ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ; ಯೋಗಿ ಆದಿತ್ಯನಾಥ ಭರವಸೆ
ಲಖನೌ, ಜೂನ್ 7: ಅಯೋಧ್ಯಾದಲ್ಲಿ ರಾಮಮಂದಿರವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭರವಸೆ ನೀಡಿದ್ದಾರೆ ಎಂದು ಅರ್ಚಕರ ತಂಡವೊಂದು ತಿಳಿಸಿದೆ.
ಗುರುವಾರ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ ಅರ್ಚಕರ ಗುಂಪು, ರಾಮಮಂದಿರದ ಭವಿಷ್ಯದ ಕುರಿತು ಸಮಾಲೋಚನೆ ನಡೆಸಿತು.
ರಾಮಮಂದಿರ ನಿರ್ಮಾಣದ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮಹಾಂತ ಸುರೇಶ್ ದಾಸ್ ತಿಳಿಸಿದರು.

ಸಭೆಗೂ ಮುನ್ನ ಮಾತನಾಡಿದ್ದ ಸುರೇಶ್ ದಾಸ್ ಅವರು, ಒಂದು ವೇಳೆ ಸರ್ಕಾರವು ರಾಮಮಂದಿರ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆಯೇ ಇದ್ದಲ್ಲಿ, ಅದರ ಪರಿಣಾಮವನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು, ಸಂಘಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿವೆ.












Click it and Unblock the Notifications