ಕುಸ್ತಿಪಟುಗಳ ಪ್ರತಿಭಟನೆ: ಎಂಎಸ್ ಧೋನಿಗೆ ಅಭಿನಂದಿಸಿದ ಸಾಕ್ಷಿ ಮಲ್ಲಿಕ್ ಟ್ವೀಟ್‌ನಲ್ಲಿ ಏನಿದೆ?

ದೆಹಲಿ ಮೇ 30: ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕ ಆರೋಪಿ ಬಂಧನಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಲ್ಲಿ ಒಬ್ಬರಾದ ಸಾಕ್ಷಿ ಮಲ್ಲಿಕ್ ಹೀಗೊಂದು ಟ್ವೀಟ್ ಮಾಡಿದ್ದಾರೆ.

'ಎಂಎಸ್ ಧೋನಿ ಮತ್ತು ಸಿಎಸ್‌ಕೆಗೆ ಅಭಿನಂದನೆಗಳು. ಕನಿಷ್ಠ ಕೆಲವು ಕ್ರೀಡಾ ಪಟುಗಳಿಗೆ ಅರ್ಹವಾದ ಗೌರವ ಮತ್ತು ಪ್ರೀತಿ ಸಿಗುತ್ತಿದೆ ಎಂದು ನಾವು ಸಂತೋಷಪಡುತ್ತೇವೆ. ನಮಗೆ, ನ್ಯಾಯಕ್ಕಾಗಿ ಹೋರಾಟ ಇನ್ನೂ ನಡೆಯುತ್ತಿದೆ' ಎಂದು ಟ್ವೀಟ್ ಮೂಲಕ ಸಾಕ್ಷಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ, ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ.

Wrestlers protest: Whats in Sakshi Malliks tweet congratulating MS Dhoni?

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದರೂ ಅವರ ವಿರುದ್ಧ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಅವರ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಇತರರು ಪ್ರತಿಭಟಿಸುತ್ತಿದ್ದಾರೆ.

ನಾರಿಶಕ್ತಿ ಎಂಬುದಾಗಿ ಹೆಣ್ಣು ಮಕ್ಕಳನ್ನು ಹೊಗಳುವ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಮೌನ ವಹಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪಿ ರಾಜಾರೋಷವಾಗಿ ಓಡಾಡಿಕೊಂಡಿದ್ದರೆ, ಇತ್ತ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಅಷ್ಟೇ ಅಲ್ಲ ಅನೇಕ ಕ್ರೀಡಾಪಟುಗಳು ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲವನ್ನೇ ನೀಡಿಲ್ಲ. ಮಾತ್ರವಲ್ಲ ನಮ್ಮಲ್ಲಿ ಎಷ್ಟೋ ಸಿನಿಮಾಗಳು ಕ್ರೀಡೆಗೆ ಪ್ರೋತ್ಸಾಹಿಸಿವೆ. ಸ್ಟಾರ್ ನಟರು ಕುಸ್ತಿ, ಹಾಕಿ, ಕ್ರಿಕೆಟ್‌ ಮಹಿಳಾ ಕ್ರೀಡಾಪಟುಗಳ ಶಕ್ತಿ ಸಾಮಾರ್ಥ್ಯವನ್ನು ಪ್ರದರ್ಶಿಸುವ ಮೂಲಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂತಹ ಹಲವಾರು ಸಿನಿಮಾಗಳು ಜನಪ್ರಿಯಯವಾಗಿ ಹೊರಹೊಮ್ಮಿವೆ.

Wrestlers protest: Whats in Sakshi Malliks tweet congratulating MS Dhoni?

ಜನಮನ್ನಣೆ ಪಡೆದ ಇಂತಹ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟರಾದ ಶಾರುಖ್‌ ಖಾನ್, ಅಮೀರ್ ಖಾನ್ ಹಾಗೂ ನಟಿಯರು ಕುಸ್ತಿಪಟುಗಳ ಕೂಗಿಗೆ ಈವರೆಗೂ ಕಿವಿ ಕೊಟ್ಟಿಲ್ಲ. ಹಾಗಾದರೆ ಸಿನಿಮಾಗಳು ಕೇವಲ ನಟನೆಗೆ ಮಾತ್ರಾನಾ? ಇಂತಹ ಸಿನಿಮಾಗಳು ಕೇವಲ ನೋಡಿ ಚೆನ್ನಾಗಿದೆ ಅನ್ನೋದಕ್ಕೆ ಮಾತ್ರ ಸೀಮಿತನಾ? ಸಿನಿಮಾಗಳನ್ನು ನಿರ್ಮಾಣ ಮಾಡುವವರು, ಸಿನಿಮಾಗಳಲ್ಲಿ ನಟಿಸುವವರು, ಪ್ರೋತ್ಸಾಹ ನೀಡಿ ಎಂದು ಸಂದೇಶವನ್ನು ಸಾರುವವರು ನಿಜವಾಗಲೂ ಮಾಡುತ್ತಿರುವುದೇನು ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಬಾಲಿವುಡ್‌ನಲ್ಲಿ ಚಕ್‌ ದೇ ಇಂಡಿಯಾ, ಛಲಾಂಗ್, ದಂಗಲ್, ಜಾದುಗರ್, ಎಂಎಸ್‌ ಧೋನಿ, ಸೈನಾ, ಶಾಭಾಷ್ ಮಿಟ್ಟು (Shabasah) ಇಂತಹ ಹಲವಾರು ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳು ಬಂದಿವೆ. ಜನ ಕೂಡ ಇಂತಹ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗಳನ್ನು ನೋಡಿದ ಅದೆಷ್ಟೋ ಜನ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಲು ಸಮರ್ಥರು, ಸಬಲರು, ಬಲವುಳ್ಳವರು ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೂ ಮಹಿಳೆಯರು ಕ್ರೀಡೆಯಲ್ಲಿ ಹಿಂದುಳಿಯುವುದಕ್ಕೆ ಹಲವಾರು ಕಾರಣಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆಗಳು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಸಿನಿಮಾಗಳಲ್ಲೂ ಬಯಲಿಗೆಳಿಯಲಾಗಿದೆ. ಮಹಿಳೆಯರ ಏಳಿಗೆಗೆ, ಅವರ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವ ಸಿನಿಮಾಗಳು, ಸರ್ಕಾರಗಳು, ಕ್ರೀಡಾಪಟುಗಳು ಮಹಿಳೆಯರಿಗೆ ಆಗುವ ಸಮಸ್ಯೆಗಳ ಬಗ್ಗೆ ಕಿವಿ ಕೊಡದೇ ಇದ್ದರೆ ಇದು ಅಸಡ್ಡೆ ಅನ್ನದೇ ಇನ್ನೇನನ್ನಲು ಸಾಧ್ಯ?

ದೆಹಲಿಯ ಜಂತರ ಮಂತರ್‌ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರವಾಗಲಿ, ಸ್ಟಾರ್‌ ನಟರಾಗಲಿ, ಬೇರೆ ಕ್ರೀಡಾಪಟುಗಳಾಗಿಲಿ ಬೆಂಬಲಕ್ಕೆ ನಿಂತಿಲ್ಲ. ಮಹಿಳಾ ಕ್ರೀಡಾಪಟುಗಳು ತೊಂದರೆಯಲ್ಲಿರುವಾಗ ಒಬ್ಬ ಕ್ರೀಡಾಪಟುವಾಗಿ, ಒಬ್ಬ ಮಹಿಳೆಯಾಗಿ ಅಥವಾ ಒಬ್ಬ ಮನುಷ್ಯನಾಗಿ ಬೆಂಬಲವನ್ನು ಸೂಚಿಸದೇ ಇದ್ದರೆ ಇದು ನಾವು ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಮಾಡಿದ ಅವಮಾನ ಅಲ್ಲದೇ ಇನ್ನೇನು? ನೆರೆಯವರು ನಮ್ಮೊಂದಿಗೆ ಜಗಳಕ್ಕೆ ನಿಂತರೆ ಮನೆಯವರೇ ನಮ್ಮ ಸಹಕಾರಕ್ಕೆ ಬರದೇ ಹೋದರೆ ಹೇಗಿರುತ್ತೆ? ಇದು ಸದ್ಯ ಕುಸ್ತಿಪಟುಗಳಿಗೆ ಆದ ಬೇಸರ.

ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಏಪ್ರಿಲ್ 23 ರಿಂದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ವಯಸ್ಕ ಸೇರಿದಂತೆ ಹಲವಾರು ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದಿಯೇ ಹೊರತು ಅವರ ವಿಚಾರಣೆಯಾಗಲಿ, ಕ್ರಮವಾಗಲಿ, ಬಂಧನವಾಗಲಿ ಮಾಡಿರುವುದು ಕಂಡು ಬಂದಿಲ್ಲ.

ನಮ್ಮ ದೇಶದಲ್ಲಿ ಅತ್ಯಾಚಾರ ಎಸಗಿದವರ ಮೇಲೆ ಎನ್‌ಕೌಂಟರ್‌ ಮಾಡಿದ ಘಟನೆಗಳು ನಡೆದಿವೆ. ಲೈಂಗಿಕ ಕಿರುಕುಳ ನೀಡಿದ್ದಾರೆನ್ನುವ ಆರೋಪಗಳ ನಡುವೆಯೂ ರಾಜಾರೋಷವಾಗಿ ಆರೋಪಿಗಳು ಹೊರಗುಳಿದ ಪ್ರಕರಣಗಳು ಇವೆ. ದೇಶಕ್ಕಾಗಿ ಶ್ರಮಿಸಿ, ದೇಶಕ್ಕಾಗಿ ಗೆಲುವು ಸಾಧಿಸಲು ನಿತ್ಯ ನಿಯಮಿತ ಆಹಾರ, ಜಿಮ್‌ಗಳಲ್ಲಿ ಕಸರತ್ತು ಮಾಡಿಕೊಂಡು ಕ್ರೀಡೆಯೇ ತಮ್ಮ ಜೀವನ ಎಂದುಕೊಂಡಿರುವ ಈ ಕ್ರೀಡಾಪಟುಗಳು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ದೇಶದ ಸುಪ್ರಸಿದ್ಧ ಕ್ರೀಡಾಪಟುಗಳೇ ನ್ಯಾಯಕ್ಕಾಗಿ ಈ ಮಟ್ಟದಲ್ಲಿ ಹೋರಾಡಿದರೆ, ಇನ್ನೂ ಸಾಮಾನ್ಯ ಮಹಿಳೆಯರ ಕಥೆ ಏನು? ಅವರು ಈ ರೀತಿ ಹೋರಾಡಲು ಸಾಧ್ಯವೆ? ಅವರಿಗೆ ನ್ಯಾಯ ಸಿಗುವುದನ್ನು ನಾವು ಊಹಿಸಿಕೊಳ್ಳಬಹುದೇ? ಇದಕ್ಕೆ ಕುಸ್ತಿಪಟುಗಳನ್ನು ಕಡೆಗಣಿಸುತ್ತಿರುವ ಪ್ರಧಾನಿ ಮೋದಿ, ಖ್ಯಾತ ನಟರು, ಕ್ರೀಡಾಪಟುಗಳೇ ಉತ್ತರ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+