Yes Bank Shares News: ಲಾಭದಲ್ಲಿದ್ದ ಯೆಸ್ ಬ್ಯಾಂಕ್ ಷೇರುಗಳ ಬೆಲೆ 7% ಕುಸಿತ, ಕಾರಣವೇನು?
Yes Bank Share: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯೆಸ್ ಬ್ಯಾಂಕ್‌ನ ಶೇಕಡಾ 20 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ವರದಿ ಬಿತ್ತರವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ಕುಸಿದಿವೆ. ಹೌದು, ಇಂದು ಮಂಗಳವಾರ ಜೂನ್ 3ರಂದು ಯೆಸ್ ಬ್ಯಾಂಕ್ ಷೇರು ಬೆಲೆ ಶೇಕಡಾ 07ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುವುದು ಗೊತ್ತಾಗಿದೆ.
ಯೆಸ್ ಬ್ಯಾಂಕ್ ಷೇರು ಕಳೆದ ಮೂರು ದಿನಗಳಿಂದ ಸ್ವಲ್ಪ ಸ್ವಲ್ಪವೇ ಪಾಸಿಟಿವ್ ಹಾದಿಯಲ್ಲಿತ್ತು. ಆ ಗಳಿಕೆಯ ಮೇಲೆ ಈ ಒಂದು ದಿನ ಕುಸಿತ ಪರಿಣಾಮ ಬೀರಿದ್ದು, ಷೇರು ನಷ್ಟದತ್ತ ನೆಗಟಿವ್ ಟ್ರೆಂಡ್‌ಗೆ ಮುಖ ಮಾಡಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ನಲ್ಲಿ ಯೆಸ್ ಬ್ಯಾಂಕ್ ಷೇರುಗಳು ಶೇಕಡಾ 7.39 ರಷ್ಟು ಕುಸಿದು ರೂಪಾಯಿ 21.55 ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್ (ಎಸ್‌ಎಂಬಿಸಿ) ನಿಯಂತ್ರಣ ಯೆಸ್ ಬ್ಯಾಂಕಿನಲ್ಲಿನ ತನ್ನ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗೆ ಆರ್‌ಬಿಐ ಅನುಮೋದನೆ ಕೇಳಿದೆ. ಈ ಕುರಿತು ವರದಿಗಳು ಮುನ್ನೆಲೆಗೆ ಬರುತ್ತಿದ್ದಂತೆ ಯೆಸ್ ಬ್ಯಾಂಕ್ ಷೇರುಗಳ ದರ ನೆಗಟಿವ್‌ನತ್ತ ಮುಖ ಮಾಡಿವೆ. ಶೇಕಡಾ 3ರಷ್ಟು ಈಕ್ವಿಟಿ ಹೊಂದಿರುವ ಯೆಸ್ ಬ್ಯಾಂಕ್ ಲಾಭಾಂಶ ನಂಬಿಕೊಂಡು ಬ್ಲಾಕ್ ಡೀಲ್‌ಗಳಲ್ಲಿ ಹೂಡಿದ್ದ ಪಿಇ ಹೂಡಿಕೆದಾರರು ಯೆಸ್ ಬ್ಯಾಂಕ್ ಷೇರುಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆ.
ಖಾಸಗಿ ಸಾಲದಾತರ ನಿರ್ದೇಶಕರ ಮಂಡಳಿಯು ಇದೇ ವಿಚಾರವಾಗಿ ಸಭೆ ನಡೆಸಿದೆ. ಅಗತ್ಯತೆ ನೋಡಿಕೊಂಡು ಈಕ್ವಿಟಿ ಷೇರುಗಳು, ಸಾಲ ಭದ್ರತೆಗಳನ್ನು ನೀಡಿ ನಿಧಿ ಸಂಗ್ರಹಿಸುವ ಪ್ರಸ್ತಾಪಗಳನ್ನು ಮುಂದಿಟ್ಟಿದೆ ಎಂದು ತಿಳಿದು ಬಂದಿದೆ. ಯೆಸ್ ಬ್ಯಾಂಕ್ ನಿರ್ದೇಶಕರ ಮಂಡಳಿಯು, ಈಕ್ವಿಟಿ ಷೇರುಗಳು, ಸಾಲ ಭದ್ರತೆಗಳು ಅಥವಾ ಯಾವುದೇ ಇತರ ಅರ್ಹ ಭದ್ರತೆ ವಿಧಾನಗಳ ಮೂಲಕ ನಿಧಿಯನ್ನು ಸಂಗ್ರಹಿಸುವುದು ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಘೋಷಿಸಿದೆ.
ಯೆಸ್ ಬ್ಯಾಂಕ್ ಷೇರು ಬೆಲೆಗಳ ಕುರಿತು..
ಯೆಸ್ ಬ್ಯಾಂಕ್ ಷೇರು ಬೆಲೆ ಕಳೆದೊಂದು ತಿಂಗಳಲ್ಲಿ ಸ್ಥಿರವಾದ (23%) ಏರಿಕೆ ಕಂಡಿತ್ತು. ಹೀಗೆ ನಿರಂತರ ಏರಿಕೆಯಿಂದ ವರ್ಷದಿಂದ ಇಲ್ಲಿಯವರೆಗೆ ಒಟ್ಟು ಷೇರು ಬೆಲೆ ಶೇಕಡಾ 11ರಷ್ಟು ಹೆಚ್ಚಾಗಿದೆ. ಯೆಸ್ ಬ್ಯಾಂಕ್ ಷೇರುಗಳು ಶೇಕಡಾ 4ರಷ್ಟು ಏರಿಕೆ ಆಗಿದೆ. ಬ್ಯಾಂಕಿಂಗ್ ಷೇರುಗಳು ಒಂದೇ ವರ್ಷದಲ್ಲಿ ಬರೋಬ್ಬರಿ ಶೇಕಡಾ 7.5 ರಷ್ಟು ಕುಸಿದಿವೆ. ಈ ಮಧ್ಯೆ ಅಧಿಕ ಲಾಭ ಅಂದರೆ ಎರಡು ವರ್ಷಗಳಲ್ಲಿ ಶೇಕಡಾ 32ರಷ್ಟು ಯೆಸ್ ಬ್ಯಾಂಕ್ ಷೇರುಗಳು ಲಾಭ ನೀಡಿದ್ದವು. ಇದೀಗ ಕೆಲವು ನಿರ್ಧಾರ, ಬೆಳವಣಿಗೆಗಳ ಕಾರಣದಿಂದ ಅ ಷೇರುಗಳ ಬೆಲೆ ಕುಸಿತ ಕಂಡಿದೆ.












Click it and Unblock the Notifications