Year Ender: 2024ರ ಬಗ್ಗೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ ನಿಜವಾಗಿದ್ದೆಷ್ಟು?

ಬಲ್ಗೇರಿಯಾದ ಬಾಬಾ ವಂಗಾ ಜಗತ್ತಿನ ಪ್ರಮುಖ ಘಟನೆಗಳ ಬಗ್ಗೆ ನುಡಿದಿರುವ ಭವಿಷ್ಯವಾಣಿಯನ್ನು ನಂಬುವ ಕೋಟ್ಯಂತರ ಜನ ಜಗತ್ತಿನಲ್ಲಿದ್ದಾರೆ. 1996ರಲ್ಲಿ ಬಾಬಾ ವಂಗಾ ಮೃತಪಟ್ಟಿದ್ದರೂ, ಅವರು ಜಗತ್ತಿನ ಬಗ್ಗೆ ಹೇಳಿರುವ ಭವಿಷ್ಯಗಳು ಇಂದಿಗೂ ಚಾಲ್ತಿಯಲ್ಲಿವೆ. 2024 ರ ವರ್ಷದಲ್ಲಿ ಜಗತ್ತಿನಲ್ಲಿ ಸಂಭವಿಸಬಹುದಾದ ಪ್ರಮುಖ ಘಟನೆಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದರು.

2024ರಲ್ಲಿ ಜಗತ್ತಿನಲ್ಲಿ ನಡೆದಿರುವ ಹಲವು ದುರಂತಗಳ ಬಗ್ಗೆ ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದಿದ್ದರು. ಅವರು ಹೇಳಿರುವ ಹಲವು ಸಂಗತಿಗಳು ನಿಜವಾಗಿರುವುದೇ ಕೋಟ್ಯಂತರ ಮಂದಿ ಅವರನ್ನು ನಂಬಲು ಪ್ರಮುಖ ಕಾರಣವಾಗಿದೆ. ಇದೇ ಕಾರಣದಿಂದ ಅವರನ್ನು ನಾಸ್ಟ್ರಾಡಾಮಸ್‌ಗೆ ಹೋಲಿಸಲಾಗುತ್ತದೆ.

Year ender 2024 baba vanga predictions that came true

2ನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅವರ ಸಾಮರ್ಥ್ಯ ಜಗತ್ತಿನ ಗಮನ ಸೆಳೆಯಿತು. ವಿಶ್ವದಾದ್ಯಂತ ಅವರು ಜನಪ್ರಿಯವಾದರು. 9/11ರ ಭೀಕರ ಭಯೋತ್ಪಾದಕ ದಾಳಿ, 2001ರಲ್ಲಿ ನಡೆದ ಕುರ್ಸ್ಕ್ ಜಲಾಂತರ್ಗಾಮಿ ಮುಳುಗುವಿಕೆಯಂತಹ ದುರಂತಗಳ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದರು.

2024ರ ಬಗ್ಗೆ ಬಾಬಾ ವಂಗಾ ಹೇಳಿದ್ದೇನು?

2024ರಲ್ಲಿ ಅನೇಕ ಸಂಗತಿಗಳ ಬಗ್ಗೆ ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದಿದ್ದರು. ಆರ್ಥಿಕ ಹಿಂಜರಿತದಿಂದ, ವೈಜ್ಞಾನಿಕ ಅಭಿವೃದ್ಧಿವರೆಗೆ ಅನೇಕ ಭವಿಷ್ಯವಾಣಿ ನುಡಿದಿದ್ದು ಅದರಲ್ಲಿ ಎಷ್ಟು ನಿಜವಾಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಜಾಗತಿಕ ಬಿಕ್ಕಟ್ಟಿನ ಮುನ್ಸೂಚನೆ

2024ರಲ್ಲಿ ಜಾಗತಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಹಿಂಜರಿತ, ಸಾಲದ ಹೆಚ್ಚಳ ಸೇರಿದಂತೆ ಅನೇಕ ಘಟನೆಗಳು ಅವರ ಭವಿಷ್ಯವಾಣಿಯಂತೆ ನಡೆದಿವೆ. ಆರ್ಥಿಕ ಹಿಂಜರಿತದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಹಣದುಬ್ಬರ, ಉದ್ಯೋಗ ಕಡಿತದಂತಹ ವರದಿಗಳು ಸಾಮಾನ್ಯ ಎನ್ನುವಂತಾಗಿದೆ.

