Richest Beggar Bharat Jain: ಈ ಶ್ರೀಮಂತ ಭಿಕ್ಷುಕನ ಆದಾಯ ಬರೊಬ್ಬರಿ ₹7.5 ಕೋಟಿ
ನವದೆಹಲಿ, ಜುಲೈ 23: ಸಾಮಾನ್ಯವಾಗಿ 'ಭಿಕ್ಷುಕ'ರೆಂದರೆ ದಿನದ ಮೂರು ಹೊತ್ತು ಊಟ ಸಿಗದೇ, ಬಿಡಿಗಾಸಿಗೆ ಇಡೀ ದೀನ ರಸ್ತೆಗಳಲ್ಲಿ ಬೇಡುತ್ತಾ, ಸಿಕ್ಕಷ್ಟೆ ತಿನ್ನುತ್ತಾ, ಸ್ನಾನ, ಮನೆ ಕುಟುಂಬ ಇಲ್ಲದೇ ಓಡಾಡುತ್ತಿರುತ್ತಾರೆ. ಉದ್ದುದ್ದ ತಲೆಗೂದಲೂ-ಗಡ್ಡ ಬಿಟ್ಟುಕೊಂಡು, ರಸ್ತೆ ಬದಿ, ಬಸ್-ರೈಲು ನಿಲ್ದಾಣಗಳಲ್ಲಿ ಮಲಗಿರುತ್ತಾರೆ. ವಸತಿ, ಊಟಕ್ಕೆ ಗತಿ ಇಲ್ಲದವರ ಆರ್ಥಿಕ ಸ್ಥಿತಿಗತಿ ಹೇಗಿರಲು ಸಾಧ್ಯ ಎಂಬ ಆಯೋಚನೆ ಬರುತ್ತದೆ.
ಅದರೆ ನಾವೀಗ ಹೇಳುತ್ತಿರುವ ಈ ಭಿಕ್ಷುಕನ ಕತೆ ಬೇರೆ. ಆಗಾಗ ಸುದ್ದಿಯಲ್ಲಿರುವ ಈ ಭಿಕ್ಷುಕ ಅವರಿವರು ಕೊಡುವ ಧಾರಾಳ ಭೀಕ್ಷೆಯಿಂದಲೇ ಬದುಕು ನಡೆಸುವ ಜೊತೆಗೆ 'ವಿಶ್ವದ ಶ್ರಿಮಂತ ಭಿಕ್ಷುಕ ಎನ್ನಿಸಕೊಂಡಿದ್ದಾನೆ. ಮಾಸಿಕ ಸಾವಿರಾರು ರೂಪಾಯಿ ಸಂಗ್ರಹಿಸುತ್ತಾನೆ. ಈತ ಕೋಟ್ಯಂತರ ರೂಪಾಯಿ ನಿವ್ವಳ ಆದಾಯ ಹೊಂದಿದ್ದಾನೆ.

ಭಿಕ್ಷೆ ಬೇಡಿ ಹೊಟ್ಟೆಗಾದರೆ ಸಾಕು ಎನ್ನವವರ ಮಧ್ಯೆ, ಕೆಲವರು ತಮ್ಮ ಭಿಕ್ಷಾಟನೆಯಲ್ಲಿಯೇ ಯಶಸ್ವಿಯಾಗಿ ಅದನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸುವ ಮೂಲಕ ಹೊಸ ಹಂತಕ್ಕೆ ಕೊಂಡೊಯ್ದಿದ್ದಾರೆ. ಆ ಸಾಲಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನಾದ 'ಭರತ್ ಜೈನ್' ಜೈನ್ ಸಹ ಒಬ್ಬ.
ಕುಟುಂಬ ಹೊಂದಿರುವ ಮುಂಬೈ ಭಿಕ್ಷುಕ
ಮಾಧ್ಯಮಗಳ ವರದಿ ಪ್ರಕಾರ, ಭರತ್ ಜೈನ್ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಜನನಿಬಿಡ ಬೀದಿಗಳಲ್ಲಿ ಭಿಕ್ಷೆ ಬೇಡಿಕೊಂಡು ಬದುಕು ಸಾಗಿಸುತ್ತಾರೆ. ಮುಂಬೈನ ಬೀದಿಗಳಲ್ಲಿ ಈತನನ್ನು ನೋಡಬಹುದು. ಈತ ಒಬ್ಬಂಟಿಯಲ್ಲ. ವಿವಾಹಿತರಾದ ಜೈನ್ ಗೆ ಕುಟುಂಬ ಇದೆ. ಜೈನ್‌ಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಅವರ ಸಹೋದರ ಮತ್ತು ಅವರ ತಂದೆ ಇದ್ದಾರೆ.
ಜೈನ್ ಬಾಲ್ಯದಲ್ಲಿದ್ದಾಗ ಆತನಿಗೆ ಬಂದೊದಗಿದ ಹಣಕಾಸಿನ ಅಸ್ಥಿರತೆಯಿಂದಾಗಿ ಆತ ಬಾಲ್ಯದಲ್ಲಿ ಔಪಚಾರಿಕ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ.

ಭರತ್ ಜೈನ್ 7.5 ಕೋಟಿ ನಿವ್ವಳ ಮೌಲ್ಯ
ವರದಿಗಳ ಪ್ರಕಾರ ಭರತ್ ಜೈನ್ ಸದ್ಯ 7.5 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾನೆ. ಭಿಕ್ಷಾಟನೆಯಿಂದ ಆತನ ಮಾಸಿಕ ಆದಾಯ 60,000 ರಿಂದ 75,000 ರೂಪಾಯಿವರೆಗೆ ಇದೆ ಎಂದು ವರದಿ ಆಗಿದೆ. ಮುಂಬೈನ ಥಾಣೆಯಲ್ಲಿ ತಿಂಗಳಿಗೆ 30,000 ರೂಪಾಯಿಯ ಎರಡು ಚಿಲ್ಲರೆ ಸಂಸ್ಥೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ 1.2 ಕೋಟಿ ಮೌಲ್ಯದ 2BHK ಮನೆ (ಫ್ಲಾಟ್) ಹೊಂದಿದ್ದಾನೆ.
