ದೆಬ್ಬರ್ಮಾ ಅವರ ತಿಪ್ರಾ ಮೋಥಾ ಇಲ್ಲದಿದ್ದರೆ ತ್ರಿಪುರಾದಲ್ಲಿ ಬಿಜೆಪಿ ಗೆಲ್ಲುತ್ತಿತ್ತೇ?
ಪ್ರದ್ಯೋತ್ ದೆಬ್ಬರ್ಮಾ ಅವರ ತಿಪ್ರಾ ಮೋಥಾ ಪಕ್ಷ ಚುನಾವಣಾ ಕಣದಲ್ಲಿ ಇಲ್ಲದಿದ್ದರೆ ಕಾಂಗ್ರೆಸ್-ಎಡ ಮೈತ್ರಿಕೂಟವು ತ್ರಿಪುರಾ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆಲ್ಲಬಹುದಿತ್ತು
ನವದೆಹಲಿ, ಮಾರ್ಚ್ 4: ತ್ರಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಈಗಾಗಲೇ ಹೊರ ಬಂದು ಬಿಜೆಪಿ ಪಕ್ಷ 33 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಪಡೆದುಕೊಂಡಿದೆ. ಈ ಗೆಲುವಿಗೆ ಪರೋಕ್ಷವಾಗಿ ರಾಜಮನೆತನದ ಪ್ರದ್ಯೋತ್ ದೆಬ್ಬರ್ಮಾ ಅವರ ಪಕ್ಷ ತಿಪ್ರಾ ಮೋಥಾ ಕೂಡ ಒಂದು ಕಾರಣ ಎಂದು ವಿಶ್ಲೇಷಣೆಗಳು ತಿಳಿಸಿವೆ.
ಪ್ರದ್ಯೋತ್ ದೆಬ್ಬರ್ಮಾ ಅವರ ತಿಪ್ರಾ ಮೋಥಾ ಪಕ್ಷ ಚುನಾವಣಾ ಕಣದಲ್ಲಿ ಇಲ್ಲದಿದ್ದರೆ ಕಾಂಗ್ರೆಸ್-ಎಡ ಮೈತ್ರಿಕೂಟವು ತ್ರಿಪುರಾ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆಲ್ಲಬಹುದಿತ್ತು ಎಂದು ಮತ ಹಂಚಿಕೆಯ ವಿಶ್ಲೇಷಣೆ ತೋರಿಸುತ್ತದೆ.

ಮೇಲ್ನೋಟಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) 33 ಸ್ಥಾನಗಳನ್ನು ಗೆದ್ದಿದೆ. 60 ಸೀಟುಗಳಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತವನ್ನು ಗೆದ್ದಿದೆ. ಟಿಪ್ರಾ ಮೋಥಾ ಸ್ಪರ್ಧಿಸಿದ 42 ಸ್ಥಾನಗಳಲ್ಲಿ 13 ಗೆದ್ದಿದೆ. ಇವುಗಳಲ್ಲಿ 26 ಸ್ಥಾನಗಳು ಬಿಜೆಪಿಗೆ ಮತ್ತು ಮೂರು ಕಾಂಗ್ರೆಸ್-ಎಡ ಮೈತ್ರಿಕೂಟ ಗೆದ್ದಿದೆ.
ಆದಾಗ್ಯೂ ವಿಶ್ಲೇಷಣೆಯು 18 ಸ್ಥಾನಗಳಲ್ಲಿ ಎಡ ಪಕ್ಷಗಳು, ಕಾಂಗ್ರೆಸ್ ವಿರುದ್ಧ ಬಿಜೆಪಿ ಹೆಚ್ಚು ಸೀಟುಗಳ ಗೆಲುವಿನ ಅಂತರವು ಆ ಸ್ಥಾನಗಳಲ್ಲಿ ತಿಪ್ರಾ ಮೋಥಾದ ಮತ ಹಂಚಿಕೆಗಿಂತ ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಲೆಕ್ಕಾಚಾರದ ಪ್ರಕಾರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ಪ್ರದ್ಯೋತ್ ದೆಬ್ಬರ್ಮಾ ಅವರು ಪ್ರತ್ಯೇಕವಾಗಿ ಚುನಾವಣೆಗಳನ್ನು ಎದುರಿಸದಿರಲು ನಿರ್ಧರಿಸಿದ್ದರೆ ತ್ರಿಪುರಾ ಚುನಾವಣೆಯ ಫಲಿತಾಂಶವು ತುಂಬಾ ಭಿನ್ನವಾಗಿರುತ್ತಿತ್ತು.
ಪ್ರಸ್ತುತ ಕಾಂಗ್ರೆಸ್, ಎಡ ಪಕ್ಷಗಳು ಸ್ಪರ್ಧಿಸಿದ 60 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದಿದೆ. ಈ 18 ಸ್ಥಾನಗಳನ್ನು ಸೇರಿಸಿದರೆ ಈ ಸನ್ನಿವೇಶದಲ್ಲಿ ಬಿಜೆಪಿಯು ಮೂಲಭೂತವಾಗಿ ಕೇವಲ 14 ಸ್ಥಾನಗಳಿಗೆ ಇಳಿಯುವುದರೊಂದಿಗೆ ಸಂಪೂರ್ಣ ಬಹುಮತ ಬರುತ್ತಿತ್ತು. ಕಾಂಗ್ರೆಸ್‌ನಿಂದ ತ್ರಿಪುರಾ ರಾಜಮನೆತನದ ದೆಬ್ಬರ್ಮಾ ನಿರ್ಗಮಿಸಿದ ನಂತರ 2019 ರಲ್ಲಿ ಟಿಪ್ರಾ ಮೋಥಾವನ್ನು ರಚಿಸಲಾಯಿತು. ತಿಪ್ರಾ ರಾಜ್ಯದ ಬುಡಕಟ್ಟು ಪ್ರದೇಶದ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದು, ಒಟ್ಟು 20 ಸ್ಥಾನಗಳನ್ನು ಹೊಂದಿದೆ.

ಲೇಖಕ ಮತ್ತು ರಾಜಕೀಯ ವಿಶ್ಲೇಷಕ ಡಾ. ಪ್ರಸೇನ್‌ಜಿತ್ ಬಿಸ್ವಾಸ್ ಅವರ ಪ್ರಕಾರ, ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇತ್ತು. ಮತಗಳ ವಿಭಜನೆಯಿಂದಾಗಿ ಬಿಜೆಪಿ ಪಕ್ಷವು ಇದರ ಮೇಲೆ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಪಕ್ಷಗಳಲ್ಲಿ ಏಕತೆ ಇರಬೇಕಿತ್ತು. ಮಾತುಕತೆ ಸರಿಯಾಗಿಲ್ಲದ ಕಾರಣ ಅದು ಆಗಲಿಲ್ಲ. ಇಲ್ಲಿ ಮತಗಳು ತಿಪ್ರಾ ಮೋಥಾ ಮತ್ತು ಎಡ ಪಕ್ಷ, ಕಾಂಗ್ರೆಸ್ ನಡುವೆ ವಿಭಜನೆಗೊಂಡವು ಇದು ಬಿಜೆಪಿಗೆ ಲಾಭವನ್ನು ನೀಡಿತು ಎಂದು ಅವರು ಹೇಳಿದರು.
ಅವರ ಪ್ರಕಾರ, ಎಡಪಕ್ಷಗಳು ಮತ್ತು ಕಾಂಗ್ರೆಸ್ ತಿಪ್ರಾ ಮೋಥಾ ಮತ್ತು ಪ್ರತ್ಯೇಕ ಟಿಪ್ರಾಲ್ಯಾಂಡ್‌ನ ಬೇಡಿಕೆಯೊಂದಿಗೆ ಉತ್ತಮವಾಗಿ ಮಾತುಕತೆ ನಡೆಸಬಹುದಿತ್ತು. ಏಕೆಂದರೆ ಅದನ್ನು ತಕ್ಷಣವೇ ಅದನ್ನು ಮುಕ್ತವಾಗಿ ಬಿಡುವ ಬದಲು ವ್ಯವಹರಿಸುವ ಅಗತ್ಯವಿರಲಿಲ್ಲ. ಸ್ವಲ್ಪ ಮಟ್ಟಿಗೆ ಜನಾಂಗೀಯ ಧ್ರುವೀಕರಣವು ಬಿಜೆಪಿಗೆ ಅವರು ಕಡಿಮೆ ಅಂತರದಿಂದ ಗೆದ್ದಲ್ಲೆಲ್ಲಾ ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಈ ಸೋಲು ಪ್ರತಿಪಕ್ಷಗಳಿಗೆ ಒಗ್ಗಟ್ಟಾಗಿರುವುದರ ಮಹತ್ವದ ಪಾಠವಾಗಿದೆ. ಆದಾಗ್ಯೂ, ಅತ್ಯಂತ ಬಲವಾದ ವಿರೋಧ ಪಕ್ಷ ಹೊರಹೊಮ್ಮಿದೆ. ಚುನಾವಣೆ ನಂತರ ಅವರಲ್ಲಿ ಏಕತೆ ಇರುತ್ತದೆ ಎಂದು ಡಾ ಬಿಸ್ವಾಸ್ ಹೇಳಿದರು.












Click it and Unblock the Notifications