ಯೋಗಿ ಜಿಂದಾಬಾದ್ ಎಂದವನ ಹತ್ಯೆ ಮಾಡಿದ ಎಸ್ಪಿ ನಾಯಕ

ಯೋಗಿ ಜಿಂದಾಬಾದ್ ಎಂದ ಯುವಕನನ್ನು ಸಮಾಜವಾದಿ ಪಕ್ಷದ ಮುಖಂಡನೊಬ್ಬ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಲಕ್ನೋ, ಮಾರ್ಚ್ 28: 'ಯೋಗಿ ಜಿಂದಾಬಾದ್' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೈಕಾರ ಹಾಕಿದ್ದಕ್ಕಾಗಿ ಯುವಕನೊಬ್ಬನ್ನು ಸಮಾಜವಾದಿ ಪಕ್ಷದ ನಾಯಕ ಹತ್ಯೆ ಮಾಡಿದ ಘಟನೆ ಆಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಧಾನ್ ಎಂಬ ಹಳ್ಳಿಯಲ್ಲಿ ನಡೆದಿದೆ.

ಬಿಜೆಪಿ ಬೆಂಬಲಿಗನಾಗಿದ್ದ 17 ವರ್ಷದ ವಿನಿಕೇತ್ ಎಂಬ ಯುವಕ ಮಾರ್ಚ್ 26ರ, ಭಾನುವಾರ ರಾತ್ರಿ ಯೋಗಿ ಜಿಂದಾಬಾದ್ ಎಂದು ಆದಿತ್ಯನಾಥ್ ಗೆ ಜೈಕಾರ ಹಾಕಿದ್ದಾನೆ.[ಸಂಪುಟ ಸಭೆ ಇಲ್ಲದಿದ್ರೂ ಯೋಗಿ ಆದೇಶಗಳ ರವಾನೆ ಸರಾಗ !]

Yogi Zindabad slogan killed him!

ಅದೇ ಸಮಯದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ, ನೆರೆಮನೆಯ ಎಸ್ಪಿ ನಾಯಕ ಶಿಶುಪಾಲ್ ಸಿಂಗ್ ಗೆ ವಿನಿಕೇತ್ ಧ್ವನಿ ಕೇಳಿದೆ. ತನ್ನ ರಾಜಕೀಯ ದ್ವೇಷಿಯ ಹೆಸರಿಗೆ ಜೈಕಾರ ಹಾಕುತ್ತಿದ್ದ ಹುಡುನ ಮೇಲೆ ಹುಟ್ಟಿದ ಅಸಹನೆಯಿಂದಾಗಿ ಶಿಶುಪಾಲ್ ಸಿಂಗ್, ತಕ್ಷಣವೇ ಆತನನ್ನು ಶೂಟ್ ಮಾಡಿ ಸಾಯಿಸಿದ್ದಾನೆ.[ಯೋಗಿ ವಿರುದ್ಧ ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟಗಾರರ ಮುಷ್ಕರ]

ಆತನನ್ನು ಸಾಯಿಸಿದ ನಂತರ ಶಿಶುಪಾಲ್ ಸಿಂಗ್ ಬೆಂಬಲಿಗರು ಕೆಲವರು ವಿನಿಕೇತ್ ಮನೆಯ ಮೇಲೆ ಕಲ್ಲುತೂರಾಟವನ್ನೂ ನಡೆಸಿದ್ದು ವರದಿಯಾಗಿದೆ.[ಆದಿತ್ಯನಾಥ್ 'ಯೋಗಿಯೋ, ಭೋಗಿಯೋ'ಎಂದಿದ್ದ ಯುವಕನ ಬಂಧನ]

ಒಟ್ಟಿನಲ್ಲಿ ರಾಜಕೀಯ ವೈಮನಸ್ಯದಿಂದಾಗಿ ಮುಗ್ಧ ಯುವಕ ಬಲಿಯಾಗಿದ್ದು ಶೋಚನೀಯ ಸಂಗತಿ. ಉತ್ತರ ಪ್ರದೇಶಕ್ಕಂಟಿರುವ ಗೂಂಡಾ ರಾಜ್ಯವೆಂಬ ಹಣೆಪಟ್ಟಿಯನ್ನು ಕಳಚುವ ಆದ್ಯ ಉದ್ದೇಶ ಹೊಂದಿರುವ ನೂತನ ಮುಖ್ಯಮಂತ್ರಿ ಆದಿತ್ಯನಾಥ್ ಎದುರು ಸವಾಲಿನ ಮಹಾಪೂರವೇ ಇರುವುದು ಸುಳ್ಳಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+