Year Ender 2024: ಈ ವರ್ಷ ಅತೀ ಹೆಚ್ಚು ಓಯೋ ರೂಂ ಬುಕ್ಕಿಂಗ್ ಆಗಿದ್ದು ಹೈದರಾಬಾದ್‌ನಲ್ಲಿ: ಬೆಂಗಳೂರಿಗೆ ಎಷ್ಟನೇ ಸ್ಥಾನ?
Year Ender 2024: 2025ರ ಹೊಸ ವರ್ಷಕ್ಕೆ ಇನ್ನೂ ಕೆಲವೇ ದಿನಗಳ ಮಾತ್ರ ಬಾಕಿಯಿವೆ. ಆದರೂ 2024ರಲ್ಲಿ ಏನೆಲ್ಲ ಪ್ರಮುಖ ಘಟನೆಗಳು ನಡೆದಿವೆ ಎನ್ನುವುದನ್ನು ಮೆಲುಕು ಹಾಕಲೇಬೇಕಾಗುತ್ತದೆ. ಹಾಗಾದರೆ, ಈ ವರ್ಷ ಎಲ್ಲಿ ಅತೀ ಹೆಚ್ಚು ಓಯೋ ರೂಂ ಬುಕ್ಕಿಂಗ್ ಆಗಿವೆ? ಕರ್ನಾಟಕದ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ವರ್ಷ ಭಾರತದಲ್ಲಿ ಪೂರಿ, ವಾರಣಾಸಿ ಹಾಗೂ ಹರಿದ್ವಾರಗಳು ತೀರ್ಥಯಾತ್ರಾ ತಾಣಗಳಾಗಿ ಗುರುತಿಸಿಕೊಂಡಿದ್ದು, ಹೆಚ್ಚಿನ ಪ್ರಯಾಣಿಕರು ಈ ತಾಣಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ದೇಶದಲ್ಲಿ ಅತೀ ಹೆಚ್ಚು ಓಯೋ ರೂಂ ಬುಕ್ಕಿಂಗ್‌ನಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದೆ ಎಂದು 2024ರ ಓಯೋ ಟ್ರಾವೆಲೋಪಿಡಿಯಾದ ವಾರ್ಷಿಕ ವರದಿ ತಿಳಿಸಿದೆ. 2024ರ ವರದಿಯನ್ನು ಭಾರತೀಯ ಮೂಲದ ಪ್ರಸಿದ್ಧ ಹಾಸ್ಪಿಟಾಲಿಟಿ ಚೈನ್ ಓಯೋ ರೂಮ್ಸ್ ಮಂಗಳವಾರ ಪ್ರಕಟಿಸಿದೆ.

ಭಾರತದಲ್ಲಿ ಧಾರ್ಮಿಕ ಟೂರಿಸಂ ಪ್ರಧಾನ ಪಡೆದುಕೊಂಡಿರುವ ವಿಭಾಗವಾಗಿದೆ. ತೀರ್ಥಕ್ಷೇತ್ರದ ಪ್ರಯಾಣದಲ್ಲಿ ಪೂರಿ, ವಾರಣಾಸಿ ಹಾಗೂ ಹರಿದ್ವಾರದ ಪ್ರಯಾಣ ಅಗ್ರ ಸ್ಥಾನದಲ್ಲಿದೆ. ಜೊತೆಗೆ ದಿಯೋಘರ್, ಪಳನಿ ಹಾಗೂ ಗೋವರ್ಧನ ಕ್ಷೇತ್ರದ ಪ್ರವಾಸದ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹೈದರಾಬಾದ್ 2024ರಲ್ಲಿ ಇತರ ಪ್ರಮುಖ ನಗರಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಓಯೋ ರೂಂ ಬುಕ್ ಮಾಡಿದ ನಗರವಾಗಿ ಹೊರಹೊಮ್ಮಿದೆ. ಇದು ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಖ್ಯಾತಿಗೆ ಕಾರಣವಾಗಿದೆ. ಹೈದರಾಬಾದ್ ನಂತರ ಓಯೋ ರೂಂ ಬುಕಿಂಗ್‌ನಲ್ಲಿ ಬೆಂಗಳೂರು, ನವದೆಹಲಿ ಮತ್ತು ಕೋಲ್ಕತ್ತಾ ಅಗ್ರ ಸ್ಥಾನದಲ್ಲಿವೆ. ಈ ಪೈಕಿ ಬೆಂಗಳೂರು ಮತ್ತು ನವದೆಹಲಿ ಕೂಡ ವ್ಯಾಪಾರಕ್ಕೆ ಉತ್ತಮ ಆಯ್ಕೆಯಾಗಿವೆ.
ಉತ್ತರ ಪ್ರದೇಶವು ಪ್ರಯಾಣಕ್ಕಾಗಿ ಅತ್ಯಂತ ಜನಪ್ರಿಯ ರಾಜ್ಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬುಕಿಂಗ್ ಆಗಿವೆ. ಹೆಚ್ಚಿನ ಪ್ರಮಾಣದ ಬುಕ್ಕಿಂಗ್ ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದಿಂದ ಆಗಿದ್ದು, ಟ್ರಾವೆಲ್ ಕಾಂಟ್ರಿಬ್ಯೂಟರ್‌ನಲ್ಲಿ ಅಗ್ರಸ್ಥಾನ ಪಡೆದಿವೆ. ಸಣ್ಣ ಪಟ್ಟಣಗಳಾದ ಪಾಟ್ನಾ, ರಾಜಮುಂಡ್ರಿ ಹಾಗೂ ಹುಬ್ಬಳ್ಳಿ ಕೂಡ ದೊಡ್ಡ ಮಟ್ಟದ ಪ್ರಗತಿ ಕಂಡಿದ್ದು, ವರ್ಷದಿಂದ ವರ್ಷಕ್ಕೆ ಇಲ್ಲಿನ ಬುಕ್ಕಿಂಗ್‌ಗಳ ಸಂಖ್ಯೆ ಶೇಕಡ 48ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.
ಜೈಪುರವು ಪ್ರಮುಖ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಲೇ ಇರುತ್ತದೆ. ನಂತರದಲ್ಲಿ ಗೋವಾ, ಪಾಂಡಿಚೇರಿ ಮತ್ತು ಮೈಸೂರು. ಮತ್ತೊಂದೆಡೆ, ಪ್ರಯಾಣಿಕರು ವಿರಾಮಕ್ಕಾಗಿ ಹತ್ತಿರದ ಸ್ಥಳಗಳಿಗೆ ಆದ್ಯತೆ ನೀಡಿದ್ದರಿಂದ ಮುಂಬೈ ಓಯೋ ರೂಂ ಬುಕ್ಕಿಂಗ್‌ಗಳಲ್ಲಿ ಈ ಬಾರಿ ಕುಸಿತ ಕಂಡಿದೆ ಎಂದು ಓಯೋ ಹೇಳಿದೆ.
2024ರಲ್ಲಿ ಯುನೈಟೆಡ್ ಕಿಂಗ್‌ಡಮ್ ಬುಕಿಂಗ್‌ನಲ್ಲಿ ಶೇಕಡಾ 18ರಷ್ಟು ಏರಿಕೆ ಕಂಡಿದೆ. ಲಂಡನ್, ಪ್ಲೈಮೌತ್ ಮತ್ತು ಶೆಫೀಲ್ಡ್ ಅತಿ ಹೆಚ್ಚು ಬುಕ್ ಮಾಡಿದ ನಗರಗಳಾಗಿವೆ. ಇಂಡೋನೇಷ್ಯಾ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡ 52ರಷ್ಟು ಬುಕಿಂಗ್‌ನಲ್ಲಿ ಏರಿಕೆ ಕಂಡಿಯಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications