video: ಡಿಜೆ ಶಬ್ದಕ್ಕೆ ಅಜ್ಜ ಡ್ಯಾನ್ಸ್, ಅಜ್ಜಿ ನೋಡಿ ಎಸ್ಕೇಪ್

ನವದೆಹಲಿ, ಡಿಸೆಂಬರ್ 26: ಮದುವೆ ಮನೆಯಲ್ಲಿ ನೃತ್ಯ ಮಾಡದೇ ಇರಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ನಡೆಯುವ ನೃತ್ಯದ ತಮಾಷೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಇಂದು ನೀವು ನೋಡುವ ವಿಡಿಯೋದಲ್ಲಿ ವಯಸ್ಸಾದ ಅಜ್ಜ ಡಿಜೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೊವನ್ನು ಹರಿಬಿಡಲಾಗಿದೆ. ಮದುವೆ ದಿಬ್ಬಣದೊಂದಿಗೆ ಬಂದವರ ಜೊತೆ ಮೋಜಿನ ಶೈಲಿಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ, ಅಜ್ಜನ ಸಂಗತಿ ಅಜ್ಜಿ ಬರುವ ದೃಶ್ಯ ನೋಡುಗರನ್ನು ಆಶ್ಚರ್ಯಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಅಜ್ಜಿಯ ಎಂಟ್ರಿಗೆ ಅಜ್ಜನ ಗ್ರೇಟ್ ಎಸ್ಕೇಪ್‌ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ವಿಡಿಯೋ ಮೆಚ್ಚಿಕೊಂಡು ಹೊಟ್ಟೆ ಹುಣ್ಣಾಗಿಸುವಷ್ಟ ನಕ್ಕಿದ್ದಾರೆ.

ಮೈ ಚಳಿ ಬಿಟ್ಟು ಕುಣಿದ ಅಜ್ಜ

ಮೈ ಚಳಿ ಬಿಟ್ಟು ಕುಣಿದ ಅಜ್ಜ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಈ ವಯಸ್ಸಾದ ವ್ಯಕ್ತಿ ಮತ್ತು ಗಮ್ಮತ್ತಿನಲ್ಲಿ ತನ್ನದೇ ಶೈಲಿಯಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ನಿಂತಿದ್ದವರಿಗೆ ದಾದಾ ತನ್ನ ನೃತ್ಯದ ಮೂಲಕ ಪೈಪೋಟಿ ನೀಡುತ್ತಿದ್ದಾರೆ. ನೃತ್ಯ ಮಾಡುವಾಗ ಅಜ್ಜನ ಹೆಂಡತಿ ಅಂದರೆ ಅಜ್ಜಿ ಕೂಡ ಪಕ್ಕದಲ್ಲಿ ನಿಂತಿದ್ದಾಳೆ ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ. DJ ನಲ್ಲಿ ಅಜ್ಜ ಈ ರೀತಿ ಡ್ಯಾನ್ಸ್ ಮಾಡುವುದನ್ನು ನೋಡಿ ಅಜ್ಜಿ ಕೋಪಗೊಳ್ಳುತ್ತಾಳೆ. ನಂತರ ಅಜ್ಜನನ್ನು ವೇದಿಯ ಮೇಲೆ ಪಾಠ ಕಲಿಸಲು ಅಜ್ಜಿ ನಿರ್ಧರಿಸುತ್ತಾಳೆ.

ವೇದಿಕೆಯ ಮೇಲೆ ನಿಂತಿದ್ದ ಅಜ್ಜಿ

ವೇದಿಕೆಯ ಮೇಲೆ ನಿಂತಿದ್ದ ಅಜ್ಜಿ

ಡಿಜೆಯಲ್ಲಿ ಅಜ್ಜ ಡ್ಯಾನ್ಸ್ ಮಾಡುವುದನ್ನು ನೋಡಿದ ಅಜ್ಜಿ ಕೋಲಿನಿಂದ ಓಡಿ ಬರುತ್ತಾಳೆ. ವಿಡಿಯೋದಲ್ಲಿ ದಾದಿ ಕೈಯಲ್ಲಿ ಕೋಲು ಕಾಣುತ್ತಿದೆ. ಮೈ ಚಳಿ ಬಿಟ್ಟು ಕುಣಿಯುತ್ತಿದ್ದ ಅಜ್ಜ ಅಜ್ಜಿ ಬರುತ್ತಿರುವುದನ್ನು ನೋಡಿ ಕುಣಿತವನ್ನು ಮರೆತು ಓಡಿಹೋಗುತ್ತಾನೆ.