ಹವಾಮಾನ ಬಿಕ್ಕಟ್ಟು

ಜಗತ್ತಿನ ಹವಾಮಾನಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಕೂಡ ಅವರು ಮೊದಲೇ ಹೇಳಿದ್ದಾರೆ. ಮಾನವನ ಅತಿಯಾಸೆ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈಗಾಗಲೇ ಹವಾಮಾನ ವೈಪರೀತ್ಯಗಳು, ಅದರಿಂದ ಆಗುತ್ತಿರುವ ಅನಾಹುತಗಳಿಗೆ 2024 ಸಾಕ್ಷಿಯಾಗಿದೆ. 2024ರ ಅತ್ಯಂತ ಹೆಚ್ಚು ಬಿಸಿಲಿನ ತಾಪವನ್ನು ಕಂಡಿದೆ. ದುಬೈನಲ್ಲಿ ಅತಿವೃಷ್ಠಿ ಸೇರಿದಂತೆ ಅನೇಕ ಪ್ರಾಕೃತಿಕ ವೈಪರೀತ್ಯಗಳನ್ನು ನಾವು ನೋಡಿದ್ದೇವೆ.

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ

ಬಾಬಾ ವಂಗಾ ಜಗತ್ತಿನ ಬಗ್ಗೆ ಹೇಳಿರುವ ಭವಿಷ್ಯವಾಣಿಯಲ್ಲಿ ಇದು ಮುಖ್ಯವಾದುದು. ವೈದ್ಯಕೀಯ ಕ್ಷೇತ್ರದಲ್ಲಿ ಜಗತ್ತು ಭಾರಿ ಪ್ರಗತಿ ಸಾಧಿಸಲಿದೆ ಎಂದು ಹೇಳಿದ್ದರು. ಅವರ ಭವಿಷ್ಯವಾಣಿಯಂತೆ 2024ರಲ್ಲಿ ಅನೇಕ ಪ್ರಮುಖ ವೈದ್ಯಕೀಯ ಪ್ರಗತಿ ಸಾಧಿಸಲಾಗಿದೆ. ಮುಖ್ಯವಾಗಿ ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಂತ ಗಮನಾರ್ಹ ಸುಧಾರಣೆಯಾಗಿದೆ. ವರ್ಲ್ಡ್ ಎಕನಾಮಿಕ್ ಫೋರಮ್ ವರದಿಯ ಪ್ರಕಾರ "ಇಂಟರ್ಲೇಸ್ ಪ್ರಯೋಗದ ಫಲಿತಾಂಶಗಳು ಗರ್ಭಕಂಠದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಕಿಮೋಥೆರಪಿಯನ್ನು ಕಡಿಮೆ ಪ್ರಮಾಣದಲ್ಲಿ ನೀಡುವ ಮೂಲಕ ಸಾವಿನ ಅಪಾಯವನ್ನು 40 ಪ್ರತಿಶತ ಕಡಿಮೆ ಮಾಡಬಹುದು" ಎಂದು ತೋರಿಸಿದೆ.

2025 ಅಂತ್ಯದ ಆರಂಭ!

2025ರ ಬಗ್ಗೆ ಭವಿಷ್ಯ ನುಡಿದಿದ್ದು ಈ ವರ್ಷ ಪ್ರಪಂಚದ ಅಂತ್ಯ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. 5079ರ ವೇಳೆಗೆ ಜಗತ್ತು ಅಳಿಯುತ್ತದೆ ಎಂದು ಹೇಳಿದ್ದಾರೆ. ಯೂರೋಪ್‌ನಲ್ಲಿ ನಡೆಯುವ ಸಂಘರ್ಷಗಳು 2025ರ ವೇಳೆಗೆ ಜನಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+