ಇಷ್ಟೊಂದು ಆಸ್ತಿ ಮಾಲೀಕರಾಗಿದ್ದರೂ ಭರತ್ ಜೈನ್ ಮುಂಬೈನ ಆಜಾದ್ ಮೈದಾನ ಅಥವಾ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಂತಹ ಪ್ರಸಿದ್ಧ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದನ್ನು ಮುಂದುವರಿಸಿದ್ದಾನೆ. ನಗರದಲ್ಲಿ ಹಲವರಿಗೆ ದೀರ್ಘಾವಧಿ ಕೆಲಸ ಮಾಡಿ ನೂರು ರೂಪಾಯಿ ಗಳಿಸುವುದು ಕಷ್ಟವಾಗಿದ್ದರೆ, ಜೈನ್ ಭಾರತೀಯರ ದಯೆಯಿಂದ 10 ರಿಂದ 12 ಗಂಟೆಗಳಲ್ಲಿ ದಿನಕ್ಕೆ 2,000 ರಿಂದ 2,500 ರೂಪಾಯಿ ಸಂಗ್ರಹಿಸುತ್ತಾನೆ\ಗಳಿಸುತ್ತಾನೆ ಎಂದು ತಿಳಿದು ಬಂದಿದೆ.
ಇಲ್ಲಿನ ಪರೇಲ್‌ನಲ್ಲಿರುವ 1 BHK ಡ್ಯುಪ್ಲೆಕ್ಸ್ ನಿವಾಸವು ಜೈನ್ ಕುಟುಂಬ ವಾಸವಿದೆ. ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಜೈನ್ ಸಂಬಂಧಿಕರು ಸ್ಟೇಷನರಿ ಅಂಗಡಿ ಮಾಲೀಕರಾಗಿದ್ದಾರೆ. ಮಕ್ಕಳು, ಕುಟುಂಸ್ಥರು ಭಿಕ್ಷೆ ಬೇಡುವುದನ್ನು ನಿಲ್ಲಿಸುವಂತೆ ಪರಿ ಪರಿಯಾಗಿ ಹೇಳಿದರೂ ಸಹಿತ ತಮ್ಮ ಕಾಯಕ ಬಿಡದೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಆಗಾಗ ಸುದ್ದಿಯಲ್ಲಿರುವ ವಿಶ್ವದ ಶ್ರೀಮಂತ ಭಿಕ್ಷುಕರು
ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್ ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. 2015 ರಲ್ಲಿ ಸಹ ಮಾಧ್ಯಮಗಳಲ್ಲಿ ಜೈನ್ ಮೊದಲ ಬಾರಿಗೆ ಸುದ್ದಿ ಆದ. ಆ ವೇಳೆ ಆತನ ಮಾಸಿಕ ಆದಾಯ ಸುಮಾರು 70,000 ರೂ. ಆಗಿತ್ತು. ಈ ಕಾರಣದಿಂದ ಈತ ಆಗಾಗ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬರುತ್ತಿದ್ದಾನೆ.
2019 ರಲ್ಲಿ ಬುರ್ಜು ಚಂದ್ರ ಆಜಾದ್ ಎಂಬ ಭಿಕ್ಷುಕ ಗೋವಂಡಿಯಲ್ಲಿ ರೈಲು ಹಳಿಗಳನ್ನು ದಾಟುತ್ತಿದ್ದಾಗ ಸಾವನ್ನಪ್ಪಿದ. ಆತನ ಮರಣ ನಂತರ ಪೊಲೀಸರು ಅವನ ಮನೆಗೆ ತೆರಳಿದಾಗಿ ಅವರಿಗೆ 1.5 ಲಕ್ಷ ರೂಪಾಯಿ ನಗದು ಪತ್ತೆ ಆಗಿತ್ತು. ಅವೆಲ್ಲವರು ಬಹುತೇಕ ನಾಣ್ಯಗಳೆ ಆಗಿದ್ದವು. ತನಿಖೆ ಮುಂದುವರಿಸಿದಾಗ ಆಜಾದ್ ಹೆಸರಿನಲ್ಲಿ ಬ್ಯಾಂಕ್ ನಲ್ಲಿ 8.7 ಲಕ್ಷಕ್ಕೂ ಅಧಿಕ ಬ್ಯಾಂಕ್ ಠೇವಣಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ಮತ್ತೊಬ್ಬ ಪ್ರಸಿದ್ಧ ಭಿಕ್ಷುಕ ಮುಂಬೈನ್ ಕೃಷ್ಣ ಕುಮಾರ್ ಗೀತೆ, ಈತ ನಲಾ ಸೋಪಾರಾದಲ್ಲಿ ಫ್ಲಾಟ್ ಹೊಂದಿದ್ದಾನೆ. ಈತನ ನಂತರ ಪಾಟ್ನಾದ ಸರ್ವತಿಯಾ ದೇವಿ ಮತ್ತು ಸೋಲಾಪುರದ ಸಂಭಾಜಿ ಕಾಳೆ. ಈ ವ್ಯಕ್ತಿಗಳು ವೃತ್ತಿಯಲ್ಲಿ ಭಿಕ್ಷೆ ಬೇಡುತ್ತಿದ್ದು, ತಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಮತ್ತು ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications