ಒಲಿಂಪಿಕ್ಸ್ ನಲ್ಲಿ ‘ಯೋಗ’ಪರಿಗಣಿಸಿ: ರಾಮ್‌ ದೇವ್‌

Posted By:
Subscribe to Oneindia Kannada

ನವದೆಹಲಿ, ಜೂನ್ 20 : ಯೋಗವನ್ನು ಕ್ರೀಡಾ ವಿಭಾಗದಲ್ಲಿ ಪರಿಗಣಿಸಿ ಒಲಿಂಪಿಕ್ಸ್ ನ ಸ್ಪರ್ಧೆಗಳಲ್ಲಿ ಸೇರಿಸಬೇಕು ಎಂದು ಯೋಗ ಗುರು ಬಾಬಾ ರಾಮ್‌ ದೇವ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಜೂನ್‌ 21 (ಬುಧವಾರ) ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ನಡೆದಿದ್ದು, ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಕ್ರೀಡೆಯಾಗಿ 'ಯೋಗ'ಪರಿಗಣಿಸುವಂತೆ ಯೋಗ ಗುರು ಬಾಬಾ ರಾಮ್‌ ದೇವ್‌ ಒತ್ತಾಯಿಸಿದರು.

ಗಾಂಧಿ ಸ್ಮಾರಕವನ್ನು ಗೋದಾಮು ಮಾಡಿಕೊಂಡಿತೇ ಪತಂಜಲಿ ಕಂಪನಿ?

Yoga should be included as a sport in Olympics: Ramdev

'ಯೋಗ ಕ್ರೀಡೆಯಲ್ಲ ಎನ್ನುವವರಿಗೆ ತಿಳಿವಳಿಕೆ ಕೊರತೆಯಿದೆ. ಇದನ್ನು ಕ್ರೀಡಾ ವಿಭಾಗದ ಅಡಿಯಲ್ಲಿ ಪರಿಗಣಿಸಿ ಒಲಿಂಪಿಕ್ಸ್ ನ ಸ್ಪರ್ಧೆಗಳಲ್ಲಿ ಸೇರಿಸಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಗದಿಂದ ಆಗುವ ಅನುಕೂಲಗಳ ಬಗ್ಗೆಯೂ ಪ್ರಸ್ತಾಪಿಸಿದ ಬಾಬಾ ರಾಮ್‌ ದೇವ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಯೋಗಾಭ್ಯಾಸ ನಡೆಸಿ 20 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ahead of International Yoga Day on 21 June, Yoga guru Baba Ramdev on Tuesday said that Yoga should be included in Olympics as a sport.
Please Wait while comments are loading...