ಅಜ್ಜಿ ಕಂಡು ಕಕ್ಕಾಬಿಕ್ಕಿಯಾಗಿ ಓಡಿ ಹೋದ ಅಜ್ಜ

ಅಜ್ಜಿ ಕಂಡು ಕಕ್ಕಾಬಿಕ್ಕಿಯಾಗಿ ಓಡಿ ಹೋದ ಅಜ್ಜ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ದಾದಾ ಪರಾರಿಯಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಹೊಗಳುತ್ತಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಿಂದ ಟ್ವಿಟರ್‌ವರೆಗೆ ಹಲವು ಪುಟಗಳಲ್ಲಿ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋಕ್ಕೆ ಲೈಕ್‌ಗಳ ಸುರಿಮಳೆಯಾಗುತ್ತಿದೆ.

ಮದುವೆ ಮನೆಯಲ್ಲಿ ಅಜ್ಜನ ಸಕತ್ ಡ್ಯಾನ್ಸ್

ವಯಸ್ಸಾದ ದಂಪತಿಗಳ ಈ ವಿಡಿಯೊದಲ್ಲಿ ಅಜ್ಜ ಅವರ ನೃತ್ಯವನ್ನು ಬಳಕೆದಾರರು ಇಷ್ಟಪಟ್ಟಿದ್ದಾರೆ. ಆದರೆ ಹೆಚ್ಚಿನ ಬಳಕೆದಾರರು ಅಜ್ಜಿಯ ಪ್ರವೇಶವನ್ನು ಅದ್ಭುತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಜ್ಜಿ ಪ್ರವೇಶದ ಬಗ್ಗೆ ಬಳಕೆದಾರರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಅಜ್ಜ ಓಡಿಹೋಗುವುದನ್ನು ನೋಡಿ ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ದಾರೆ.

ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದರು

ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದರು

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಅಜ್ಜನ ನೃತ್ಯಕ್ಕೆ ಮಾರು ಹೋಗಿದ್ದಾರೆ. ಜೊತೆಗೆ ಅಜ್ಜಿಯ ಎಂಟ್ರಿ ಕಂಡು ಅಜ್ಜನ ಎಸ್ಕೇಪ್‌ಗೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ "ವ್ಹಾ.. ಎಂಥ ಪಲಾಯನ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಅಜ್ಜಿಯ ಊಹಿಸದ ಎಂಟ್ರಿಗೆ ಅಜ್ಜನ ಮೀಟರ್ ಆಫ್" ಎಂದು ಬರೆದಿದ್ದಾರೆ. ಮತ್ತೊಬ್ಬರು "ಅಜ್ಜ ಬಿಳ್ತೀಯಾ ಮೆಲ್ಲಗೋಡು" ಎಂದು ಬರೆದಿದ್ದಾರೆ. ಇನ್ನೂ ಕೆಲವರು ಈ ಕಾಮೆಂಟ್‌ಗಳನ್ನು ಮೆಚ್ಚಿ ನಗಾಡಿದ್ದಾರೆ. "ಹೀಗೆ ಹೆಣ್ಮಕ್ಳು ಹಿಂಬಾಲಿಸಿ ಗಂಡಸರು ಹಾಳಾಗಿ ಹೋದರು" ಎಂದು ಬರೆದಿದ್ದಾರೆ. "ಏನ್ ಮಾಡಿದೋ ಅಜ್ಜ ಅಂಥಾದ್ದು?", "ಹಿಡಿರಿ... ಹಿಡಿರಿ.. ಹಿಡಿರಿ..." ಅಜ್ಜನ ಗ್ರೇಟ್ ಎಸ್ಕೆಪ್ ಬಗ್ಗೆ ಕಾಮೆಂಟ್‌ ಗಳು ಬಂದಿವೆ.

Recommended Video

      2021 ರಲ್ಲಿ ನಮ್ಮನ್ನು ಅಗಲಿದ ಮಹಾನ್ ಸಾಧಕರ ನೆನಪು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+