ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೊಂದೇ ಭೂಮಿ: ರಕ್ಷಣೆ ನಮ್ಮೆಲ್ಲರ ಹೊಣೆ

ಇಂದು ವಿಶ್ವ ಭೂಮಿ ದಿನ. 'ಪರಿಸರ ಮತ್ತು ಹವಾಮಾನ ಸಾಕ್ಷರತೆ' ಎಂಬುದು ಈ ಬಾರಿಯ ಭೂಮಿ ದಿನದ ಘೋಷ ವಾಕ್ಯ.

|
Google Oneindia Kannada News

ಪ್ರತಿಯೊಬ್ಬ ಮನುಷ್ಯನ ಬದುಕೂ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ. ಭೂಮಿಯಿಲ್ಲದೆ ಬದುಕಿಲ್ಲ ಎಂಬುದನ್ನು ಒಪ್ಪುವುದಾದರೆ ಕನಿಷ್ಠಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಲೇಬೇಕಾಗುತ್ತದೆ!

ಹೌದು, ಇಂದು ವಿಶ್ವ ಭೂಮಿ ದಿನ. ಸಮಸ್ತ ಜೀವ ಕುಲಕ್ಕೂ ಆಸರೆ ನೀಡಿದ, ಅಡಿಗಡಿಗೆ ಪೊರೆಯುತ್ತಿರುವ, ಕ್ಷಮಯಾ ಧರಿತ್ರಿಯನ್ನು ಜತನದಿಂದ ನೋಡಿಕೊಳ್ಳುವ ಶಪಥ ಮಾಡುವುದಕ್ಕೆ ಇದು ಸುದಿನ.

'ಪರಿಸರ ಮತ್ತು ಹವಾಮಾನ ಸಾಕ್ಷರತೆ' ಎಂಬುದು ಈ ಬಾರಿಯ ಭೂಮಿ ದಿನದ ಘೋಷ ವಾಕ್ಯ. ಭೂಮಿಯನ್ನು ಮಾಲಿನ್ಯಮುಕ್ತಗೊಳಿಸುವುದಕ್ಕಾಗಿ, ಸ್ವಚ್ಛ-ಸುಂದರ ಪರಿಸರವನ್ನು ಎಲ್ಲೆಡೆ ನೆಲೆಗೊಳಿಸುವುದಕ್ಕಾಗಿ ಪ್ರತಿವರ್ಷ ನಡೆಯುವ ಈ ಆಚರಣೆ ನಿಜಕ್ಕೂ ಫಲ ಕೊಟ್ಟಿದೆಯಾ?[ವಿಶ್ವ ಭೂ ದಿನಾಚರಣೆ ಸಂಭ್ರಮದ ಕ್ಷಣಗಳು]

ಕೈಗಾರಿಕೆಗಳು, ಮತ್ತಿತರ ತಂತ್ರಜ್ಞಾನಗಳಿಂದ ಭೂಮಾಲಿನ್ಯವಾಗುತ್ತಿರುವುದನ್ನು ಖಂಡಿಸಿ 1970 ಅಮೆರಿಕದಲ್ಲಿ ಬೃಹತ್ ಚಳವಳಿ ನಡೆದಿತ್ತು. ನಂತರ ಜನರ ಅಭಿಪ್ರಾಯಗಳನ್ನು ಮನ್ನಿಸಿದ ಇಲ್ಲಿನ ಸರ್ಕಾರ ಮಾಲಿನ್ಯ ನಿಯಂತ್ರಣದತ್ತ ಧನಾತ್ಮಕ ಪ್ರತಿಕ್ರಿಯೆ ನೀಡಿತ್ತು.[ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!]

ಭೂಮಿಗಾಗಿ ನಡೆದ ಜನ ಚಳವಳಿಗೆ, ಸರ್ಕಾರ ಬೆಂಬಲ ಸೂಚಿಸಿದ ನೆನಪಿಗಾಗಿ ಏಪ್ರಿಲ್ 22 ನ್ನು ವಿಶ್ವ ಭೂಮಿ ದಿನ ಎಂದು ಆಚರಿಸಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಸಿರುಮನೆ ಪರಿಣಾಮದಿಂದಾಗಿ, ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ. ಆದ್ದರಿಂದ ಭೂಮಿಯ ರಕ್ಷಣೆ ಇಂದು ಅಗ್ರ ಆದ್ಯತೆಯಾಗಿದೆ.
ಇಂದು ವಿಶ್ವ ಭೂಮಿ ದಿನದ ಪ್ರಯುಕ್ತ ಪ್ರಧಾನಿ ಮೋದಿಯಾದಿಯಾಗಿ ಹಲವರು ಟ್ವಿಟ್ಟರ್ ನಲ್ಲಿ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.[ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟು!]

Array

ಸಾಮರಸ್ಯ ಕಾಯ್ದುಕೊಳ್ಳೋಣ

ನಮ್ಮೊಂದಿಗೆ ಭೂಮಿಯನ್ನು ಹಂಚಿಕೊಂಡ ಮರ-ಗಿಡಗಳು, ಪ್ರಾಣಿ-ಪಕ್ಷಿಗಳೊಂದಿಗೆ ಸಾಮರಸ್ಯದಿಂದ ಬದುಕುವುದು ನಮ್ಮ ಭವಿಷ್ಯಕ್ಕೇ ಒಳ್ಳೆಯದು ಎಂದು ಇಂದು ಪ್ರಧಾನಿ ಮೋದಿ ಸಹ ಟ್ವೀಟ್ ಮಾಡಿದ್ದಾರೆ. ವಿಶ್ವ ಭೂಮಿ ದಿನದೊಂದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವನ್ನು ನೆನಪಿಸಿದ್ದಾರೆ.[ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!]

ನಮಗೆ ದಿನವನ್ನು ಕೊಟ್ಟ ಭೂಮಿಗೆ ನಮ್ಮ ಸೇವೆ!

ಭೂಮಿ ಒಂದು ಬಾರಿ ಚಲಿಸಿದರೆ ಒಂದು ದಿನವಾಗುತ್ತದೆ. ಅಂದರೆ ನಮಗೆ ಈ ದಿನವನ್ನು ಕೊಟ್ಟಿದ್ದೂ ಭೂಮಿ. ನಮಗೆ ಪ್ರತಿದಿನವನ್ನೂ ಕೊಡುತ್ತಿರುವ ಭೂಮಿಗೆ ನಾವು ಕಾಳಜಿ ತೋರುವುದು ಅಗತ್ಯ ಎಂದು ಸದ್ಗುರು ಜಗ್ಗಿ ವಾಸುದೇವ ಅವರು ಟ್ವೀಟ್ ಮಾಡಿದ್ದಾರೆ.[ಸೌರಮಂಡಲ ಸಮೀಪವೇ ಇದೆ ಮತ್ತೊಂದು ಭೂಮಿ!]

ಮಳೆಕಾಡುಗಳೇ ನಾಶವಾಗಿವೆ

ಭೂಮಿಯನ್ನು ರಕ್ಷಿಸಬಹುದಾದರೆ ಅದು ನಮ್ಮಿಂದ ಮಾತ್ರ ಸಾಧ್ಯ. ಜಗತ್ತಿನ ಅರ್ಧಕ್ಕಿಂತ ಹೆಚ್ಚು ಹೆಚ್ಚು ಮಳೆಕಾಡುಗಳು ಈಗಾಗಲೇ ನಾಶವಾಗಿವೆ. ಉಳಿಸಲು ಈಗಿನಿಂದಲೇ ಪಣತೊಡಿ ಎಂದು ಟಿಯೋ ಫಂಡಾ ಎಂಬ ಖಾತೆಯಿಂದ ಟ್ವೀಟ್ ಮಾಡಿ ತಮ್ಮ ಕಾಳಜಿ ವ್ಯಕ್ತಪಡಿಸಲಾಗಿದೆ.

ನಮ್ಮ ತಾಯಿಯಂಥ ಭೂಮಿಯನ್ನು ರಕ್ಷಿಸೋಣ

ಭೂಮಿ ನಮ್ಮ ತಾಯಿ. ಆದರೆ ನಾವೆಲ್ಲ ಆಕೆಯ ಮಕ್ಕಳಾಗಿ, ಆಕೆಯನ್ನು ಕಾಪಾಡುವ ಬದಲು, ಆಕೆಗೆ ದಿನಂಪ್ರತಿ ನೋವು ಕೊಡುತ್ತಿದ್ದೇವೆ. ನಮ್ಮ ತಾಯಿಯ ಕುರಿತು ನಾವು ಕಾಳಜಿ ತೋರಿಸುವುದು ಅತ್ಯಂತ ಅಗತ್ಯ ಕಾರ್ಯ ಎಂದು ಪ್ರಶಾಂತ್ ನಿಗಮ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಮುಂದಿನ ಪೀಳಿಗೂ ಇರಲಿ ಭೂಮಿ!

ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಸುಂದರವಾಗಿರುವುದಕ್ಕಾಗಿ ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸ ಬೇಕಿದೆ. ಅದಕ್ಕೆಂದು ವಿಶ್ವ ಭೂಮಿ ದಿನದಂದು ಶಪಥ ಮಾಡೋಣ ಎಂದು ಗೋ ಗ್ರೀನ್ ಟ್ವೀಟ್ ಮಾಡಿದೆ.

English summary
Whole world is celebrating earth day on 22nd April, today. Environmental and Climate Literacy is the theme of 2017 earth day. Prime minister Narendra Modi also reminds everyone's responsibility to protect our planet earth. Here are some Tweets on earth day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X