸಂಬಂಧಿ ಮಾತ್ರೆಗಳು, ನೋವು ನಿವಾರಕ ಮಾತ್ರೆಗಳು ಮತ್ತು ಆಂಟಿ ಅಲರ್ಜಿ ಮಾತ್ರೆಗಳನ್ನು ಇದಕ್ಕೆ ಸೇರಿಸುವ ನಿರೀಕ್ಷೆಯಿದೆ.

1. ಈ ಕ್ಯೂಆರ್ ಕೋಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

2. QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೇ, ಇದು ಗ್ರಾಹಕರನ್ನು ಸರ್ಕಾರಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

3. ಇದಲ್ಲದೆ, ಈ ಕೋಡ್‌ಗಳು ಔಷಧದ ಬಗ್ಗೆ ಮಾಹಿತಿಯನ್ನು ದೃಢೀಕರಿಸುತ್ತವೆ. ಗುರುತಿನ ಕೋಡ್, ಔಷಧದ ಸರಿಯಾದ ಮತ್ತು ಸಾಮಾನ್ಯ ಹೆಸರು, ಬ್ರ್ಯಾಂಡ್ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ಉತ್ಪಾದನೆಯ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಉತ್ಪಾದನಾ ಪರವಾನಗಿ ಸಂಖ್ಯೆಯನ್ನು ತಿಳಿಸುತ್ತದೆ.

4.ಗ್ರಾಹಕರು ಸರ್ಕಾರಿ ಪೋರ್ಟಲ್‌ನಲ್ಲಿ ಐಡಿ ಕೋಡ್ ಅನ್ನು ಫೀಡ್ ಮಾಡಲು ಮತ್ತು ಮೊಬೈಲ್ ಫೋನ್ ಮೂಲಕ ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

5. ಮೊದಲ ಹಂತವು ಪ್ರಾಥಮಿಕ ಪ್ಯಾಕೇಜಿಂಗ್‌ನಲ್ಲಿ ಮುದ್ರಿತ ಬಾರ್‌ಕೋಡ್‌ಗಳೊಂದಿಗೆ ಸರಿಸುಮಾರು 300 ಹೆಚ್ಚು ಮಾರಾಟವಾಗುವ ಔಷಧಿಗಳನ್ನು ಒಳಗೊಂಡಿರುತ್ತದೆ.

You will soon be able to check fake Medicines

6. ಈ ಕಾರ್ಯವಿಧಾನ ಅಳವಡಿಸಲು ಇನ್ನೂ ಕೆಲವು ವಾರಗಳಿವೆ. ಆದರೆ, ವರದಿಯ ಪ್ರಕಾರ, ಈ ವ್ಯವಸ್ಥೆಯು ವೆಚ್ಚದಲ್ಲಿ ಶೇಕಡಾ 3-4 ರಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿಅಂಶಗಳ ಪ್ರಕಾರ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸುಮಾರು 10 ಪ್ರತಿಶತದಷ್ಟು ವೈದ್ಯಕೀಯ ಉತ್ಪನ್ನಗಳು ಕೆಳದರ್ಜೆಯ ಅಥವಾ ನಕಲಿಯಾಗಿವೆ. ಆದರೂ ಇಂತಹ ಪ್ರಕರಣಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ.

ಈ ವಿಷಯವನ್ನು ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

"ಔಷಧವನ್ನು ಒಳಗೊಂಡಿರುವ ಬಾಟಲಿಗಳು, ಕ್ಯಾನ್, ಜಾರ್ ಅಥವಾ ಟ್ಯೂಬ್‌ನಂತಹ ಮೊದಲ ಹಂತದ ಉತ್ಪನ್ನ ಪ್ಯಾಕಿಂಗ್‌ನಲ್ಲಿ ಮುದ್ರಿಸಲಾಗುವ (QR) ಕೋಡ್‌ಗಳನ್ನು ಸ್ಕ್ಯಾನಿಂಗ್ ಮಾಡುವ ಮೂಲಕ ನೀವು ಬಳಸುವ ಮಾತ್ರೆ ಸುರಕ್ಷಿತವಾಗಿದೆಯೇ ಮತ್ತು ನಕಲಿ ಅಲ್ಲವೇ ಎಂಬುದನ್ನು ನೀವು ಶೀಘ್ರದಲ್ಲೇ ಪರಿಶೀಲಿಸಲು ಸಾಧ್ಯವಾಗುತ್ತದೆ" ಎಂದಿದೆ.

English summary
You will soon be able to check Counterfeit Medicines with the help of QR Codes. government plans to launch a track and trace mechanism. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X